ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಠ್ಯ ಪುಸ್ತಕವೋ, ಪಕ್ಷ ಪುಸ್ತಕವೋ? ಸಂವಾದ ಇಂದು

Last Updated 4 ಜುಲೈ 2022, 7:13 IST
ಅಕ್ಷರ ಗಾತ್ರ

ಕೊಪ್ಪ: ‘ಪರಿಷ್ಕೃತ ಪಠ್ಯ ಪುಸ್ತಕವನ್ನು ಹಿಂಪಡೆದು ಹಳೆಯ ಪಠ್ಯ ಪುಸ್ತಕಗಳನ್ನೇ ಕೊಡಬೇಕು ಎಂದು ಒತ್ತಾಯಿಸಿ ಮಲೆನಾಡು ಜನಪರ ಒಕ್ಕೂಟ, ವಿಶ್ವಮಾನವ ಸಂದೇಶ ವೇದಿಕೆ ವತಿಯಿಂದ ‘ಪಠ್ಯ ಪುಸ್ತಕವೋ… ಪಕ್ಷ ಪುಸ್ತಕವೋ?’ ಎಂಬ ವಿಷಯದ ಬಗ್ಗೆ ಇಲ್ಲಿನ ಪುರಭವನದಲ್ಲಿ ಜು.4 ರಂದು ಮಧ್ಯಾಹ್ನ 3ಕ್ಕೆಸಂವಾದ, ಚರ್ಚೆ ಆಯೋಜಿಸಲಾಗಿದೆ’ ಎಂದು ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಹೇಳಿದರು.

‘ಪರಿಷ್ಕೃತ ಪಠ್ಯದಲ್ಲಿ ಅನೇಕ ಮಹನೀಯರನ್ನು ಅವಮಾನಿಸಲಾಗಿದೆ. ನಾಡು ನುಡಿಗಾಗಿ ಸೇವೆ ಸಲ್ಲಿಸಿದವರನ್ನು ದುರುದ್ದೇಶದಿಂದ ಪಠ್ಯದಿಂದ ಕೈಬಿಡಲಾಗಿದೆ. ಮತ್ತೆ ಕೆಲವರ ಸಾಧನೆಗಳನ್ನು ಮರೆಮಾಚಲಾಗಿದೆ. ಈ ಬಗ್ಗೆ ಸಂವಾದ, ಚರ್ಚೆ ನಡೆಸಿ ಮುಂದಿನ ಹೆಜ್ಜೆ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದರು.

‘ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಟಿ.ಡಿ.ರಾಜೇಗೌಡ, ಚಿಂತಕ ಎಚ್.ಟಿ.ರಾಜೇಂದ್ರ, ಮಂಗಳೂರು ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್‌. ಪದ್ಮರಾಜ್, ಕಯ್ಯಾರ ಕಿಇ್ಣಣ್ಣ ರೈ ಅವರ ಕುಟುಂಬದ ಬಂಧು ಕಳ್ಳಿಗೆ ತಾರಾನಾಥ್, ಚಿತ್ರ ಸಾಹಿತಿ ಕವಿರಾಜ್ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ಕೇಶವ್, ಜನಪರ ಒಕ್ಕೂಟದ ಸಂತೋಷ್ ಕಾಳ್ಯ, ವಿಶ್ವಮಾನವ ಸಂದೇಶ ವೇದಿಕೆಯ ಡಿ.ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT