ಆಲ್ದೂರು: ಬಸ್ಕಲ್ನಲ್ಲಿ 1977ರಲ್ಲಿ ಆರಂಭವಾಗಿ, 1983ರಲ್ಲಿ ಅಧಿಕೃತ ಧರ್ಮಕೇಂದ್ರವಾಗಿ ರೂಪುಗೊಂಡ ಸೇಂಟ್ ಜೋಸೆಫರ ಚರ್ಚ್ನ 38ನೇ ವಾರ್ಷಿಕ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.

ವಾರ್ಷಿಕೋತ್ಸವದ ಪ್ರಯುಕ್ತ ಚರ್ಚ್ ಪಾಲಕ ಸೇಂಟ್ ಜೋಸೆಫ್ ಅವರ ಹೆಸರಿನಲ್ಲಿ ಮೂರು ದಿನಗಳ ಪೂರ್ವಭಾವಿ ನೋವೇನ ಪ್ರಾರ್ಥನೆ ನಡೆಯಿತು. ಪ್ರಾರ್ಥನಾ ಸಂಸ್ಕಾರವನ್ನು ಫಾ. ಆರೋಗ್ಯ ಸ್ವಾಮಿ (ಬೆಂಗಳೂರು), ಫಾ. ಸುನಿಲ್ ರೋಡ್ರಿಗಸ್ (ಮೂಡಿಗೆರೆ) ಹಾಗೂ ಫಾ. ಜೋಸೆಫ್ ಮಾಡ್ತಾ ನೆರವೇರಿಸಿದರು.

ವಾರ್ಷಿಕ ಮಹೋತ್ಸವದ ದಿನ ಸೇಂಟ್ ಜೋಸೆಫ್ ಅವರ ಪ್ರತಿಮೆಯನ್ನು ಬಸ್ಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಮೆರವಣಿಗೆ ಮೂಲಕ ಚರ್ಚ್ಗೆ ಒಯ್ಯಲಾಯಿತು.

ಬಳಿಕ ನಡೆದ ಹಬ್ಬದ ಬಲಿ ಪೂಜೆಯನ್ನು ಬೆಂಗಳೂರು ಮಹಾ ಧರ್ಮ ಕ್ಷೇತ್ರದ ಮೈಲಸಂದ್ರ ಧರ್ಮಕೇಂದ್ರದ ಗುರು ಫಾ. ಅಂತೋಣಿ ಸ್ವಾಮಿ ನೆರವೇರಿಸಿದರು.

ಹಬ್ಬದ ವಿಶೇಷ ಸಂದೇಶ ನೀಡಿದ ಬೆಳಗಾವಿ ಧರ್ಮಕ್ಷೇತ್ರದ ಗುರು ಫಾ. ಫ್ರಾನ್ಸಿಸ್ ಬುದಿನಿ, ‘ಕುಟುಂಬವೇ ಸಮಾಜ ಮತ್ತು ದೇಶದ ಆಧಾರ. ಸುಸಂಸ್ಕೃತ ಹಾಗೂ ಪ್ರಾರ್ಥನಾ ಜೀವನದ ಮೌಲ್ಯಗಳನ್ನು ಕುಟುಂಬದಲ್ಲಿಯೇ ಕಲಿತವರು ಸಮಾಜಕ್ಕೆ ಮತ್ತು ದೇಶಕ್ಕೆ ಆಸ್ತಿಯಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕುಟುಂಬ ಜೀವನದ ಘನತೆ ಕ್ಷೀಣಿಸುತ್ತಿದ್ದು, ಯುವಜನರು ಬದುಕಿನ ಸವಾಲುಗಳಿಗೆ ಹೊಂದಿಕೊಳ್ಳುವುದಕ್ಕಿಂತ ವಿಚ್ಛೇದನದತ್ತ ಒಲವು ತೋರುತ್ತಿರುವುದು ವಿಷಾದನೀಯ. ಕುಟುಂಬದ ಮಹತ್ವ ಅರಿತು ಪ್ರೀತಿ, ವಾತ್ಸಲ್ಯ ಮತ್ತು ಸಹೋದರತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದರು.

ಹಬ್ಬದ ನೇತೃತ್ವವನ್ನು ಧರ್ಮಕೇಂದ್ರದ ಗುರು ಫಾ. ಜೆಮ್ಸ್ ಚಾರ್ಲಿ ವಹಿಸಿದ್ದರು.

ಚಿಕ್ಕಮಗಳೂರು ಧರ್ಮಕ್ಷೇತ್ರದ ಚಾನ್ಸಲರ್ ಫಾ. ಚಾರ್ಲ್ಸ್ ಪೆರೇರಾ, ಸೇಂಟ್ ಜೋಸೆಫ್ ಪರ ಪ್ರಧಾನಾಲಯದ ಮುಖ್ಯ ಗುರು ಶಾಂತರಾಜ್, ಹಿರಿಯ ಗುರುಗಳಾದ ಲ್ಯಾನ್ಸಿ ಪಿಂಟೊ, ಪೌಲ್ ಮಚಾದೋ ಸೇರಿದಂತೆ ಒಟ್ಟು 29 ಮಂದಿ ಗುರುಗಳು ವಿವಿಧ ಧರ್ಮ ಕೇಂದ್ರಗಳಿಂದ ಭಾಗವಹಿಸಿದ್ದರು.

ಚರ್ಚ್ ವ್ಯಾಪ್ತಿಯ ಗೆಂಡೇಹಳ್ಳಿ, ಹಚ್ಚಡಮನೆ, ಗಬ್ಬಳ್ಳಿ, ಬಸ್ಕಲ್ ಹಾಗೂ ಬಾಳೆಹಳ್ಳಿ ಭಾಗಗಳಿಂದ ಕ್ರೈಸ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-126-986834856

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.