ಶುಕ್ರವಾರ, ಡಿಸೆಂಬರ್ 13, 2019
19 °C

 ಕರ್ತವ್ಯನಿರತ ಎಎಸ್‌ಐ ಕುಸಿದುಬಿದ್ದು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ತಾಲ್ಲೂಕಿನ ಬಾಬಾಬುಡನ್‌ಗಿರಿ ಶ್ರೇಣಿಯ ಇನಾಂ ದತ್ತಪೀಠದ ಔಟ್‌ಪೋಸ್ಟ್‌ನಲ್ಲಿ ಕರ್ತವ್ಯನಿರತ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ (ಎಎಸ್‌ಐ) ಜಗದೀಶ್‌(57) ಕುಸಿದುಬಿದ್ದು ಭಾನುವಾರ ಸಂಜೆ ಮೃತಪಟ್ಟಿದ್ದಾರೆ.

ಮಲ್ಲಂದೂರು ಠಾಣೆ ಎಎಸ್‌ಐ ಜಗದೀಶ್‌ ಅವರನ್ನು ಐಡಿ ಪೀಠ ಔಟ್‌ಪೋಸ್ಟ್‌ಗೆ ಪಾಳಿಯಂತೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಗಿರಿಶ್ರೇಣಿಯಲ್ಲಿ ಮೈಕೊರೆವ ಚಳಿ ವಾತಾವರಣ ಇದೆ. ಅವರಿಗೆ ಈಚೆಗಷ್ಟೆ ಬೈಪಾಸ್ ಶಸ್ತ್ರಕ್ರಿಯೆ ಆಗಿತ್ತು. ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಗೆ ಪತ್ನಿ ಶಾರದಮ್ಮ, ಪುತ್ರಿಯರಾದ ಸೌಮ್ಯಾ ಮತ್ತು ರಮ್ಯಾ ಇದ್ದಾರೆ. ಮೂಲತಃ ಹಾಸನ ಜಿಲ್ಲೆಯ ಹಗರೆ ಗ್ರಾಮದವರು.
 

ಪ್ರತಿಕ್ರಿಯಿಸಿ (+)