ಬೀರೂರು(ಕಡೂರು): ಬೀರೂರು ಪುರಸಭೆಯು ಭದ್ರಾ ನೀರು ಮತ್ತು ಕೊಳವೆ ಬಾವಿ ಆಧರಿಸಿ ನಾಗರಿಕರಿಗೆ ನೀರು ಪೂರೈಸುತ್ತಿದೆ. ಭದ್ರಾ ನೀರು ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿಲ್ಲವಾದರೂ ಕೆಲವು ವಾರ್ಡ್ಗಳಲ್ಲಿ ಅನಿವಾರ್ಯ ಸಂದರ್ಭದಲ್ಲಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ.

ಕ್ಯಾಂಪ್ ಭಾಗದಲ್ಲಿ ಇದ್ದ ನೀರಿನ ಟ್ಯಾಂಕ್ ಶಿಥಿಲಗೊಂಡ ಕಾರಣ ಪುನರ್ ನಿರ್ಮಾಣ ನಡೆಯುತ್ತಿದೆ. ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಈ ವಲಯದ 7 ವಾರ್ಡ್ಗಳ ಸಾವಿರಾರು ಜನರಿಗೆ ಕೊಳವೆ ಬಾವಿಯ ನೀರು ಆಧಾರವಾಗಿದೆ.

ಬೀರೂರು ಪಟ್ಟಣದಲ್ಲಿ ಅಮೃತ್ 2.0 ಯೋಜನೆಯು ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಈವರೆಗೆ ಶೇ 60ರಷ್ಟು ಕಾಮಗಾರಿ ಮುಗಿದಿದೆ. ಭದ್ರಾ ಕುಡಿಯುವ ನೀರು ಪೂರೈಕೆಯಲ್ಲಿ ಕಡೂರು ಮತ್ತು ಬೀರೂರು ಪುರಸಭೆಗಳು ಶೇ 60 ಮತ್ತು ಶೇ 40ರ ನಿರ್ವಹಣಾ ಜವಾಬ್ದಾರಿ ಹಂಚಿಕೊಂಡಿವೆ. ತರೀಕೆರೆ ಬಳಿಯ ಜಲಶುದ್ಧೀಕರಣ ಘಟಕದ ನಿರ್ವಹಣೆ ಕಡೂರು ಪುರಸಭೆಯದ್ದಾಗಿದ್ದರೆ, ಲಕ್ಕವಳ್ಳಿ ಬಳಿಯ ಜಾಕ್ವೆಲ್ ನಿರ್ವಹಣೆ ಬೀರೂರು ಪುರಸಭೆಗೆ ಸೇರಿದೆ. ಬೀರೂರು ಪುರಸಭೆಯು ಸೀಮಿತ ಆದಾಯ ಹೊಂದಿದ್ದು, ಬಹಳಷ್ಟು ಬಾರಿ ಸರ್ಕಾರದ ಅನುದಾನವನ್ನೇ ಆಧರಿಸಿರುವ ಹಿನ್ನೆಲೆಯಲ್ಲಿ ಅಮೃತ್ 2.0 ಯೋಜನೆಯ ಶೇ15 ಅನುದಾನ ಭರಿಸುವುದು ಕಷ್ಟವಾಗಿದೆ ಎನ್ನುತ್ತವೆ ಪುರಸಭೆ ಮೂಲಗಳು.

ಅಮೃತ್ 2.0 ಯೋಜನೆ ಜಾರಿಯಾದರೆ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಲಾರದು ಮತ್ತು ಸೋರಿಕೆ ಕಡಿಮೆಯಾಗಲಿದೆ. ಪುರಸಭೆಯು ಯೋಜನೆಯ ಸಮರ್ಪಕ ಅನುಷ್ಠಾನದ ಬಳಿಕ ನೀರಿನ ಕರ ವಸೂಲಿಯಲ್ಲಿ ಪ್ರಗತಿ ಸಾಧಿಸಬಹುದು ಎನ್ನುವ ನಿರೀಕ್ಷೆ ಪುರಸಭೆಯದ್ದು.

ಪಟ್ಟಣದಲ್ಲಿ ಸದ್ಯ 3-4 ದಿನಗಳಿಗೆ ಒಮ್ಮೆ ನೀರು ಪೂರೈಸಲಾಗುತ್ತಿದೆ, ಶುದ್ಧೀಕರಣ ಘಟಕದ ಬಳಿ ಏನಾದರೂ ಸಮಸ್ಯೆಯಾದರೆ ಕೆಲವೊಮ್ಮೆ ವಾರಗಟ್ಟಲೆ ಭದ್ರಾ ನೀರು ಪೂರೈಕೆ ಆಗುವುದಿಲ್ಲ. ಇಂತಹ ಸಮಯದಲ್ಲಿ ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಭದ್ರಾ ನೀರು ಪೂರೈಕೆಯಲ್ಲಿ ನಿರ್ವಹಣೆಯ ಹೊಣೆಗಾರಿಕೆಯ ಹಂಚಿಕೆಯೂ ಇರುವುದರಿಂದ ಕೆಲವೊಮ್ಮೆ ಕಡೂರು ಕಡೆ ಮುಖ ಮಾಡಬೇಕಾಗುತ್ತದೆ. ಬೀರೂರಿನಲ್ಲಿ ಭದ್ರಾ ನೀರು ಸಂಗ್ರಹಕ್ಕಾಗಿ 5 ಓವರ್ಹೆಡ್ ಟ್ಯಾಂಕ್ಗಳು ಕೆಲಸ ನಿರ್ವಹಿಸುತ್ತಿವೆ. ಕ್ಯಾಂಪ್ನಲ್ಲಿ ಅಮೃತ್ 2.0 ಯೋಜನೆಯಲ್ಲಿ ಟ್ಯಾಂಕ್ ನಿರ್ಮಾಣ ಮುಕ್ತಾಯ ಹಂತದಲ್ಲಿದ್ದು 10 ಲಕ್ಷ ಲೀಟರ್ ಸಂಗ್ರಹಣೆಯ ಸಾಮರ್ಥ್ಯ ಹೊಂದಿದೆ. ಈ ಟ್ಯಾಂಕ್ ನಿರ್ಮಾಣ ಪೂರ್ಣವಾದರೆ ಕ್ಯಾಂಪ್ ಭಾಗದಲ್ಲಿ ನೀರಿನ ಬವಣೆ ತಪ್ಪಲಿದೆ. 35 ಕೊಳವೆ ಬಾವಿಗಳು ಜಲಮೂಲ ಹೊಂದಿದ್ದು ವಾರ್ಡ್ಗಳಿಗೆ ನೀರು ಪೂರೈಕೆ ಸಂಪರ್ಕ ಹೊಂದಿವೆ ಎನ್ನುತ್ತಾರೆ ಅಧಿಕಾರಿಗಳು.

ಬೀರೂರು ಪಟ್ಟಣಕ್ಕೆ ಭದ್ರಾ ಕುಡಿಯುವ ನೀರು ಪೂರೈಕೆ ಸದ್ಯಕ್ಕೆ ನೆಮ್ಮದಿ ತಂದಿದೆ. ಭದ್ರಾ ಉಪ ಕಣಿವೆ ಯೋಜನೆ ಕಾಮಗಾರಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮೂಲ ಉದ್ದೇಶ ಹೊಂದಲಾಗಿದೆ.ದೇವನಕೆರೆಯು ಸಂಗ್ರಹಣೆ ಮತ್ತು ಪೂರೈಕೆಯ ಕೇಂದ್ರವಾಗಿದೆ. ದೇವನಕೆರೆಯಿಂದ ಬೀರೂರು ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಿದರೆ ಜನರಿಗೆ ಅನುಕೂಲ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್.

ಕ್ಯಾಂಪ್ ಭಾಗದಲ್ಲಿ ನೀರಿನ ಪೂರೈಕೆ ಸಮರ್ಪಕವಾಗಿಲ್ಲ, ಇಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿದ್ದು, ಕೆಲಸಕ್ಕೆ ಹೋಗುವ ಸಮಯದಲ್ಲಿ ನೀರು ಬಿಟ್ಟರೆ ಹಿಡಿಯಲು ಸಮಸ್ಯೆ. ಅಲ್ಲದೆ ಬಹಳಷ್ಟು ಮನೆಗಳಲ್ಲಿ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಇಲ್ಲ. ಸಣ್ಣ ಪುಟ್ಟ ತೊಟ್ಟಿ ಅಥವಾ ಮನೆಯ ಪಾತ್ರೆಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬೇಕಾದ ಸ್ಥಿತಿ ಇದೆ. ಕೆಲವು ಬಾರಿ ಕೊಳವೆ ಬಾವಿ ಹಾಗೂ ಭದ್ರಾ ನೀರು ಸೇರಿಸಿ ಬಿಡುವುದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಟ್ಯಾಂಕ್ ಅನ್ನು ಬೇಗನೆ ಸಿದ್ಧಗೊಳಿಸಿ ನೀರು ಸರಬರಾಜು ಮಾಡಬೇಕು ಎನ್ನುತ್ತಾರೆ ಲಿಂಗದಹಳ್ಳಿ ರಸ್ತೆ ನಿವಾಸಿ ಪಾರ್ವತಮ್ಮ.

ಅಮೃತ್ ಯೋಜನೆ: ₹33.18 ಕೋಟಿ ವೆಚ್ಚ

ಅಮೃತ ಯೋಜನೆ ಎರಡನೇ ಹಂತದ ಜಾರಿಗೆ ₹33.18 ಕೋಟಿ ವೆಚ್ಚವಾಗಲಿದ್ದು ಪುರಸಭೆ ಶೇ 15ರಷ್ಟು ಭರಿಸಬೇಕಾಗುತ್ತದೆ. ಪಟ್ಟಣದ ಜನಸಂಖ್ಯೆ 22723 (2011ರ ಜನಗಣತಿ ಪ್ರಕಾರ) ಇದ್ದು 3802 ಮನೆಗಳು 3754 ನಳ ಸಂಪರ್ಕ 48 ವಾಣಿಜ್ಯ ಸಂಪರ್ಕ 48 ಸಂಪರ್ಕಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.