ಗಣೇಶೋತ್ಸವ ಪ್ರಯುಕ್ತ ರಾಜ್ಯಮಟ್ಟದ ಎತ್ತಿನಗಾಡಿ ಓಟ ಸ್ಪರ್ಧೆ; ಯುವಕರ ಉತ್ಸಾಹ

7

ಗಣೇಶೋತ್ಸವ ಪ್ರಯುಕ್ತ ರಾಜ್ಯಮಟ್ಟದ ಎತ್ತಿನಗಾಡಿ ಓಟ ಸ್ಪರ್ಧೆ; ಯುವಕರ ಉತ್ಸಾಹ

Published:
Updated:
Deccan Herald

ಚಿಕ್ಕಮಗಳೂರು:  ಹೊಸಮನೆ ಗುಂಡಿನಮ್ಮ ಗಣಪತಿ ಸೇವಾ ಸಮಿತಿ ವತಿಯಿಂದ ಗಣೇಶೋತ್ಸವ ಪ್ರಯುಕ್ತ ಗೌಡನಹಳ್ಳಿ ರಸ್ತೆಯಲ್ಲಿ ಭಾನುವಾರ ರಾಜ್ಯಮಟ್ಟದ ಎತ್ತಿನಗಾಡಿ ಓಟ ಸ್ಪರ್ಧೆ ಆಯೋಜಿಸಲಾಗಿತ್ತು. ಯುವಕರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ ವಿಜೇತರಿಗೆ ₹30 ಸಾವಿರ– ಪ್ರಥಮ, ₹ 20 ಸಾವಿರ– ದ್ವಿತೀಯ ಹಾಗೂ ₹10 ಸಾವಿರ– ತೃತೀಯ ಬಹುಮಾನ ಇಡಲಾಗಿತ್ತು..

ಗ್ರಾಮೀಣ ಕ್ರೀಡೆಗಳನ್ನು ಪೋಷಿಸಿ

ಸ್ಪರ್ಧೆಗೆ ಚಾಲನೆ ನೀಡಿದ ಶಾಸಕ ಸಿ.ಟಿ. ರವಿ ಮಾತನಾಡಿ, ಕ್ರೀಡೆಗಳು ಬಾಂಧವ್ಯವನ್ನು ಬೆಸೆಯುತ್ತವೆ. ಕಬಡ್ಡಿ, ಕುಸ್ತಿ, ಎತ್ತಿನಗಾಡಿ ಓಟ ಮೊದಲಾದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಗ್ರಾಮೀಣ ಕ್ರೀಡೆಗಳನ್ನು ಪೋಷಿಸಬೇಕು ಎಂದರು.

ಕ್ರೀಡೆಗಳು ಪರಸ್ಪರ ಸ್ನೇಹಸೇತುವನ್ನು ವೃದ್ಧಿಸುತ್ತವೆ. ಆಟೋಟಗಳನ್ನು ಆಯೋಜಿಸುವುದರ ಜೊತೆಗೆ ಭಾಷೆ, ಸಂಸ್ಕೃತಿ ರಕ್ಷಣೆ, ಪೋಷಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಎತ್ತಿನಗಾಡಿ ಓಟ ರೋಮಾಂಚನಕಾರಿ ಸ್ಪರ್ಧೆಯಾಗಿದೆ. ಪ್ರೇಕ್ಷಕರು ಜಾಗರೂಕರಾಗಿ ವೀಕ್ಷಣೆ ಮಾಡಬೇಕು. ವಾದ ವಿವಾದಗಳಿಗೆ ಎಡೆಮಾಡಿಕೊಡದೆ ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಮಧುಕುಮಾರ್ ಅರಸ್ ಮಾತನಾಡಿ, ಈ ಸ್ಪರ್ಧೆಗೆ ವಿವಿಧಡೆಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಸ್ಪರ್ಧಿಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಹರೀಶ್, ಗುಂಡಿನಮ್ಮ ಗಣಪತಿ ಸೇವಾ ಸಮಿತಿಯ ಗುರು, ರಾಜೇಶ್, ಕಿರಣ್, ವಿನಯ್, ಪ್ರದೀಪ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !