ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಪೌರಕಾರ್ಮಿಕರ ಮುಷ್ಕರ

Last Updated 3 ಜುಲೈ 2022, 1:59 IST
ಅಕ್ಷರ ಗಾತ್ರ

ಬೀರೂರು: ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಮತ್ತು ಪೌರಕಾರ್ಮಿಕರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನವೂ ಮುಂದುವರಿದಿದೆ.

ಪುರಸಭಾ ಕಚೇರಿ ಮುಂದೆ ಶಾಮಿಯಾನದ ಅಡಿ ನೌಕರರು ಕುಳಿತು, ತಮಟೆ ಬಾರಿಸುತ್ತಾ ಧರಣಿ ಮುಂದುವರಿಸಿದರು.

ಡಾಟಾ ಎಂಟ್ರಿ ಆಪರೇಟರ್ ಪ್ರಸಾದ್ ಮಾತನಾಡಿ, ‘ಮುಖ್ಯಮಂತ್ರಿಗಳು ಹೈದರಾಬಾದ್ ಭೇಟಿಯಲ್ಲಿರುವ ಕಾರಣ ಈವರೆಗೆ ಯಾವುದೇ ತೀರ್ಮಾನವಾಗಿಲ್ಲ. ಭಾನುವಾರ ರಜಾದಿನವಾಗಿದ್ದು ಸೋಮವಾರದಿಂದ ಮತ್ತೆ ನಮ್ಮ ಮುಷ್ಕರ ಮುಂದುವರಿಯಲಿದೆ. ಸಕಾರಾತ್ಮಕ ಪ್ರತಿಕ್ರಿಯೆ ಬರುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.

ವೆಂಕಟೇಶ್, ಧನಂಜಯ, ಮನು, ಉಮೇಶ್, ನಟರಾಜ್, ಜಯಶಂಕರ್, ಪುನೀತ್, ಮಂಜಪ್ಪ, ಪ್ರದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT