ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ, ತುಮಕೂರಿಗೆ ಉಪನಗರ ರೈಲು

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನಿಂದ ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಸಂಪರ್ಕಿಸುವ ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ವಿಶೇಷ ಉದ್ದೇಶಿತ ಘಟಕ (ಎಸ್‌ಪಿವಿ) ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.

ಈ ಘಟಕದ ಮೂಲ ನಿಧಿಯಾಗಿ ₹345 ಕೋಟಿ ಅನುದಾನ ಒದಗಿಸಲು ಬುಧವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ರೈಲ್ವೆ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಜಂಟಿಯಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಿದೆ. ಮೊದಲ ಹಂತದ ಯೋಜನೆಗೆ ₹1,745 ಕೋಟಿ ಬೇಕಾಗಲಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

2018ರಿಂದ 2020ರ ಅವಧಿಗೆ ಇಷ್ಟು ಹಣ ನೀಡಬೇಕು. ಮೂರು ವರ್ಷದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. 58 ರೈಲುಗಳು ಉಪನಗರ  ಮಾರ್ಗಗಳಲ್ಲಿ ಓಡಾಡಲಿವೆ ಎಂದೂ ಅವರು ತಿಳಿಸಿದರು.

ಎಲ್ಲಿಂದ ಎಲ್ಲಿಗೆ ರೈಲು–ದೂರ(ಕಿ.ಮೀಗಳಲ್ಲಿ)

ಬೆಂಗಳೂರು–ಮಂಡ್ಯ 92

ಬೆಂಗಳೂರು–ಯಶವಂತಪುರ 5

ಯಶವಂತಪುರ‍–ತುಮಕೂರು 64

ಯಶವಂತಪುರ–ಯಲಹಂಕ 12

ಯಲಹಂಕ–ಬೈಯಪ್ಪನಹಳ್ಳಿ 19

ಯಶವಂತಪುರ–ಬೈಯಪ್ಪನಹಳ್ಳಿ 16

ಯಲಹಂಕ–ದೊಡ್ಡಬಳ್ಳಾಪುರ 20

ಯಲಹಂಕ–ಚಿಕ್ಕಬಳ್ಳಾಪುರ 46

ಬೈಯಪ್ಪನಹಳ್ಳಿ–ಹೊಸೂರು 48

ಬೆಂಗಳೂರು–ಬಂಗಾರಪೇಟೆ 73

ಸೋಲದೇವನಹಳ್ಳಿ–ಕುಣಿಗಲ್ 45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT