ಶಾರದಾಂಬೆ ದರ್ಶನ; ಸ್ವಾಮೀಜಿ ಪಾದಗಳ ಬಳಿ ನಾಮಪತ್ರ ಇಟ್ಟು ಅನುಗ್ರಹ ಬೇಡಿದ ಅನಿತಾ

7

ಶಾರದಾಂಬೆ ದರ್ಶನ; ಸ್ವಾಮೀಜಿ ಪಾದಗಳ ಬಳಿ ನಾಮಪತ್ರ ಇಟ್ಟು ಅನುಗ್ರಹ ಬೇಡಿದ ಅನಿತಾ

Published:
Updated:
Deccan Herald

ಚಿಕ್ಕಮಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಅವರು ಶುಕ್ರವಾರ ಶೃಂಗೇರಿಯಲ್ಲಿ ಶಾರದಾಂಬೆ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

ಧರ್ಮಸ್ಥಳದಿಂದ ಶೃಂಗೇರಿಗೆ ಬಂದ ಅವರು ಶಾರದಾ ಮಠದ ಭಾರತೀ ತೀರ್ಥ ಸ್ವಾಮೀಜಿ ಮತ್ತು ವಿಧುಶೇಖರ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. 

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿರುವ ಅನಿತಾ ದೇಗುಲ ದರ್ಶನ, ಪೂಜೆ ಸಲ್ಲಿಸಿ ದೇವರ ಅನುಗ್ರಹಕ್ಕೆ ಪ್ರಾರ್ಥಿಸಿದ್ದಾರೆ. ನಾಮಪತ್ರವನ್ನು ಸ್ವಾಮೀಜಿಯ ಪಾದಗಳ ಬಳಿ ಇಟ್ಟು ಅನುಗ್ರಹ ಬೇಡಿದ್ದಾರೆ.

ಶಾರದಾಂಬೆಗೆ ವಿಶೇಷ ಪೂಜಾ ಕೈಂಕರ್ಯ ಸಲ್ಲಿಸಿದರು. ನಂತರ ತೋರಣ ಗಣಪತಿ, ಶಕ್ತಿ ಗಣಪತಿ ದೇಗುಲಗಳಲ್ಲಿ ಪೂಜೆ ಸಲ್ಲಿಸಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !