ಚಿಕ್ಕಮಗಳೂರು: ಐತಿಹಾಸಿಕ ಅಯ್ಯನಕೆರೆಯಲ್ಲಿ ನೀರು ಖಾಲಿಯಾಗಿದ್ದು, ಇದು ಮಣ್ಣು ಸಾಗಣೆ ದಂಧೆ ಮಾಡುವವರಿಗೆ ವರವಾಗಿ ಪರಿಣಮಿಸಿದೆ. ಯಾರ ಅನುಮತಿಯನ್ನೂ ಪಡೆಯದೆ ಕೆರೆಯ ಒಡಲನ್ನು ಅಡ್ಡಾದಿಡ್ಡಿಯಾಗಿ ಬಗೆದು ಮಣ್ಣು ಸಾಗಿಸುವ ಕಾರ್ಯ ನಡೆದಿದೆ.

118.45 ಹೆಕ್ಟೇರ್ ವಿಸ್ತೀರ್ಣದ ಕೆರೆಯು 420 ಎಂಸಿಎಫ್ಟಿ (ಮಿಲಿಯನ್ ಕ್ಯುಬಿಕ್ ಮೀಟರ್) ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 1,574 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನೂ ಹೊಂದಿದೆ. ಅಷ್ಟೂ ಜಮೀನಿಗೆ ಈ ಕೆರೆಯ ನೀರು ಜೀವನಾಡಿ. ಸಖರಾಯಪಟ್ಟಣಕ್ಕೆ ಕುಡಿಯುವ ನೀರನ್ನೂ ಈ ಕೆರೆಯಿಂದ ಪೂರೈಸಲಾಗುತ್ತಿದೆ.

ಕೆರೆಯ ನೀರು ಈ ಬಾರಿ ಸಂಪೂರ್ಣವಾಗಿ ಖಾಲಿಯಾಗಿದೆ. 20 ವರ್ಷಗಳಿಂದ ನೀರು ಕಡಿಮೆಯಾಗದ ಕಾರಣ ಕೆರೆಯ ಮಧ್ಯಭಾಗದಲ್ಲಿ ಇರುವ ತೂಬಿನಲ್ಲಿ ಬಿದ್ದಿದ್ದ ಕೊಂತ ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಅದನ್ನು ದುರಸ್ತಿ ಮಾಡಲಾಗಿತ್ತು. ಈ ವರ್ಷ ಕೆರೆಯ ಕೋಡಿ ಸಮೀಪ ಇರುವ ತೂಬಿನ ಗೇಟ್ ಸಮಸ್ಯೆಯಾಗಿದ್ದು, ದುರಸ್ತಿ ಅಗತ್ಯವಿದೆ. ಅದಕ್ಕಾಗಿ ನೀರು ಖಾಲಿ ಮಾಡಲಾಗಿದೆ.

ಕೆರೆ ನೀರು ಖಾಲಿಯಾಗಿರುವುದು ಮಣ್ಣು ಲೂಟಿಕೋರರಿಗೆ ಲಾಭವಾಗಿದೆ. ಕೆರೆಗೆ ಜೆಸಿಬಿಗಳನ್ನು ಇಳಿಸಿ ಒಡಲು ಬಗೆಯಲಾಗುತ್ತಿದೆ. ಅಲ್ಲಲ್ಲಿ ಜೆಸಿಬಿ ಮತ್ತು ಟಿಪ್ಪರ್ಗಳು ಹಗಲು ರಾತ್ರಿ ಎನ್ನದೆ ಕೆರೆಯಲ್ಲಿ ಇಳಿಸಿ ಮಣ್ಣು ಮೇಲೆತ್ತಲಾಗಿದೆ. ಅಲ್ಲಲ್ಲಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. 20ರಿಂದ 30 ಅಡಿ ಆಳದ ತನಕ ಒಡಲನ್ನು ಬಗೆಯಲಾಗಿದೆ. ಗೋಡು ಮಿಶ್ರಿತ ಕಪ್ಪು ಮಣ್ಣಿರುವ ಜಾಗವನ್ನು ಹುಡುಕಿ ಅಲ್ಲಿ ಹೆಚ್ಚು ಆಳಕ್ಕೆ ಬಗೆಯಲಾಗಿದೆ.

ಮೂರ್ನಾಲ್ಕು ಕಡೆಗಳಲ್ಲಿ ಜೆಸಿಬಿ ಮತ್ತು ಹಿಟಾಚಿ ಇಳಿಸಿ ಕೆರೆ ಬಗೆಯಲಾಗಿದೆ. ಈ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಅನುಮತಿ ಪಡೆಯದೆ ಮಣ್ಣು ಸಾಗಿಸಲಾಗುತ್ತಿದೆ. ಕೆರೆಯ ವ್ಯಾಪ್ತಿಯಲ್ಲಿ ಏಳು ಕಡೆ ನಡುಗಡ್ಡೆಗಳಿದ್ದು, ಅವುಗಳ ಮರೆಯಲ್ಲಿ ಒಡಲು ಬಗೆಯಲಾಗುತ್ತಿದೆ. ನಡುಗಡ್ಡೆಗಳ ಒಡಲನ್ನೂ ಅಗೆಯುವ ಪ್ರಯತ್ನ ನಡೆದಿದೆ. ಅಲ್ಲದೆ, ವೇದಾ ಹಳ್ಳ ಅಯ್ಯನಕೆರೆಗೆ ಸೇರುವ ಜಾಗದಲ್ಲೇ ದೊಡ್ಡ ಪ್ರಮಾಣದಲ್ಲಿ ಅಗೆಯಲಾಗಿದೆ.

ಕಳೆದ ವರ್ಷವೂ ಇದೇ ರೀತಿ ಮಣ್ಣಿನ ಲೂಟಿಯಾಗಿತ್ತು. ಅಧಿಕಾರಿಗಳು ಗಮನ ಹರಿಸದೆ ಇರುವುದರಿಂದ ಪ್ರತಿವರ್ಷ ಮಣ್ಣು ಕಳ್ಳ ಸಾಗಣೆ ನಡೆಯುತ್ತಿದೆ. ಕೂಡಲೇ ಮಣ್ಣು ಸಾಗಣೆ ತಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಯ್ಯನಕೆರೆಗೆ ತೊಂದರೆಯಾಗಲಿದೆ ಎಂಬುದು ಸ್ಥಳೀಯರ ಆತಂಕ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-126-2075233115

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.