ಆಲ್ದೂರು: ಪಟ್ಟಣದ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಬುಧವಾರ ಜನಸಂಪರ್ಕ ಸಭೆ ನಡೆಯಿತು.

ವಗರ್ ರಸ್ತೆಯ ದೊಣಗುಡಿಗೆ ಗ್ರಾಮಸ್ಥರು ಮಾತನಾಡಿ, ‘7 ತಿಂಗಳಿಂದ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ಲೈಲ್ನಲ್ಲಿ ಕೆಲವು ಫೀಡರ್ಗಳನ್ನು ಒಟ್ಟಿಗೆ ಸೇರಿಸಿದ ಬಳಿಕ ಈ ಸಮಸ್ಯೆ ಎದುರಾಗಿದೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಮಾರುತಿ, ‘ಸಮಸ್ಯೆ ಸರಿಪಡಿಸಲು ಒಂದೂವರೆ ಕಿ.ಮೀ. ವಿದ್ಯುತ್ ಲೈನ್ ಲಿಂಕ್ ಮಾಡುವ ಅವಶ್ಯಕತೆಯಿದ್ದು, ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ’ ಎಂದು ತಿಳಿಸಿದರು.

‘ಬನ್ನೂರು ಗ್ರಾಮದಿಂದ ಶಂಕರ್ ಫಾಲ್ಸ್ವರೆಗೆ ಕಾಪರ್ ಲೈನ್ ಬದಲಿಸಿ ರಸ್ತೆ ಬದಿಯಲ್ಲಿ ಗುಣಮಟ್ಟದ ಲೈನ್ ಸಂಪರ್ಕ ಕಲ್ಪಿಸಿ ಐದಳ್ಳಿ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಬದಲಿಸಬೇಕು’ ಎಂದು ಸುಪ್ರೀತ್ ಅರೇನೂರು ಒತ್ತಾಯಿಸಿದರು.

‘ಮಳೆಗಾಲ ಆರಂಭವಾಗಿರುವುದರಿಂದ ವಿದ್ಯುತ್ ತಂತಿಗೆ ತಾಗುವ ಮರದ ಕೊಂಬೆಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಮಳೆಗಾಲವನ್ನು ಎದುರಿಸಲು ಇಲಾಖೆ ವತಿಯಿಂದ ಸಿದ್ಧತೆ ನಡೆಸಲಾಗಿದೆ’ ಎಂದು ಎಂಜಿನಿಯರ್ ಮಂಜುನಾಥ್ ತಿಳಿಸಿದರು.

ನವರಾಜು ಎಚ್. ಅವರು, ಕಠಾರದಹಳ್ಳಿ ಗ್ರಾಮದ ಕಡೆಗಳಲ್ಲಿ ಎರಡು ವಿದ್ಯುತ್ ಪರಿವರ್ತಕಗಳಿಗೆ ಮನವಿ ಮಾಡಲಾಗಿತ್ತು. ಅದನ್ನು ಇನ್ನೂ ಪೂರೈಸಿಲ್ಲ ಎಂದರು. ₹10 ಲಕ್ಷ ವೆಚ್ಚದ ವಿದ್ಯುತ್ ಪರಿವರ್ತಕಕ್ಕೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಮಾರುತಿ ತಿಳಿಸಿದರು. ಕೃಪಾಕ್ಷ ಕೋಟ್ಯಾನ್, ಇಲಾಖೆಯಲ್ಲಿನ ಯೋಜನೆಗಳ ಮಾಹಿತಿ ಪಡೆದುಕೊಂಡರು.

ವಗರ್ ರಸ್ತೆ ಗ್ರಾಮದಿಂದ ನಿರಂಜನ್, ಸಂಕೇತ್, ಪೃಥ್ವಿ, ಶರತ್, ವಿಷ್ಣು ಎಚ್.ಜೆ., ರಾಘವೇಂದ್ರ, ಬಾಬಯ್ಯ, ಹರೀಶ್, ಪ್ರವೀಣ್ ಪುಂಡಲೀಕ, ಹರೀಶ್ ಎಚ್.ಸಿ., ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭೀಮಪ್ಪ ಡಿ. ಪತ್ರೋಟ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಉಮೇಶ್ ದೇವರಹಳ್ಳಿ, ಸಹಾಯಕ ಲೆಕ್ಕಾಧಿಕಾರಿ ಸೋನಾಲಿ, ವಿಭಾಗೀಯ ಅಧಿಕಾರಿಗಳಾದ ಕೃಷ್ಣಮೂರ್ತಿ ಬಿ.ಇ., ಗಿರೀಶ್ ಆರ್., ಅಬ್ದುಲ್ ಖಾದರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-126-772732498

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.