ಜಿಲ್ಲಾಸ್ಪತ್ರೆಗೆ ಕೇಂದ್ರ ತಂಡ ಭೇಟಿ, ಸೌಲಭ್ಯ, ಚಿಕಿತ್ಸೆ, ಆರೋಗ್ಯ ಸೇವ ಪರಿಶೀಲನೆ

7

ಜಿಲ್ಲಾಸ್ಪತ್ರೆಗೆ ಕೇಂದ್ರ ತಂಡ ಭೇಟಿ, ಸೌಲಭ್ಯ, ಚಿಕಿತ್ಸೆ, ಆರೋಗ್ಯ ಸೇವ ಪರಿಶೀಲನೆ

Published:
Updated:
Deccan Herald

ಚಿಕ್ಕಮಗಳೂರು: ಕೇಂದ್ರ ಆರೋಗ್ಯ ಇಲಾಖೆ ತಂಡದ ಅಧಿಕಾರಿಗಳು ಮಂಗಳವಾರ ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯ, ಚಿಕಿತ್ಸೆ, ಆರೋಗ್ಯ ಸೇವೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಡಾ.ಸುಧೀರ್‌ ಗುಪ್ತಾ ನೇತೃತ್ವದ ಆರು ಅಧಿಕಾರಿಗಳ ತಂಡವು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಪರಿಶೀಲನೆ ಮಾಡಿದೆ. ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ರೋಗಿಗಳು, ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೊಡ್ಡಮಲ್ಲಪ್ಪ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ. ‘ಹೊರರೋಗಿ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಹಿರಿಯ ನಾಗರಿಕರ ವಾರ್ಡ್‌, ಹೆರಿಗೆ ಆಸ್ಪತ್ರೆ, ಡಯಾಲಿಸಿಸ್‌ಘಟಕ, ಜನಸಂಜೀವಿನಿಔಷಧ ಮಳಿಗೆಗಳನ್ನು? ಪರಿಶೀಲನೆ ಮಾಡಿದರು. ಸ್ವಚ್ಛತೆ ನಿರ್ವಹಣೆ, ಚಿಕಿತ್ಸೆ, ಸೇವೆ, ಸೌಕರ್ಯ, ಆರೋಗ್ಯ ಸಿಬ್ಬಂದಿ ಕ್ಷಮತೆ ಬಗ್ಗೆ ಮಾಹಿತಿ ಕಲೆ ಹಾಕಿದರು’ ಎಂದು ತಿಳಿಸಿದರು.

‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ (ಎನ್‌ಆರ್‌ಎಚ್‌ಎಂ), ಮಡಿಲು ಮೊದಲಾದವುಗಳಿಗೆ ಕೇಂದ್ರ ಸರ್ಕಾರವು ಆಸ್ಪತ್ರೆಗಳಿಗೆ ಅನುದಾನ ನೀಡುತ್ತದೆ. ಕೇಂದ್ರ ಸರ್ಕಾರವು ಆಸ್ಪತ್ರೆಗಳಿಗೆ ಶೇ 75 ಅನುದಾನ ನೀಡುತ್ತದೆ. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು. ತಂಡವು ಕೇಂದ್ರಕ್ಕೆ ವರದಿ ಸಲ್ಲಿಸುತ್ತದೆ’ ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !