ಚಿಕ್ಕಮಗಳೂರು: ಕೆಂಪನಹಳ್ಳಿಯ ಅಂತರಘಟ್ಟಮ್ಮದೇವಿ ದೇವಾಲಯದ ನೂತನ ಗೋಪುರ ಬ್ರಹ್ಮಕಲಶ ಪ್ರತಿಷ್ಠಾಪನಾ ಮಹೋತ್ಸವ ಮೇ 14 ಮತ್ತು 15ರಂದು ಜರುಗಲಿದೆ ಎಂದು ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್ ತಿಳಿಸಿದರು.

ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೇ 14ರಂದು ಸಂಜೆ 5.35ರಿಂದ 6.35ರೊಳಗೆ ಗೋದೂಳಿ ಲಗ್ನದಲ್ಲಿ ಅಗ್ರೋದಕ ಗಂಗಾ ಪೂಜೆ, ದೇವಾಲಯ ಪ್ರವೇಶ, ಮಹಾಗಣಪತಿ ಪೂಜೆ, ಪುಣ್ಯಾಹ ಶುದ್ಧಿ, ಕಲಶ ಪೂಜೆ, ಪರಿವಾರ ದೇವತಾ ಪೂಜೆ, ಪ್ರಧಾನ ಕಲಶ ಪೂಜೆಗಳು, ಮಂಡಲ ಪೂಜೆ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ವಾಸ್ತು ಹೋಮ, ಶಾಂತಿ ಹೋಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಮೇ 15ರಂದು ಬೆಳಿಗ್ಗೆ 6ರಿಂದ ಕುಂಭಾಭಿಷೇಕದ ಕಲಶ ಪೂಜೆ ನಂತರ, ಕಲಶಗಳ ಮೆರವಣಿಗೆ ಆರಂಭಗೊಂಡು ದೇವಾಲಯಕ್ಕೆ ಪ್ರವೇಶ ಬಳಿಕ ದೇವಿಯವರಿಗೆ ಹಾಗೂ ಶಿಖರ ಕಲಶಕ್ಕೆ ರುದ್ರಾಭಿಷೇಕ, ಶ್ರೀಸೂಕ್ತ ಅಭಿಷೇಕ, ಕುಂಭಾಭಿಷೇಕ ನಡೆಯಲಿದೆ. ಬೆಳಿಗ್ಗೆ 9.15ರಿಂದ 10.15ರೊಳಗೆ ಮಿಥುನ ಲಗ್ನದಲ್ಲಿ ಗೋಪುರ ಬ್ರಹ್ಮಕಲಶ ಪ್ರತಿಷ್ಠಾಪನೆ, ನಂತರ ದೃಷ್ಟಿ ಪೂಜೆ, ಪ್ರಧಾನ ಹೋಮ, ಕಲಾ ಹೋಮ, ಮಹಾ ಪೂರ್ಣಾಹುತಿ ಸಮರ್ಪಣೆ, ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಮುಖಂಡರಾದ ಗಾಯತ್ರಿ ಶಾಂತೇಗೌಡ, ಲೈಫ್ಲೈನ್ ಫೀಡ್ಸ್ (ಇಂಡಿಯಾ) ಸಂಸ್ಥೆಯ ಮುಖ್ಯಸ್ಥ ಕಿಶೋರಕುಮಾರ್ ಹೆಗ್ಡೆ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಲಲಿತಾ ರವಿನಾಯ್ಕ, ಅಂತರಘಟ್ಟಮ್ಮ ದೇವಸ್ಥಾನ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ರವಿನಾಯ್ಕ, ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-126-2122648443

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.