ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

N.R Pura ಭಾಷೆ ಬೆಳೆಸುವಲ್ಲಿ ಆಟೊ ಚಾಲಕರು ಮೊದಲಿಗರು: ಪಟ್ಟಾಚಾರ್ಯವರ್ಯ ಸ್ವಾಮೀಜಿ

ಭುವನೇಶ್ವರಿ ಆಟೊ ಚಾಲಕರ ಮತ್ತು ಮಾಲೀಕರ ಸಂಘ
Last Updated 4 ಡಿಸೆಂಬರ್ 2022, 5:57 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಕನ್ನಡ ಭಾಷೆಯನ್ನು ಬೆಳೆಸುವರಲ್ಲಿ ಆಟೊ ಚಾಲಕರು ಮೊದಲಿಗರು ಎಂದು ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನಾಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಬಸ್ ನಿಲ್ದಾಣದಣದ ಆವರಣದಲ್ಲಿ ಭುವನೇಶ್ವರಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ಶಾಸಕನಾಗಿದ್ದ ಅವಧಿಯಲ್ಲಿ ನರಸಿಂಹ ರಾಜಪುರದ ಬಸ್ ನಿಲ್ದಾಣದ ಸಮೀಪ ಆಟೊ ನಿಲ್ದಾಣ ನಿರ್ಮಿಸಲಾಗಿತ್ತು ಎಂದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮಾತನಾಡಿ, ಆಟೊ ಚಾಲಕರು ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಅಣ್ಣಪ್ಪ ಎನ್.ಮಳೀಮಠ್, ಮಡಬೂರು ಗ್ರಾಮದ ಎಚ್.ಟಿ.ರಾಜೇಂದ್ರ ಮಾತನಾಡಿದರು.

ಜೈ ಭುವನೇಶ್ವರಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿ.ಮಧುಸೂದನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಮುಖರಾದ ಪಿ.ಆರ್.ಸದಾಶಿವ, ಪಿ.ಜೆ.ಅಂಟೋಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಡಿವೈಎಸ್‌ಪಿ ಗುಂಜನ್ ಆರ್ಯ, ಮುಖಂಡರಾದ ಎಂ.ಆರ್.ರವಿಶಂಕರ್, ಬಿ.ಎಸ್.ಆಶೀಶ್ ಕುಮಾರ್, ಅರುಣ್ ಕುಮಾರ್, ಗೇರುಬೈಲು ನಟರಾಜ್, ಸಂತೋಷ್ ಕುಮಾರ್, ದಿವಾಕರ್, ಎನ್.ಎಂ.ನಾಗೇಶ್, ಎನ್.ಎಂ.ಕಾಂತರಾಜ್, ದೇವರಾಜ್, ಅಣ್ಣಪ್ಪ, ಸಂಘದ ಕ್ಷೇತ್ರ ಅಧ್ಯಕ್ಷ ವಿಜೇಂದ್ರ, ಗೌರವಾಧ್ಯಕ್ಷ ಜಗದೀಶ್, ಸುಧೀರ್, ಸಂತೋಷ್ ಇದ್ದರು. ವಿವಿಧ ಕ್ಷೇತ್ರದ ಸಾಧಕರಾದ ಎಚ್.ಸಿ.ಪ್ರವೀಣ್, ಡಾ.ಎಲ್ದೋ,ಲಿಸ್ಸಿ ಎಚ್.ರಾಜು, ಹಿರಿಯ ಆಟೊ ಚಾಲಕ ರಘುರಾಂ ಶೆಟ್ಟಿ, ರಘು, ಎಲ್ದೋ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT