ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮಕ್ಕಿಂತ ಜ್ಞಾನಕ್ಕೆ ಆದ್ಯತೆಯಿರಲಿ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಅಜ್ಜಂಪುರ: ಭಗೀರಥ ಮಹರ್ಷಿ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Last Updated 4 ಜುಲೈ 2022, 7:19 IST
ಅಕ್ಷರ ಗಾತ್ರ

ಅಜ್ಜಂಪುರ: ‘ಕಠೋರ ತಪಸ್ಸಿನಿಂದ ದೇವ ಗಂಗೆಯನ್ನು ಧರೆಗಿಳಿಸಿ, ಜೀವಜಲ ನೀಡಿದ ಕೀರ್ತಿ ಭಗೀರಥ ಮಹರ್ಷಿಗೆ ಸಲ್ಲುತ್ತದೆ. ಬದುಕಿಗೆ ಆಧಾರವಾದ ಉಪ್ಪನ್ನು ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಉಪ್ಪಾರ ಸಮಾಜಕ್ಕೆ ಸಲ್ಲುತ್ತದೆ’ ಎಂದು ಮಧುರೆಯ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಭಗೀರಥ ಮಹರ್ಷಿ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು.

ಶಾಸಕ ಡಿ.ಎಸ್. ಸುರೇಶ್, ಉಪ್ಪಾರ ಸಮಾಜದವರು ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಇದ್ದಾರೆ. ಸಮಾಜ ಸಂಘಟಿತವಾಗಲು ಮಹರ್ಷಿ ಭಗೀರಥ ಜಯಂತಿ ವೇದಿಕೆಯಾಗಿದೆ ಎಂದರು.

‘ನಂದೀಪುರದ ಅರೇಕಲ್ಲಮ್ಮ ದೇವಿ ದೇವಾಲಯ ನಿರ್ಮಾಣಕ್ಕೆ ₹ 25 ಲಕ್ಷ ಮಂಜೂರಾಗಿದ್ದು, ಮೊದಲ ಕಂತಿನಲ್ಲಿ ₹ 2.5 ಲಕ್ಷದ ಚೆಕ್ ವಿತರಿಸಲಾಗಿದೆ. ಅಜ್ಜಂಪುರದ ಭಗೀರಥ ಸಮುದಾಯ ಭವನ ನಿರ್ಮಾಣಕ್ಕೆ ₹ 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್, ಮಹರ್ಷಿ ಭಗೀರಥ ಅವರ ಛಲ, ಸಾಧನೆ ಬದುಕಿಗೆ ಪ್ರೇರಕವಾಗಿವೆ ಎಂದರು. ಸಮಾಜ ಸೇವಕ ದೋರನಾಳು ಪರಮೇಶ್ ಮಾತನಾಡಿದರು.ನಿವೃತ್ತ ತಹಶೀಲ್ದಾರ್ ಬಾಬುರಾವ್ಉ ಪನ್ಯಾಸ ನೀಡಿದರು. ಸಮಾಜ ಸೇವಕ ಗೋಪಿಕೃಷ್ಣ, ತಾಲ್ಲೂಕು ಉಪ್ಪಾರ ಸಂಘ ಅಧ್ಯಕ್ಷ ಎಸ್. ಮಂಜುನಾಥ್, ಕರ್ನಾಟಕ ಉಪ್ಪಾರ ನಿಗಮ ಅಧ್ಯಕ್ಷ ಗಿರೀಶ್ ಉಪ್ಪಾರ, ಲಕ್ಷ್ಮೀಕಾಂತ್ , ಉಪ್ಪಾರ ಯುವಕ ಸಂಘ ಅಧ್ಯಕ್ಷ ವೆಂಕಟೇಶ ಸಿಂದನೂರು, ಉಪಾಧ್ಯಕ್ಷ ಎನ್.ಜಯಸಿಂಹ ಮಾತನಾಡಿದರು.

ಜಿಲ್ಲಾಧ್ಯಕ್ಷ ಮಲ್ನಾಡ್ ನಾಗರಾಜು, ಕಾರ್ಯದರ್ಶಿ ಆನಂದಪ್ಪ, ಮೂಡಲಗಿರಿಯಪ್ಪ, ಜಾವೂರು ಕೃಷ್ಣಮೂರ್ತಿ, ಭಗೀರಥ ಸೇವಾ ಸಮಿತಿ ಅಧ್ಯಕ್ಷ ಆರ್. ಕೃಷ್ಣಪ್ಪ, ಮುಖಂಡ ದೇವೇಂದ್ರಪ್ಪ, ರಾಮಚಂದ್ರ, ತಿಪ್ಪೇರುದ್ರಯ್ಯ, ನಟರಾಜ್, ಕಾಂತರಾಜು, ಮಹೇಶ್ ಕುಮಾರ್, ನಾಗವಂಗಲ ಕುಮಾರ್ ಇದ್ದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT