ಕಡೂರು: ತಾಲ್ಲೂಕಿನಲ್ಲಿ ಸರಗಳ್ಳತನ ಮತ್ತು ಮನೆಗೆ ನುಗ್ಗಿ ಚಿನ್ನದಾಭರಣ ಕಳವು ಮಾಡಿದ ಎರಡು ಪ್ರತ್ಯೇಕ ಘಟನೆಗಳು ಶುಕ್ರವಾರ ನಡೆದಿವೆ.

ಬೀರೂರು ಬಿಇಒ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರುಣಾ ಅವರು, ಕಡೂರಿನಿಂದ ಬೀರೂರಿಗೆ ಬಂದು ಪ್ರವಾಸಿಮಂದಿರ ಸಮೀಪ ಬಸವೇಶ್ವರ ಸಾಮಿಲ್ ಹಿಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಸರ ಕಸಿದು ಪರಾರಿಯಾಗಿದ್ದಾರೆ.

ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಅರುಣಾ ಅವರ ಕುತ್ತಿಗೆಯಲ್ಲಿದ್ದ 45 ಗ್ರಾಂ. ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ. ಈ ಕುರಿತು ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ತಾಲ್ಲೂಕಿನ ಪಂಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಘಟನೆ ನಡೆದಿದೆ. ತರಕಾರಿ ವ್ಯಾಪಾರಿ ಪ್ರಕಾಶ್ ಅವರು ಗರಗದಹಳ್ಳಿಯ ಜಾತ್ರೆಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಪತ್ನಿ ಗಂಗಮ್ಮ ಅವರ ಕುತ್ತಿಗೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ಅಪಹರಿಸಿದ್ದಾರೆ.

ರಾತ್ರಿ ವೇಳೆ ಮನೆಯ ಬಾಗಿಲಿನ ಚಿಲಕವನ್ನು ಆಯುಧದಿಂದ ಮೀಟಿ ಒಳನುಗ್ಗಿದ ಇಬ್ಬರು ಅಪರಿಚಿತರು ಮನೆಯಲ್ಲಿ ಮಲಗಿದ್ದ ಗಂಗಮ್ಮ ಅವರ ಕುತ್ತಿಗೆಯಲ್ಲಿದ್ದ 63 ಗ್ರಾಂ ತೂಕದ ಎರಡು ಸರ, ತಾಳಿ ಮತ್ತು ಗುಂಡುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮನೆಗೆ ನುಗ್ಗಿದವರು ಮುಖಕ್ಕೆ ಮಾಸ್ಕ್, ಕ್ಯಾಪ್ ಹಾಗೂ ಕೈಗೆ ಗ್ಲೌಸ್ ಧರಿಸಿದ್ದರಿಂದ ಗುರುತು ಪತ್ತೆಯಾಗಿಲ್ಲ. ಈ ಕುರಿತು ಪ್ರಕಾಶ್ ನೀಡಿದ ದೂರಿನ ಮೇರೆಗೆ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.