ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಅಭಯಾರಣ್ಯ: ಪತ್ತೆಯಾದ ಕಾಡುಹಂದಿ ಕಳೇಬರಗಳ ಸಂಖ್ಯೆ 13ಕ್ಕೆ ಏರಿಕೆ

ಕಾಡುಹಂದಿ ಸಾವಿನ ಸರಣಿ
Last Updated 20 ಏಪ್ರಿಲ್ 2020, 2:32 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯದಲ್ಲಿ ಕಾಡುಹಂದಿಗಳು ಸರಣಿಯಾಗಿ ಸಾವಿಗೀಡಾಗಿದ್ದು, ಭಾನುವಾರ ಮತ್ತೆ ಎರಡು ಕಳೇಬರಗಳು ಸಿಕ್ಕಿವೆ. ಇದೇ 1ರಿಂದ 19ರವರೆಗೆ ಪತ್ತೆಯಾದ ಕಳೇಬರಗಳ ಸಂಖ್ಯೆ 13ಕ್ಕೆ ಏರಿದೆ.

ಭದ್ರಾ ಹಿನ್ನೀರು ವ್ಯಾಪ್ತಿಯ ಜಲ್ಲಿಕಲ್ಲು ರಸ್ತೆಯ (ತಡಸ ಸಮೀಪ) ಕೋವು ಮೇಲ್ಭಾಗ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿವೆ. ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕಂಡಿವೆ.

ಶಿವಮೊಗ್ಗ ವನ್ಯಜೀವಿ ವಿಭಾಗದ ಹಿರಿಯ ಪಶು ವೈದ್ಯಾಧಿಕಾರಿ ಡಾ.ಎಸ್‌.ವಿನಯ್‌ ನೇತೃತ್ವದ ತಂಡವು ಮಧ್ಯಾಹ್ನ ಮರಣೋತ್ತರ ‍ಪರೀಕ್ಷೆ ನಡೆಸಿದೆ. ಕೆಲ ಕಳೇಬರದ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಪರೀಕ್ಷೆಗೆ ಕಳಿಸಿ ವಾರ ಗತಿಸಿದೆ, ವರದಿ ಬಂದಿಲ್ಲ.

ಇದೇ 13ರಂದು ಕಾಡುಕೋಣದ ಕಳೇಬರವೂ ಸಿಕ್ಕಿತ್ತು. ಕೊರೊನಾ ತಲ್ಲಣದ ನಡುವೆ ಕಾಡುಪ್ರಾಣಿಗಳ ಸಾವು ಆತಂಕ ಉಂಟುಮಾಡಿದೆ.

'ತಜ್ಞವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಮಾದರಿ ಸಂಗ್ರಹಿಸಿದ್ದಾರೆ. ಮಾದರಿಗಳನ್ನು ಪರೀಕ್ಷೆಗೆ ಕಳಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದುಭದ್ರಾ ಹುಲಿ ಯೋಜನೆಯ ನಿರ್ದೇಶಕಎಸ್‌.ಧನಂಜಯ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT