ಆಲ್ದೂರು: ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಲ್ಲನ್ಪೇಟೆ ಗ್ರಾಮದಲ್ಲಿ ಬಿಎಸ್ಎನ್ಎಲ್ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಲ್ಲನ್ಪೇಟೆ ದೂರವಾಣಿ ಕೇಂದ್ರವು 1990ರ ದಶಕದಲ್ಲಿ ಕಾರ್ಯಾರಂಭ ಮಾಡಿದ್ದು, ಆರಂಭಿಕ ಹಂತದಲ್ಲಿ ಮೊಬೈಲ್ ಸೇವೆ ಸಮರ್ಪಕವಾಗಿತ್ತು. ಆದರೆ, ಹತ್ತು ವರ್ಷಗಳಿಂದ ನಿರ್ವಹಣೆ ಕಳಪೆಯಾಗಿರುವುದರಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆಯುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಯಲಗುಡಿಗೆ ಗ್ರಾಮದ ಹರೀಶ್ ಮಾತನಾಡಿ, ‘ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಗಮನ ಹರಿಸಬೇಕು. ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರಚಿಸಿರುವ ಸಲಹಾ ಸಮಿತಿಗಳು ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ಗುಲ್ಲನ್ಪೇಟೆಯ ಬಿಎಸ್ಎನ್ಎಲ್ ಕಚೇರಿ ಕಟ್ಟಡ ಗಿಡಗಂಟಿ ಮತ್ತು ಮುಳ್ಳುಪೊದೆಗಳಿಂದ ಆವರಿಸಿಕೊಂಡಿದ್ದು, ನಿರ್ವಹಣೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಹುತೇಕ ಟವರ್ಗಳು ವಿದ್ಯುತ್ ವ್ಯತ್ಯಯದ ಸಂದರ್ಭಗಳಲ್ಲಿ ಜನರೇಟರ್ ಅಥವಾ ಬ್ಯಾಟರಿಗಳನ್ನೇ ಅವಲಂಬಿಸಿವೆ. ಇಂಧನ ತುಂಬಿಸುವುದು ಅಥವಾ ಬ್ಯಾಟರಿ ಬದಲಿಸುವಲ್ಲಿ ವಿಳಂಬವಾದರೆ ಟವರ್ ಸೇವೆ ತಕ್ಷಣ ಸ್ಥಗಿತಗೊಳ್ಳುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಿರಾಜ್ ಅಲಿ ಮಾತನಾಡಿ, ‘ತಾಂತ್ರಿಕ ಸಿಬ್ಬಂದಿ ಕೊರತೆಯೂ ನೆಟ್ವರ್ಕ್ ಸಮಸ್ಯೆಗೆ ಕಾರಣವಾಗಿದೆ. ಬಿಎಸ್ಎನ್ಎಲ್ ತನ್ನ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಅನೇಕ ಗ್ರಾಹಕರು ದೀರ್ಘಕಾಲದಿಂದ ಒಂದೇ ದೂರವಾಣಿ ಸಂಖ್ಯೆಯನ್ನು ಆಧಾರ್, ಬ್ಯಾಂಕ್ ಖಾತೆ ಹಾಗೂ ಇತರೆ ಸೇವೆಗಳಿಗೆ ಜೋಡಿಸಿಕೊಂಡಿದ್ದಾರೆ. ನೆಟ್ವರ್ಕ್ ಸಮಸ್ಯೆಯಿಂದ ಒಟಿಪಿ ಪಡೆಯಲು ತೊಂದರೆ ಉಂಟಾಗುತ್ತಿದ್ದು, ಕೆಲವರು ಬೇರೆ ನೆಟ್ವರ್ಕ್ಗಳಿಗೆ ಸಿಮ್ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.

ಗ್ರಾಹಕರಾದ ಅಶೋಕ್ ಸೂರಪ್ಪನಹಳ್ಳಿ, ತೋಟದಮನೆ ಮುನ್ನ, ಇಮ್ತಿಯಾಜ್, ಅಂಜುಮ್ ಫಯಾಜ್ ಹಾಗೂ ನೂರುಲ್ಲಾ ಮಾತನಾಡಿ, ‘ಅಂತರ್ಜಾಲ ಮತ್ತು ನೆಟ್ವರ್ಕ್ ಸೇವೆ ಅನಿಶ್ಚಿತವಾಗಿರುವುದರಿಂದ ಪಂಚಾಯಿತಿ, ನ್ಯಾಯಬೆಲೆ ಅಂಗಡಿ, ಶಾಲೆ ಹಾಗೂ ಸೈಬರ್ ಕೇಂದ್ರಗಳಲ್ಲಿ ಒಟಿಪಿ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಎಸ್ಎನ್ಎಲ್ ಸಹಾಯಕ ಪ್ರಬಂಧಕ ಶ್ರೀನಿವಾಸನ್ ಪ್ರತಿಕ್ರಿಯಿಸಿ, ‘ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಕೆಲವೇ ದಿನಗಳಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಹಕರಿಂದ ನೇರ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಮಂದಗತಿಯ ಸೇವೆ

‘ಗುಲ್ಲನ್ಪೇಟೆ ಟವರ್ ವ್ಯಾಪ್ತಿಗೆ ಬರುವ ಬಾಸಿನ್ಖಾನ್, ಕಾರೆಮನೆ, ಕಾರೆಹಟ್ಟಿ, ಸತ್ತಿಹಳ್ಳಿ, ಯಲಗುಡಿಗೆ, ಮಾಚಗೊಂಡನಹಳ್ಳಿ ಹಾಗೂ ಹಾಂದಿ ಸೇರಿ ಹಲವು ಗ್ರಾಮಗಳಲ್ಲಿ ಮಂದಗತಿಯ ಸೇವೆಯಿಂದ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿದೆ’ ಎಂದು ಪಾವನಿ ಸೈಬರ್ ಸೆಂಟರ್ ಮಾಲೀಕ ಅರವಿಂದ್ ಬಿ.ಪಿ. ತಿಳಿಸಿದರು.260604-126-1585058503

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.