ರಾಷ್ಟ್ರೀಯ ಟೂರ್ನಿಯಲ್ಲಿ 19 ಪದಕ

7
ಆಶಾಕಿರಣ ಅಂಧಮಕ್ಕಳ ಪಾಠಶಾಲೆ ವಿದ್ಯಾರ್ಥಿಗಳ ಸಾಧನೆ

ರಾಷ್ಟ್ರೀಯ ಟೂರ್ನಿಯಲ್ಲಿ 19 ಪದಕ

Published:
Updated:
Deccan Herald

ಚಿಕ್ಕಮಗಳೂರು: ನವದೆಹಲಿಯಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಟೂರ್ನಿಯಲ್ಲಿ ನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯ ವಿದ್ಯಾರ್ಥಿಗಳು 10 ಚಿನ್ನ, ಮೂರು ಬೆಳ್ಳಿ ಹಾಗೂ 6 ಕಂಚು ಒಟ್ಟು 19 ಪದಕಗಳನ್ನು ಗೆದ್ದು ಕೀರ್ತಿ ತಂದಿದ್ದಾರೆ.

ಜಿ.ಆರ್‌.ಪ್ರಮೀಳಾ– 800 ಮೀಟರ್‌ ಓಟದಲ್ಲಿ ಚಿನ್ನ, 100 ಮೀ ಮತ್ತು 400 ಮೀ– ಕಂಚು, ಆರ್‌. ರಕ್ಷಿತಾ– 400 ಮೀ– ಚಿನ್ನ, ವಿ.ರಾಧಾ– 1500 ಮೀ ಮತ್ತು 400 ಮೀ– ಚಿನ್ನ, ಎ.ಪುನೀತ್‌– 800 ಮೀ ಮತ್ತು 400 ಮೀ– ಚಿನ್ನ, ಅಭಿಜಿತ್‌– 400 ಮೀ– ಚಿನ್ನ ಮತ್ತು 800 ಮೀ– ಬೆಳ್ಳಿ, ಸೂರ್ಯ– 400 ಮೀ– ಬೆಳ್ಳಿ– ಶರತ್‌– 5000 ಮೀ ಹಾಗೂ 1500 ಮೀ– ಚಿನ್ನ, ಕೇಶವಮೂರ್ತಿ– 1500 ಮೀ– ಚಿನ್ನ, ಎಂ.ಪಿ.ನರಸರಾಜ– 400 ಮೀ– ಬೆಳ್ಳಿ ಹಾಗೂ ಕೇಶವಮೂರ್ತಿ, ಶರತ್‌, ಸೂರ್ಯ, ನರಸರಾಜ ಅವರು 4X400 ಮೀ ರಿಲೇಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಇಂಡಿಯನ್‌ ಬ್ಲೈಂಡ್‌ ಸ್ಪೋರ್ಟ್ಸ್‌ ಅಸೋಸಿಯೇಷನ್‌ ವತಿಯಿಂದ ಇದೇ 10ರಿಮದ 13ರವರೆಗೆ ನವದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಿತು. 17 ವರ್ಷದೊಳಗಿವರು (ಜೂನಿಯರ್‌) ಮತ್ತು 17 ವರ್ಷದ ತುಂಬಿದವರು (ಸೀನಿಯರ್‌) ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಆಶಾಕಿರಣ ಪ್ರೌಢಶಾಲೆ ಮತ್ತು ಪಿಯುಸಿ 24 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಕೋಚ್‌ ರಾಹುಲ್‌ ಬಾಲಕೃಷ್ಣ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !