ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ ಫಲಿತಾಂಶ; ವಿಸ್ಮಯ್‌ಗೆ ಶೇ 97.2 ಅಂಕ

Last Updated 6 ಮೇ 2019, 20:18 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಸೋಮವಾರಪ್ರಕಟವಾಗಿದ್ದು, ಇಲ್ಲಿನ ಸಿರಗಾಪುರದ ಸಾಯಿ ಏಂಜೆಲ್ಸ್‌ ಶಾಲೆಯ ಪಿ.ವಿಸ್ಮಯ್‌ ಶೇ 97.2 ಅಂಕ ಪಡೆದು ಕೀರ್ತಿ ತಂದಿದ್ದಾರೆ.

ವಿಸ್ಮಯ್‌ ಅವರು ಇಂಗ್ಲಿಷ್‌–96, ದ್ವಿತೀಯ ಭಾಷೆ– 93, ಗಣಿತ, ವಿಜ್ಞಾನ, ಸಮಾಜ ವಿಜ್ಞಾನದಲ್ಲಿ ತಲಾ 99 ಒಟ್ಟಾರೆ 500ಕ್ಕೆ 486 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಈ ವಿದ್ಯಾರ್ಥಿ ಕಲ್ಯಾಣನಗರದ ಝೆರಾಕ್ಸ್‌ ಅಂಗಡಿ ಮಾಲೀಕ ಫಾಲಾಕ್ಷ ಮತ್ತು ಪುಷ್ಪರೇಖಾ ದಂಪತಿ ಪುತ್ರ. ಸಾಯಿ ಏಂಜೆಲ್ಸ್‌ ಶಾಲೆ ಶೇ 100 ಫಲಿತಾಂಶ ದಾಖಲಿಸಿದೆ.

ಇದೇ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯಾಎನ್‌. ಅವರು ಶೇ 96.6 ಅಂಕ ಗಳಿಸಿದ್ದಾರೆ. ಶ್ರಾವ್ಯ ಅವರು ಇಂಗ್ಲಿಷ್‌–97, ದ್ವಿತೀಯ ಭಾಷೆ– 91, ಗಣಿತ–100, ವಿಜ್ಞಾನ–96, ಸಮಾಜ ವಿಜ್ಞಾನ–99 ಒಟ್ಟು 483ಅಂಕ ಪಡೆದಿದ್ದಾರೆ. ಈ ವಿದ್ಯಾರ್ಥಿನಿ ಕಲ್ಯಾಣನಗರದ ಡಾ.ಎಚ್‌.ಜಿ.ನಾಗರಾಜ್‌ ಮತ್ತು ಡಾ.ಸಿ.ಎಸ್‌.ಶಾಂಭವಿ ದಂಪತಿ ಪುತ್ರಿ.

ಇದೇ ಶಾಲೆಯ ಗೌರಿ ಎಸ್‌ ಉತ್ತಂಗಿ, ಸಂಹಿತಾ ಸುರೇಶ್ , ದಯಾನಂದಮಲ್ಲಿಕಾರ್ಜುನ ಈ ಮೂವರೂ ಶೇ 96.2 ಅಂಕ ಗಳಿಸಿದ್ದಾರೆ. ಗೌರಿ ಅವರು ಇಂಗ್ಲಿಷ್‌–95, ದ್ವಿತೀಯ ಭಾಷೆ– 95, ಗಣಿತ–95, ವಿಜ್ಞಾನ–99, ಸಮಾಜ ವಿಜ್ಞಾನ–97 ಒಟ್ಟು 481 ಅಂಕ ಪಡೆದಿದ್ದಾರೆ. ಸಂಹಿತಾ ಸುರೇಶ್‌ ಅವರು ಇಂಗ್ಲಿಷ್‌–96, ದ್ವಿತೀಯ ಭಾಷೆ– 95, ಗಣಿತ–98, ವಿಜ್ಞಾನ–97, ಸಮಾಜ ವಿಜ್ಞಾನ– 95ಒಟ್ಟು 481 ಹಾಗೂ ದಯಾನಂದ ಅವರು ಇಂಗ್ಲಿಷ್‌–98, ದ್ವಿತೀಯ ಭಾಷೆ–94 , ಗಣಿತ–95, ವಿಜ್ಞಾನ–97, ಸಮಾಜ ವಿಜ್ಞಾನ–97 ಒಟ್ಟು 481 ಪಡೆದಿದ್ದಾರೆ.

ಶಾಲೆ 13 ವರ್ಷಗಳಿಂದ ಶೇ 100ಫಲಿತಾಂಶ ದಾಖಲಿಸಿದೆ ಎಂದು ಪ್ರಾಚಾರ್ಯೆ ವಿಜಯಾ ನಾಗೇಶ್ ತಿಳಿಸಿದ್ದಾರೆ.

ಸಾಧಕರ ಮನದಾಳ

ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್ ಗುರಿ

ತರಗತಿಯಲ್ಲಿ ಚೆನ್ನಾಗಿ ಪಾಠ ಕೇಳುತ್ತಿದ್ದೆ. ಪಠ್ಯಪುಸ್ತಕ ಚೆನ್ನಾಗಿ ಓದಿದ್ದೆ. ಪರೀಕ್ಷೆ ಸಮಯದಲ್ಲಿ ನಾಲ್ಕೈದು ಗಂಟೆ ಅಭ್ಯಾಸ ಮಾಡಿದ್ದೆ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದೆ. ಶಿಕ್ಷಕರು ಚೆನ್ನಾಗಿ ಮಾರ್ಗದರ್ಶನ ನೀಡಿದ್ದರು. ಪಿಯುನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತೇನೆ. ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರ್‌ ಆಗುವ ಗುರಿ ಇದೆ.

–ಪಿ.ವಿಸ್ಮಯ್‌

ವೈದ್ಯೆಯಾಗುವ ಗುರಿ

ಅಂದಿನ ಪಾಠ ಅಂದೇ ಓದುವ ಅಭ್ಯಾಸ ರೂಢಿಸಿಕೊಂಡಿದ್ದೆ. ವಿಷಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿದ್ದೆ. ಶೈಕ್ಷಣಿಕ ವರ್ಷದ ಆರಂಭದಿಂದ ನಿತ್ಯ ಎರಡ್ಮೂರು ಗಂಟೆ ಅಭ್ಯಾಸ ಮಾಡಿದ್ದೆ. ಪರೀಕ್ಷೆ ಸಮಯದಲ್ಲಿ ನಾಲ್ಕೈದು ಗಂಟೆ ಓದಿದ್ದೆ. ಪಿಯುನಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳುತ್ತೇನೆ. ವೈದ್ಯೆಯಾಗಬೇಕು ಎಂಬ ಗುರಿ ಇದೆ.

–ಎನ್‌.ಶ್ರಾವ್ಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT