ಚಿಕ್ಕಮಗಳೂರು: ಆಟೊ ಗ್ಯಾಸ್ ದರವನ್ನು ಏಕರೂಪದಲ್ಲಿ ನಿಗದಿ ಮಾಡುವಂತೆ ಆಗ್ರಹಿಸಿ ಕನ್ನಡಸೇನೆ ಆಟೊ ಚಾಲಕರ ಘಟಕದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ‘ನಗರದ ಗ್ಯಾಸ್ ಏಜೆನ್ಸಿಗಳು ಒಂದೊಂದು ಬಂಕ್ನಲ್ಲಿ ಒಂದೊಂದು ರೀತಿಯ ದರ ನಿಗದಿ ಮಾಡಿಕೊಂಡಿವೆ. ಒಂದು ಬಂಕ್ನಲ್ಲಿ ಕೆ.ಜಿ ಗ್ಯಾಸ್ಗೆ ₹120 ಇದ್ದರೆ ಮತ್ತೊಂದು ಬಂಕ್ನಲ್ಲಿ ₹90 ಇದೆ ಎಂದು ಹೇಳಿದರು.

‘ಯುದ್ಧದ ಕಾರಣದಿಂದ ಗ್ಯಾಸ್ ದೊರೆಯದೆ ಆಟೊ ಚಾಲಕರ ದುಡಿಮೆಗೆ ಪೆಟ್ಟು ಬಿದ್ದಿದೆ. ಈ ನಡುವೆ ಗ್ಯಾಸ್ ಏಜೆನ್ಸಿಗಳು ಒಂದೊಂದು ರೀತಿ ದರ ನಿಗದಿ ಮಾಡಿವೆ. ಬಡ ಚಾಲಕರು ಜೀವನ ನಡೆಸುವುದು ಹೇಗೆ’ ಎಂದು ಪ್ರಶ್ನಿಸಿದರು.

ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಒಂದೇ ದರ ನಿಗದಿ ಮಾಡಬೇಕು. ನಿಗದಿತ ದರದಲ್ಲೇ ಎಲ್ಪಿಜಿ ಗ್ಯಾಸ್ ವಿತರಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಆಟೊ ಚಾಲಕರ ಘಟಕದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ‘ಗ್ಯಾಸ್ ಏಜೆನ್ಸಿಗಳು ದಿನಕ್ಕೊಂದು ದರ ನಿಗದಿ ಮಾಡಿದರೆ ಆಟೊ ಚಾಲಕರು ಬದುಕುವುದು ಕಷ್ಟ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.

ಕನ್ನಡಸೇನೆ ಮುಖಂಡರಾದ ಶಂಕರೇಗೌಡ, ನವೀನ್ಕುಮಾರ್, ವಿಶ್ವನಾಥ್, ಪಾಲಾಕ್ಷಿ, ಹುಣಸೇಮಕ್ಕಿ ಲಕ್ಷ್ಮಣ್, ಷರೀಫ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-126-754142529

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.