ಬಾಳೆಹೊನ್ನೂರು: ಗೋವು ಅಕ್ರಮ ಸಾಗಣೆ, ಒಂಟೆಗಳ ಹತ್ಯೆ ಮತ್ತು ಪ್ರಾಣಿ ವಧೆ ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಿಸುವಂತೆ ಕೋರಿ ಹೇರೂರು ಕಾಮಧೇನು ಗೋ ಶಾಲೆಯ ಅಧ್ಯಕ್ಷ ನಾಗೇಶ ಅಂಗೀರಸ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ಬಕ್ರೀದ್ ಸಂದರ್ಭದಲ್ಲಿ ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿಯವರ ಆದೇಶದಂತೆ ಪ್ರತಿ ಜಿಲ್ಲಾಮಟ್ಟದಲ್ಲಿ ಕಾರ್ಯಪಡೆ ರಚಿಸಬೇಕು. ರಾಜಸ್ಥಾನದ ಹೊರಗೆ ಒಂಟೆಯನ್ನು ಕಳುಹಿಸುವುದು, ಹತ್ಯೆ ಮಾಡುವುದು, ಅದರ ಮಾಂಸ ಸೇವಿಸುವುದು ಕಾನೂನು ಬಾಹಿರ.

ವಾಹನದಲ್ಲಿ ಅನಧಿಕೃತವಾಗಿ ಗೋ ಸಾಗಾಟ ಮಾಡಿದಲ್ಲಿ 2020ರ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ವಾಹನ, ಮನೆ, ಕಟ್ಟಡ ಮುಟ್ಟುಗೋಲು ಹಾಕಲು ಅವಕಾಶವಿದೆ. ಆದರೆ ಜಿಲ್ಲೆಯಲ್ಲಿ ಅಕ್ರಮ ಗೋಹತ್ಯೆ, ಸಾಗಾಟ, ಕಳ್ಳತನ ನಿರಂತರ ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆಗೆ ಸವಾಲಾಗಿದೆ. ಅಕ್ರಮ ಮಟ್ಟಹಾಕಬೇಕಾದ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ಜಿಲ್ಲಾಡಳಿತ ತಕ್ಷಣ ಅಕ್ರಮ ಗೋ ಸಾಗಾಟ, ಹತ್ಯೆಯನ್ನು ತಡೆಯಬೇಕು’ ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-126-1516706739

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.