ಚಿಕ್ಕಮಗಳೂರು: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಸೇರಿ ಬಯಲು ಸೀಮೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ರಸ್ತೆ ವಿಸ್ತರಣೆಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ತಯಾರಿ ಆರಂಭವಾಗಿದ್ದು, ಸರ್ವೆ ಕಾರ್ಯ ಆರಂಭವಾಗಿದೆ.

ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಹಂಚಿಕೊಂಡಿರುವ 24 ಕಿಲೋ ಮೀಟರ್ ಚಾರ್ಮಾಡಿ ಘಾಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 11.2 ಕಿಲೋ ಮೀಟರ್ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 13 ಕಿಲೋ ಮೀಟರ್ ರಸ್ತೆ ಚಾರ್ಮಾಡಿ ಘಾಟಿಯಲ್ಲಿ ಹಾದು ಹೋಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 11 ಹೇರ್ಪಿನ್ ತಿರುವುಗಳಿದ್ದು, ದ್ವಿಮುಖ ರಸ್ತೆ ಅಭಿವೃದ್ಧಿಗೆ ₹343.74 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ 2023–24ನೇ ಸಾಲಿನಲ್ಲಿ ಅನುಮೋದನೆ ನೀಡಿದೆ. ಎಸ್ಎಲ್ವಿ ಅರ್ಥ್ಮೂವರ್ ಲಿಮಿಟೆಡ್ ಕಂಪನಿಗೆ ಕಾಮಗಾರಿ ವಹಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಈ ಸಂದರ್ಭದಲ್ಲಿ ಲಾರಿಗಳು ಕಿಲೋ ಮೀಟರ್ ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿವೆ. ಅಪಘಾತ ತಪ್ಪಿಸಲು ಕೈಗೊಂಡಿರುವ ಕ್ರಮಗಳೇನು ಎಂಬುದರ ಕುರಿತು ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಅವರು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ‘ರಸ್ತೆ ಅತ್ಯಂತ ಕಿರಿದಾಗಿರುವ ಬಗ್ಗೆ ಮಾಹಿತಿ ಇದೆ. ರಸ್ತೆ ಸುರಕ್ಷತೆ ಬಗ್ಗೆ 6 ಚಕ್ರಗಳ ವಾಹನಗಳಿಗೆ ಮಾತ್ರ ಸಂಚಾರ ಸೀಮಿತಗೊಳಿಸಲಾಗಿದೆ. ಈಗ ರಸ್ತೆ ವಿಸ್ತರಣೆಗೆ ಯೋಚಿಸಲಾಗಿದೆ’ ಎಂದು ವಿವರಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ 13 ಕಿಲೋ ಮೀಟರ್ ರಸ್ತೆಯಲ್ಲಿ ಹೇರ್ಪಿನ್ ತಿರುವುಗಳಿಲ್ಲ. ರಸ್ತೆಯನ್ನು 10 ಮೀಟರ್ಗೆ ವಿಸ್ತರಣೆ ಮಾಡಲು ಸರ್ಕಾರ ಉದ್ದೇಶಿಸಿದೆ. ಸಮಗ್ರ ಯೋಜನಾ ವರದಿತಯಾರಿಸಲು ಕೆ ಆ್ಯಂಡ್ ಜೆ ಪ್ರೋಜೆಕ್ಟ್ ಪ್ರೈವೈಟ್ ಲಿಮಿಟೆಡ್ ಸಂಸ್ಥೆಯನ್ನು ಸಮಾಲೋಚಕರನ್ನಾಗಿ ನೇಮಿಸಲಾಗಿದೆ. ಸರ್ವೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಘಾಟಿ ಬಂದ್ ಆಗುವ ಆತಂಕ

ರಸ್ತೆ ಕಾಮಗಾರಿ ಆರಂಭವಾದರೆ, ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಸ್ಥಳೀಯರಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಘಾಟಿ ವ್ಯಾಪ್ತಿಯಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಹೆರ್ಪಿನ್ ತಿರುವುಗಳನ್ನು ಕಾಮಗಾರಿ ನಡೆಸಲು ರಸ್ತೆ ಬಂದ್ ಆಗುವ ಆತಂಕ ಇದೆ ಎಂದು ಕೊಟ್ಟಿಗೆಹಾರದ ನಿವಾಸಿಗಳು ಹೇಳುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಕಾಮಗಾರಿಗೆ ಒಮ್ಮೆ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಘಾಟಿ ರಸ್ತೆ ವಿಸ್ತರಣೆ ಕಾಮಗಾರಿಗೆ ಮತ್ತೊಮ್ಮೆ ರಸ್ತೆ ಬಂದ್ ಮಾಡಿದರೆ ನಾಲ್ಕೈದು ವರ್ಷ ಸಂಚಾರ ಸ್ಥಗಿತಗೊಳ್ಳಲಿದೆ. ರಸ್ತೆ ಬಂದ್ ಆದರೆ ಕರಾವಳಿ ಮತ್ತು ಘಟ್ಟದ ನಾಡಿನ ನಡುವೆ ಸಂಪರ್ಕ ಕಡಿತಗೊಳ್ಳಲಿದೆ. ಘಾಟಿ ನಂಬಿ ಜೀವನ ನಡೆಸುತ್ತಿರುವ ಹೋಟೆಲ್ ಮತ್ತು ಇತರೆ ವಹಿವಾಟು ಸಂಪೂರ್ಣ ನೆಲ ಕಚ್ಚಲಿದೆ ಎಂದು ಕೊಟ್ಟಿಗೆಹಾರದ ಸಾಮಾಜಿಕ ಕಾರ್ಯಕರ್ತ ಸಂಜಯ್ ಆತಂಕ ವ್ಯಕ್ತಪಡಿಸಿದರು.

ರಸ್ತೆ ಬಂದ್ ಮಾಡದೆ ಹಗಲಿನಲ್ಲಿ ಸಂಚಾರ ಮುಕ್ತಗೊಳಿಸಿ, ರಾತ್ರಿ ವೇಳೆ ಕಾಮಗಾರಿ ನಿರ್ವಹಿಸುವುದು ಸೂಕ್ತ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ಅವರ ಮನವಿ.

ಒಟ್ಟು 24 ಕಿಲೋ ಮೀಟರ್ ಘಾಟಿ ರಸ್ತೆ

ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ 13 ಕಿಲೋ ಮೀಟರ್

ರಸ್ತೆ 10 ಮೀಟರ್ಗೆ ವಿಸ್ತರಣೆ ಮಾಡಲು ಯೋಜನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.