ಆಲ್ದೂರು: ಸಮೀಪದ ಅಡ್ಡಮಕ್ಕಿ ಗ್ರಾಮದಲ್ಲಿ ಸೋಮವಾರ ಸಬ್ ಇನ್ಸ್ಪೆಕ್ಟರ್ ರವಿ ಜಿ.ಎ ನೇತೃತ್ವದಲ್ಲಿ ಕಾನೂನು ಅರಿವು ಮತ್ತು ಸಾರ್ವಜನಿಕ ಸಭೆ ನಡೆಯಿತು.

ಅಡ್ಡಮಕ್ಕಿ ಮತ್ತು ಹರವಿನಗಂಡಿ ಪಾಳ್ಯದ ಗ್ರಾಮಸ್ಥರ ನಡುವೆ ಗಣಪತಿ ಉತ್ಸವ ಆಯೋಜನೆಯ ಜಾಗದ ಕುರಿತು ಇದ್ದ ಗೊಂದಲ ಬಗೆಹರಿಸಿಕೊಳ್ಳುವಂತೆ ಸಭೆಯಲ್ಲಿ ಸಲಹೆ ನೀಡಲಾಯಿತು.

ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಅಶಾಂತಿಯ ವಾತಾವರಣ ಸೃಷ್ಟಿಸುವವರ ವಿರುದ್ಧ ಪ್ರಕರಣ ದಾಖಲಿಸ ಲಾಗುವುದು ಎಂದು ಸಬ್ ಇನ್ಸ್ಪೆಕ್ಟರ್ ರವಿ ಜಿ.ಎ ಎಚ್ಚರಿಕೆ ನೀಡಿದರು.

ಕೆಲವು ಮನೆ ಮತ್ತು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಗ್ರಾಮಸ್ಥರು ದೂರು ನೀಡಿದರು. ಮಾರಾಟ ಮಾಡುವವರ ಕುರಿತು ಸ್ಪಷ್ಟ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕಾನೂನು ಸೌಲಭ್ಯ, ಪೊಕ್ಸೋ ಪ್ರಕರಣ, ತುರ್ತು ಸಂದರ್ಭ 112ರ ಸಹಾಯವಾಣಿ ಕುರಿತ ಮಾಹಿತಿ ನೀಡಲಾಯಿತು. ಎಎಸ್ಐಗಳಾದ ಸತೀಶ್ ನಾಯಕ್, ಪ್ರಸನ್ನ, ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-126-1787319047

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.