ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಾಜೀವನ ತೃಪ್ತಿ ತಂದಿದೆ: ಯಡಗೆರೆ ವೆಂಕಟರಮಣ

Published : 10 ಸೆಪ್ಟೆಂಬರ್ 2024, 13:49 IST
Last Updated : 10 ಸೆಪ್ಟೆಂಬರ್ 2024, 13:49 IST
ಫಾಲೋ ಮಾಡಿ
Comments

ಕಮಲಾಪುರ(ಎನ್.ಆರ್.ಪುರ): ಕಳೆದ ಐದು ದಶಕಗಳಿಂದ ಯಡಗೆರೆ ವೆಂಕಟರಮಣ  ಕಲಾವಿದರಾಗಿ ಹಾಗೂ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಶಿವಮೊಗ್ಗ ಮ್ಯಾಮ್ಕೋಸ್ ನಿರ್ದೇಶಕ ಯಡಗೆರೆ ಸುಬ್ರಹ್ಮಣ್ಯ ಹೇಳಿದರು.

ಇಲ್ಲಿನ ಗಣೇಶೋತ್ಸವ ಸಮಿತಿ ವತಿಯಿಂದ ಯಡಗೆರೆ ವೆಂಕಟರಮಣ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಗಣೇಶೋತ್ಸವ ಸಮಿತಿಯವರು ಅವರಿಗೆ ಸನ್ಮಾನ ಮಾಡಿರುವುದು ಸೂಕ್ತವಾಗಿದೆ ಎಂದರು.

ಯಡಗೆರೆ ವೆಂಕಟರಮಣ ಮಾತನಾಡಿ, ‘50 ವರ್ಷಗಳಲ್ಲಿ ಪ್ರಾಮಾಣಿಕತೆಯಿಂದ ಜವಬ್ದಾರಿಯನ್ನು ನಿರ್ವಹಿಸಿದ್ದೇನೆ. 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಚಿಕ್ಕಂದಿನಿಂದಲೇ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು, ಕಲಾ ಜೀವನ ತೃಪ್ತಿ ತಂದಿದೆ’ ಎಂದರು.

ಕಮಲಾಪುರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎ.ವಿ.ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು.

ವೆಂಕಟರಮಣ ಅವರ ಪತ್ನಿ ವೈ.ವಿ.ಲೋಲಾಕ್ಷಿ, ಸಮಿತಿಯ ಕಾರ್ಯದರ್ಶಿ ಮಂಜುನಾಥ್, ಯಡಗೆರೆ ಮಂಜುನಾಥ್, ವಿಕಾಸ್ ಇದ್ದರು. ಹಿರೇನಲ್ಲೂರು ಶ್ರೀನಿವಾಸ್ ಅವರು ಗ್ರಾಮಸ್ಥರಿಗೆ ಅಂತ್ಯಾಕ್ಷರಿ ಸ್ಪರ್ಧೆ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT