ಆಲ್ದೂರು (ಚಿಕ್ಕಮಗಳೂರು): ಸಮೀಪದ ಅರೇನೂರು ಗ್ರಾಮದ ಬಳಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸ್ಥಳೀಯ ಯುವಕರೊಬ್ಬರು 24 ಗಂಟೆ ಕಳೆದರೂ ಚಿಕಿತ್ಸೆ ಸಿಗದೇ ಯಾತನೆ ಅನುಭವಿಸಿದ ಪ್ರಕರಣ ನಡೆದಿದೆ.

ಆಲ್ದೂರಿನ ಗಾಳಿಗಂಡಿ ವಾರ್ಡಿನ ನಿವಾಸಿ ರವಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಅವರನ್ನು ಅರೇನೂರು ಗ್ರಾಮದ ಸುಪ್ರೀತ್ ಎಂಬುವವರು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕಳಿಸಿದರು. ಜಿಲ್ಲಾ ಸರ್ಜನ್ ಸಲಹೆ ಮೇರೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಹಾಸಿಗೆಯ ಕೊರತೆಯಿಂದ ರೋಗಿಯನ್ನು ದಾಖಲಿಸಿಕೊಳ್ಳಲಿಲ್ಲ.

ನಂತರ ಮಂಗಳೂರಿನ ನಾಲ್ಕು ಖಾಸಗಿ ಆಸ್ಪತ್ರೆಗೆ ಅಲೆದು, ಐದನೇ ಆಸ್ಪತ್ರೆಗೆ ತೆರಳಿದಾಗ ₹80 ಸಾವಿರ ಠೇವಣಿ ಇಟ್ಟರೆ ಮಾತ್ರ ಚಿಕಿತ್ಸೆ ಆರಂಭಿಸುವುದಾಗಿ ಅಲ್ಲಿಯವರು ತಿಳಿಸಿದರು. ಕುಟುಂಬದವರು ಆರ್ಥಿಕವಾಗಿ ಸಬಲರಲ್ಲದ ಕಾರಣ ಮತ್ತೆ ಮಂಗಳೂರಿನಿಂದ ರೋಗಿಯನ್ನು ಆಲ್ದೂರಿಗೆ ಕರೆ ತಂದರು ಎಂದು ಮೂಲಗಳು ತಿಳಿಸಿವೆ.

‘ಚಿಕಿತ್ಸೆಗಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ರೋಗಿಯನ್ನು ಬೆಂಗಳೂರಿನ ನಿಮ್ಹಾನ್ಸ್ಗೆ ಕಳುಹಿಸಿಕೊಡಲಾಯಿತು. ಅಲ್ಲೂ ಕೂಡ ಆಸ್ಪತ್ರೆಯ ಹೊರಗೆ ಒಂದು ಗಂಟೆ ಆಂಬುಲೆನ್ಸ್ನಲ್ಲಿ ಕಾಯ್ದ ಬಳಿಕ ದಾಖಲಿಸಿಕೊಂಡಿದ್ದಾರೆ’ ಎಂದು ರೋಗಿಯ ಸಂಬಂಧಿಕರು ಅಳಲು ತೋಡಿಕೊಂಡರು.

‘ಬಡ ಕಾರ್ಮಿಕರು ಚಿಕಿತ್ಸೆ ಪಡೆಯಲು ಎಷ್ಟೆಲ್ಲಾ ಹರಸಾಹಸ ಪಡಬೇಕು. ಎಷ್ಟೇ ಹೋರಾಟ ಮಾಡಿದರೂ ಸಕಾಲಕ್ಕೆ ಚಿಕಿತ್ಸೆ ದೊರೆಯದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯದ ಸ್ಪಷ್ಟ ನಿದರ್ಶನ’ ಎಂದು ಸಾಮಾಜಿಕ ಕಾರ್ಯಕರ್ತ ಎ.ಯು.ಇಬ್ರಾಹಿಂ ಹೇಳಿದರು.

ಮಾಹಿತಿ ನೀಡಿದ್ದೇವೆ: ‘ರೋಗಿಯನ್ನು ಶಸ್ತ್ರಚಿಕಿತ್ಸೆ ಸಲುವಾಗಿ ನಮ್ಮ ಆಸ್ಪತ್ರೆಗೆ ಕರೆತಂದಾಗ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಷನ್ ವ್ಯವಸ್ಥೆ ಇದ್ದ ಹಾಸಿಗೆಗಳೆಲ್ಲ ಭರ್ತಿಯಾಗಿದ್ದವು. ಹಾಗಾಗಿ ಸಮೀಪದ ಯಾವ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯ ಎಂಬುದನ್ನು ವಿಚಾರಿಸಿ ರೋಗಿಯ ಕಡೆಯವರಿಗೆ ಮಾಹಿತಿ ನೀಡಿದ್ದೇವೆ. ಅಲ್ಲಿಗೆ ಅವರು ರೋಗಿಯನ್ನು ಕರೆದೊಯ್ದಿದ್ದಾರೆ’ ಎಂದು ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಪ್ರಕಾಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಹಾಸಿಗೆ ಲಭ್ಯ ಇದೆಯೇ ಎಂಬುದನ್ನು ವಿಚಾರಿಸದೆಯೇ ಸಮೀಪದ ಜಿಲ್ಲೆಗಳಿಂದ ರೋಗಿಗಳನ್ನು ಇಲ್ಲಿಗೆ ಶಸ್ತ್ರಚಿಕಿತ್ಸೆಗಾಗಿ ಕಳುಹಿಸಿಕೊಡುತ್ತಿದ್ದಾರೆ. ನಮ್ಮಲ್ಲಿ ಐಸಿಯು ಖಾಲಿ ಇದ್ದರೆ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ಒದಗಿಸುತ್ತೇವೆ. ಆದರೆ ಶಸ್ತ್ರಚಿಕಿತ್ಸೆಗೆ ರೋಗಿಗಳನ್ನು ವೆನ್ಲಾಕ್ಗೆ ಕರೆದೊಯ್ಯುವಂತೆ ಬೇರೆ ಜಿಲ್ಲೆಗಳ ವೈದ್ಯರು ಶಿಫಾರಸು ಮಾಡುವ ಮುನ್ನ ಕನಿಷ್ಠ ಪಕ್ಷ ಇಲ್ಲಿ ಐಸಿಯುವಿನಲ್ಲಿ ವೆಂಟಿಲೇಟರ್ ವ್ಯವಸ್ಥೆ ಇರುವ ಹಾಸಿಗೆ ಲಭ್ಯ ಇದೆಯೇ ಎಂದು ವಿಚಾರಿಸಿದರೆ ಸಮಸ್ಯೆ ತಪ್ಪಿಸಬಹುದು’ ಎಂದು ಅವರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-43-417259138

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.