ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಹೊನ್ನೂರು:ಮನಸೂರೆಗೊಂಡ ಕೆಸರು ಗದ್ದೆ ಕ್ರೀಡಾಕೂಟ

Last Updated 17 ಆಗಸ್ಟ್ 2022, 5:08 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಲ್ಲಿನ ಜೇಸಿ ಸಂಸ್ಥೆ ಕೊಪ್ಪ ರಸ್ತೆಯ ಅರುಣೇಶ್ ಅವರ ಭತ್ತದ ಗದ್ದೆಯಲ್ಲಿ ಆಯೋಜಿಸಿದ್ದ ‘ಅಮೃತವರ್ಷ’ ಕೆಸರುಗದ್ದೆ ಆಟೋಟ ಸ್ಪರ್ಧೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು.

‘ಕಾಫಿನಾಡು’ ಚಂದು ಕಾರ್ಯಕ್ರಮ ಉದ್ಘಾಟಿಸಿದರು. ಕ್ರೀಡಾಳುಗಳು ಕೆಸರಿನ ಗದ್ದೆಯಲ್ಲಿ ಮಿಂದೆದ್ದು ಸಂಭ್ರಮ ಮೆರೆದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ‘ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸೊಗಡಿನ ಕ್ರೀಡಾಕೂಟಗಳು ಮರೆಯಾಗುತ್ತಿದ್ದು, ಅದನ್ನು ನೆನಪಿಸುವ ನಿಟ್ಟಿನಲ್ಲಿ ಜೇಸಿ ಸಂಸ್ಥೆ ಮಾಡಿರುವ ಕಾರ್ಯ ಶ್ಲಾಘನೀಯ’ ಎಂದರು.

ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ವಾಲಿಬಾಲ್, ಟಿ2 ಕ್ರಿಕೆಟ್ ಪಂದ್ಯಾವಳಿ ರೋಮಾಂಚನಗೊಳಿಸಿದವು.

ಇದಕ್ಕೂ ಮುನ್ನ ಕಲಾರಂಗ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯು ನೀಡುವ ‘ಜೇಸಿ ಚಂದನ’ ಪ್ರಶಸ್ತಿಯನ್ನು ಪಟ್ಟಣದ ಹಿರಿಯ ಪುರೋಹಿತ, ಜ್ಯೋತಿಷಿ ಪಿ.ಎಸ್.ರಾಮಚಂದ್ರ ಕಾರಂತ್ (ನಾರಿಕೊಳಲು ಭಟ್) ಅವರಿಗೆ ಪ್ರದಾನ ಮಾಡಲಾಯಿತು.

ಜೇಸಿಐ ವಲಯ ಉಪಾಧ್ಯಕ್ಷ ಯು.ಸಿ.ಸಂತೋಷ್, ಜೇಸಿಐ ಅಧ್ಯಕ್ಷ ರಚನ್ ಜೆ.ಹುಯಿಗೆರೆ, ಬಿ.ಕಣಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್, ದಾನಿಗಳಾದ ಎ.ಸಿ.ಸಂತೋಷ್, ಬಿ.ಕೆ.ನಾಗರಾಜ್, ಅಭಿನಂದನ್, ಎಚ್.ಟಿ.ರವಿ, ಕೌಶಿಕ್ ಮಾಗುಂಡಿ, ಸತೀಶ್ ಹುಯಿಗೆರೆ, ಎಚ್.ಎಂ.ವೈಮಾನ್, ಜೇಸಿ ನಿಕಟಪೂರ್ವ ಅಧ್ಯಕ್ಷ ಎಸ್.ಎಲ್.ಚೇತನ್, ಕಾರ್ಯ ದರ್ಶಿ ಎನ್.ಶಶಿಧರ್, ಟಿ.ಎಂ.ಉಮೇಶ್ ಕಲ್ಮಕ್ಕಿ, ಯಶಸ್ವಿನಿ, ಪ್ರಕಾಶ್ ಮುದು ಗುಣಿ, ಶಶಿಕಾಂತ್, ಎಸ್.ಕೆ.ರಫೀಕ್, ಎನ್.ನಿರಂಜನ್, ಶ್ರೇಯಸ್ ಇದ್ದರು.

ವಿಜೇತರು: ಹಗ್ಗಜಗ್ಗಾಟ- ಬಾಳೆಹೊನ್ನೂರು ಬಿಜೆಪಿ ತಂಡ (ಪ್ರ), ಎಂಟಿಆರ್ ಮಂಗಳೂರು ತಂಡ (ದ್ವಿ), ವಾಲಿಬಾಲ್- ನಿಜಾಂ ಫ್ರೆಂಡ್ ಎ ತಂಡ (ಪ್ರ), ನಿಜಾಂ ಫ್ರೆಂಡ್ಸ್ ಬಿ ತಂಡ (ದ್ವಿ), ಟಿ2 ಕ್ರಿಕೆಟ್- ಶಿವನಗರ ಬಾಯ್ಸ್ (ಪ್ರ), ಎ.ಕೆ.ಸ್ಪೋರ್ಟ್ಸ್‌ (ದ್ವಿ), ಕೆಸರುಗದ್ದೆ ಓಟ- ಜಂಶೀದ್ (ಪ್ರ), ಹ್ಯಾರಿಸ್ (ದ್ವಿ), ರಾಜೇಶ್ (ತೃ), ಅರೌಂಡ್‌ದ ವಿಕೆಟ್- ದೀಕ್ಷಿತ್ (ಪ್ರ), ಭವಿತ್ (ದ್ವಿ). ವಿಜೇತರಿಗೆ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT