ಚಿಕ್ಕಮಗಳೂರು: ನಗರದ ಅಂಬೇಡ್ಕರ್ ಬೀದಿಯಲ್ಲಿನ ಶಾಂತಿನಗರ ಬಡಾವಣೆಯಲ್ಲಿ ಖಾಸಗಿಯವರು ಒತ್ತುವರಿ ಮಾಡಿದ್ದ ಜಾಗವನ್ನು ಗುರುವಾರ ತೆರವುಗೊಳಿಸಲಾಯಿತು. ಅಂಬೇಡ್ಕರ್ ಭವನ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಜಾಗ ನಿಗದಿ ಮಾಡುವ ಹಲವು ವರ್ಷಗಳ ಹೋರಾಟಕ್ಕೆ ಫಲ ದೊರೆತಿದೆ.

ಸರ್ವೆ ನಂಬರ್ 54, ಖಾತೆ ಸಂಖ್ಯೆ 9999ರಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿತ್ತು. ಒತ್ತುವರಿ ಗುರುತಿಸಿದ್ದ ಅಧಿಕಾರಿಗಳು, ತೆರವುಗೊಳಿಸಲು ಆದೇಶಿಸಿದ್ದರು. ಆದರೂ, ತೆರವು ಕಾರ್ಯ ನನೆಗುದಿಗೆ ಬಿದ್ದಿತ್ತು, ದಲಿತ ಜನಸೇನಾ ಕಾರ್ಯಕರ್ತರ ಒತ್ತಾಯದ ಮೇರೆಗೆ ಗುರುವಾರ ಮಾಡಲಾಯಿತು.

ಪೊಲೀಸ್ ರಕ್ಷಣೆಯಲ್ಲಿ ಕಂದಾಯ ಇಲಾಖೆ ಮತ್ತು ನಗರಸಭೆ ಸಿಬ್ಬಂದಿ ತೆರವು ಮಾಡಿದರು. ಈ ಸಂದರ್ಭದಲ್ಲಿ ಸಮಯಾವಕಾಶ ಕೇಳಿದ ಕಾಫಿ ಕ್ಯೂರಿಂಗ್ ಆಡಳಿತ ಮಂಡಳಿ, ತಾವೇ ತೆರವುಗೊಳಿಸುವುದಾಗಿ ತಿಳಿಸಿದರು. ಆದರೆ, ಸ್ಥಳೀಯರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಇದರಿಂದ ಸ್ಥಳೀಯರು ಹಾಗೂ ಕಾಫಿ ಕ್ಯೂರಿಂಗ್ ಆಡಳಿತ ಮಂಡಳಿಯವರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಎರಡು ಕಡೆಯವರ ಮನವೊಲಿಸಿ ತೆರವು ಕಾರ್ಯಾಚರಣೆ ನಡೆಸಿದರು.

ಹಲವು ವರ್ಷಗಳ ನಮ್ಮ ಬೇಡಿಕೆಗೆ ಇಂದು ನ್ಯಾಯ ದೊರಕಿದೆ. ಈ ಜಾಗ ಬಡವರಿಗೆ ಉಪಯೋಗವಾಗಲಿದೆ ಎಂದು ದಲಿತ ಜನ ಸೇನಾ ಜಿಲ್ಲಾ ಘಟಕ ಅಧ್ಯಕ್ಷ ಅನಿಲ್ ಆನಂದ್ ಹೇಳಿದರು. ತೆರವು ಕಾರ್ಯಾಚರಣೆ ಬಳಿಕ ಸ್ಥಳೀಯರ ಜಯಘೋಷ ಮೊಳಗಿಸಿ ಸಂಭ್ರಮಿಸಿದರು.

ತಾಲ್ಲೂಕು ಕಚೇರಿ ಕಂದಾಯ ಅಧಿಕಾರಿ ಸಂತೋಷ್, ಗ್ರಾಮ ಆಡಳಿತಾಧಿಕಾರಿ ಚೇತನ್, ದೊರೆ, ನಗರಸಭೆ ಸಿಬ್ಬಂದಿ ಮುರುಗೇಶ್, ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-126-910502127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.