ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೋಡಿ: ಚಿರತೆ ದಾಳಿ– ಹಸು ಬಲಿ

Last Updated 20 ಅಕ್ಟೋಬರ್ 2020, 4:58 IST
ಅಕ್ಷರ ಗಾತ್ರ

ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಮರೋಡಿ ಗ್ರಾಮದ ನಡುಚ್ಚೂರು ಎಂಬಲ್ಲಿ ಚಿರತೆ ದಾಳಿಯಿಂದ ಹಸುವೊಂದು ಸೋಮವಾರ ಬಲಿಯಾಗಿದೆ.

ದಿವಾಕರ ಹೆಗ್ಡೆ ಅವರ ಹಸುವಿನ ಮೇಲೆ ದಾಳಿ ಮಾಡಿದ ಚಿರತೆಯು, ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲ ದಿನಗಳ ಹಿಂದೆ ಹರೀಶ್‌ ಹೆಗ್ಡೆ ಅವರ ಕರುವೊಂದನ್ನು ಚಿರತೆ ತಿಂದು ಹಾಕಲಾಗಿತ್ತು.

ಅರಣ್ಯ ಇಲಾಖೆಗೆ ಗ್ರಾಮಸ್ಥರು ಸುದ್ದಿ ಮುಟ್ಟಿಸಿದ್ದು, ತಕ್ಷಣ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

‘ಮೂರು ದಿನಗಳ ಹಿಂದೆ ಕುತ್ಲೂರಿನ ಬಜಿಲಪಾದೆಯಲ್ಲಿ ಚಿರತೆಯೊಂದು ಪತ್ತೆಯಾಗಿತ್ತು. ಅದೇ ಚಿರತೆ ಇಲ್ಲಿಯೂ ದಾಳಿ ಮಾಡಿರುವ ಶಂಕೆಯಿದೆ. ಬಜಿಲಪಾದೆಯಲ್ಲಿ ಬೋನು ಇಟ್ಟಿದ್ದೇವೆ. ಮಂಗಳವಾರವೇ ನಡುಚ್ಚೂರು ಪರಿಸರದಲ್ಲಿಯೂ ಬೋನು ಇಟ್ಟು, ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತೇವೆ’ ಎಂದು ವೇಣೂರು ವಲಯ ಅರಣಾಧಿಕಾರಿ ಮಹೀಂ ಜನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT