ಕಡೂರು: ಇಬ್ಬರು ಯುವಕರನ್ನು ಕಾರ್ನಲ್ಲಿ ಡ್ರಾಪ್ ಪಡೆಯುವ ನೆಪದಲ್ಲಿ ಹತ್ತಿದ ಇಬ್ಬರು ಯುವತಿಯರೂ ಸೇರಿ 7 ಜನರ ಗುಂಪು ಸುಲಿಗೆ ಮಾಡಲು ಯತ್ನಿಸಿದ್ದು, ಈ ಪೈಕಿ 6 ಜನರನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ತಿಪಟೂರು ತಾಲ್ಲೂಕು ಕರಡಾಳು ಗ್ರಾಮದ ಪ್ರವೀಣ್ ಮತ್ತು ಚೇತನ್ ಎಂಬುವರು ಮಂಗಳವಾರ ರಾತ್ರಿ ಇನೋವಾ ಕಾರಿನಲ್ಲಿ ತೆರಳುತ್ತಿದ್ದಾಗ ಚೇತನ್ ತನ್ನ ಸ್ನೇಹಿತ ಶಿವು ಎನ್ನುವವರಿಗೆ ಕರೆ ಮಾಡಿ ಚಿಕ್ಕಮಗಳೂರಿಗೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಶಿವು ತನ್ನ ಸಂಬಂಧಿಕರೂ ಕಡೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದು, ಅವರನ್ನು ಕರೆದುಕೊಂಡು ಹೋಗುವಂತೆ ಕೇಳಿದ್ದರು. ಅದರಂತೆ ಪ್ರವೀಣ್ ಕಡೂರಿಗೆ ಬಂದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇಬ್ಬರು ಮಹಿಳೆಯರನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಅವರ ಪರಿಚಯ ಕೇಳಿದಾಗ ಶ್ರಾವ್ಯ ಮತ್ತು ಕಾವ್ಯ ಎಂದು ತಿಳಿಸಿದ್ದರು.

ಹಿರೇಗೌಜ ಬಸ್ ನಿಲ್ದಾಣದ ಬಳಿ ಬಂದಾಗ ಗಂಡನಿಂದ ವಿಡಿಯೊ ಕಾಲ್ ಬರುತ್ತಿದ್ದು, ಕಾರ್ ನಿಲ್ಲಿಸುವಂತೆ ಶ್ರಾವ್ಯ ಹೇಳಿದ್ದು, ನಿಲ್ಲಿಸಿದ ತಕ್ಷಣವೇ ಮೂರು ಬೈಕ್ಗಳಲ್ಲಿ ಬಂದ ಐದು ಜನ ಅಡ್ಡಗಟ್ಟಿ ಕಾರಿನ ಕೀ ಕಸಿದುಕೊಂಡಿದ್ದಾರೆ. ಅಲ್ಲದೇ ಕಾರಿನಿಂದ ಇಳಿಯದಂತೆ ಮಾಡಿದ್ದಾರೆ.

ಬಳಿಕ ಕಾರಿನಲ್ಲಿ ಬಂದಿದ್ದ ಯುವತಿಯರಿಗೆ ಐವರೂ ಪರಿಚಯಸ್ಥರು ಎಂಬುದು ಗೊತ್ತಾಗಿದೆ. ಪ್ರವೀಣ ಮತ್ತು ಚೇತನ್ ಅವರನ್ನು ಕಾರಿನಿಂದ ಇಳಿಸಿ ಚಾಕು ಕುತ್ತಿಗೆಗೆ ಹಿಡಿದು ಹಣ ಕೇಳಿದ್ದಾರೆ.

ಚಿಕ್ಕಮಗಳೂರು ಕಡೆಯಿಂದ ಸೈರನ್ ಇರುವ ಜೀಪ್ ಬಂದಿದ್ದರಿಂದ ಕೂಡಲೇ ಕಾರಿನಲ್ಲಿ ಕೂರಿಸಿಕೊಂಡು ವಾಪಸ್ ತಿರುಗಿಸಿದ್ದಾರೆ.

ಪಿಳ್ಳೇನಹಳ್ಳಿ ಗೇಟ್ ಬಳಿ ನಿಲ್ಲಿಸಿಕೊಂಡು ಪರ್ಸ್ ಮತ್ತು ಪೋನ್ ಪೇನಲ್ಲಿ ಹಣ ಪರಿಶೀಲಿಸಿದ್ದಾರೆ. ಸ್ನೇಹಿತರಿಂದ ಹಣ ಹಾಕಿಸು ಎಂದು ಒತ್ತಾಯಿಸಿ ಪೋನ್ ಮಾಡಿಸಿದ್ದಾರೆ. ಆಗ ಸ್ನೇಹಿತನಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೋದ ಪೊಲೀಸರು ಕಾರು ಅಡ್ಡಗಟ್ಟಿ ನಾಲ್ವರನ್ನು ವಶಕ್ಕೆ ಪಡೆದರು. ಪರಾರಿಯಾದ ಮೂವರಲ್ಲಿ ಇಬ್ಬರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.