ಚಿಕ್ಕಮಗಳೂರು: ತ್ಯಾಗ, ಬಲಿದಾನ ಹಾಗೂ ಭ್ರಾತೃತ್ವದ ಸಂಕೇತವಾದ ಈದುಲ್ ಅಝಾಹ್(ಬಕ್ರೀದ್) ಹಬ್ಬವನ್ನು ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಗುರುವಾರ ಆಚರಿಸಲಾಯಿತು.

ಕಳೆದ ಒಂದು ವಾರದಿಂದಲೇ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿತ್ತು. ಗುರುವಾರ ಬೆಳಿಗ್ಗೆ ಬಿಳಿ ಬಟ್ಟೆ ತೊಟ್ಟು ಮಸೀದಿ, ಈದ್ಗಾ ಮೈದಾನಗಳಿಗೆ ತಂಡೋಪ ತಂಡವಾಗಿ ಬಂದ ಮುಸ್ಲಿಮರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೌಲ್ವಿಗಳು ಸಂದೇಶ ಮತ್ತು ಪ್ರವಚನ ನೀಡಿದರು.

ಪ್ರಾರ್ಥನೆ ಮುಗಿಸಿದ ನಂತರ ಕಬರಸ್ತಾನಕ್ಕೆ ತೆರಳಿ, ಗೋರಿಗಳಿಗೆ ಹೂ ಸಮರ್ಪಿಸಿ ಹಿರಿಯರನ್ನು ಸ್ಮರಿಸಿದರು. ಪ್ರಾರ್ಥನೆ ಮುಗಿಸಿದ ಬಳಿಕ ಪರಸ್ಪರ ಆಲಂಗಿಸಿ ಶುಭಾಶಯ ಹಂಚಿಕೊಂಡರು.

ಬಡವರು, ನೆರೆ ಹೊರೆಯವರು, ಸಂಬಂಧಿಕರಿಗೆ ಕುರಬಾನಿ ಹಂಚುವುದು ಈ ಹಬ್ಬದ ವಿಶೇಷ. ಬಿರಿಯಾನಿ, ಪಾಯಸ, ಜಾಮೂನು, ಹಣ್ಣುಗಳಿಂದ ತಯಾರಿಸಿದ ಕಸ್ಟರ್ಡ್, ಶಾವಿಗೆ ಸೇರಿ ಬಗೆ ಬಗೆಯ ಖಾದ್ಯ ಸಿದ್ಧಪಡಿಸಿಕೊಂಡು ಸವಿಯುವುದು ಎಲ್ಲರ ಮನೆಯಲ್ಲೂ ಸಾಮಾನ್ಯ. ಇದೇ ರೀತಿ ಈ ವರ್ಷವೂ ಎಲ್ಲರ ಮನೆಯಲ್ಲೂ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.

ಮಸೀದಿ ರಸ್ತೆಗಳಲ್ಲಿ ವಾಹನ, ಜನ ದಟ್ಟಣೆ ಇತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ಜಯಪುರ(ಬಾಳೆಹೊನ್ನೂರು): ತ್ಯಾಗ, ಬಲಿದಾನ ಹಾಗೂ ಸಹೋದರತ್ವದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಯಪುರ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಬೆಳಿಗ್ಗೆ ನಡೆದ ವಿಶೇಷ ಈದ್ ನಮಾಜ್ನಲ್ಲಿ ದೇಶದ ಶಾಂತಿ, ಸಮೃದ್ಧಿ ಹಾಗೂ ಸರ್ವರ ಒಳಿತಿಗಾಗಿ ಪ್ರಾರ್ಥಿಸಿದರು.

ಧರ್ಮಗುರು ಬಹು ಮುನೀರ್ ಸಖಾಫಿ ಉಳ್ಳಾಲ ಮಾತನಾಡಿ, ‘ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹೋದರತ್ವ ಮತ್ತು ಸೌಹಾರ್ದ ಬೆಳೆಸಿಕೊಳ್ಳುವ ಅಗತ್ಯವಿದೆ. ಇಸ್ಲಾಂ ಧರ್ಮ ಶಾಂತಿ, ಕರುಣೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುತ್ತದೆ. ಎಲ್ಲ ಸಮುದಾಯದ ಜನರು ಪರಸ್ಪರ ಗೌರವ, ಸಹಕಾರ ಮತ್ತು ಸೌಹಾರ್ದದಿಂದ ಬದುಕುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು’ ಕರೆ ನೀಡಿದರು.

ನಮಾಝ್ ಬಳಿಕ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಕೊಪ್ಪ: ಪಟ್ಟಣ ಒಳಗೊಂಡಂತೆ ತಾಲ್ಲೂಕಿನಲ್ಲಿರುವ ಮುಸ್ಲಿಮರು ಗುರುವಾರ ಬಕ್ರೀದ್ ಹಬ್ಬವನ್ನು ಆಚರಿಸಿದರು.

ಪಟ್ಟಣದ ಮೊಹಿದ್ದೀನ್ ಜುಮ್ಮಾ ಮಸೀದಿ, ಜಾಮಿಯಾ ಮಸೀದಿ, ಮೇಲಿನಪೇಟೆಯ ಮದೀನಾ ಮಸೀದಿ ಮತ್ತು ನೇತಾಜಿ ನಗರದ ನೂರ್ ಮಸೀದಿ, ಜಮಾತ್ ಬಾಂಧವರು ಗುಣವಂತೆ ರಸ್ತೆಯ ಕುವೆಂಪು ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ನಮಾಜ್ ನಿರ್ವಹಿಸಿದರು.

ಕುದುರೆಗುಂಡಿಯ ಮುಹಿದ್ದೀನ್ ಜುಮ್ಮಾ ಮಸೀದಿ, ಹರಿಹರಪುರ, ದೇವರಮನೆ, ಮತ್ವಾನಿಯ ಒಟ್ಟು ನಾಲ್ಕು ಮಸೀದಿಗಳಲ್ಲಿ, ನಾರ್ವೆ ಮಸೀದಿ, ಜಯಪುರ, ಶಾಂತಿಪುರ, ಕೆಸವೆ ರಸ್ತೆ ಮಸೀದಿ, ಪಟ್ಟಣದ ಸಮೀಪದ ಸಣ್ಣಕೆರೆ, ಜೋಗಿಸರ, ರಾಘವೇಂದ್ರ ನಗರದ ನೂರುಲ್ ಅಲಂ, ನೇತಾಜಿ ನಗರದ ಅಲ್ ಬದ್ರಿಯಾ ಮಸೀದಿಗಳಲ್ಲಿ ಈದ್ ನಮಾಝ್ ನೆರವೇರಿಸಿದರು.

ನಮಾಜ್ ಬಳಿಕ ಖುತ್ಬಾ ಪಾರಾಯಣ, ಯಾಸೀನ್ ಸಾಮೂಹಿಕ ಪ್ರಾರ್ಥನೆ, ಧರ್ಮಗುರುಗಳು ಬಕ್ರೀದ್ ಸಂದೇಶ ನೀಡಿದರು. ಸಮುದಾಯದಿಂದ ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಸಮುದಾಯವು ತಮ್ಮ ಜಮಾತ್ ವ್ಯಾಪ್ತಿಯಲ್ಲಿರುವ ಕಬರಿಸ್ತಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

‘ಸಾಮರಸ್ಯ, ಸಮಾನತೆಯ ಸಂಕೇತ ಬಕ್ರೀದ್’

ತರೀಕೆರೆ: ಪಟ್ಟಣದ ಎಲ್ಲಾ ಮಸೀದಿಗಳಿಂದ ಮೆರವಣಿಗೆ ಮೂಲಕ ಲಾಲ್ ಬಾಗ್ ಈದ್ಗಾ ಮೈದಾನಕ್ಕೆ ಬಂದು, ಸಾಮೂಹಿಕ ನಮಾಜ್ ನಿರ್ವಹಿಸಿದರು.

ಸಂದೇಶ ನೀಡಿದ ಬಜಾರ್ ಮಸೀದಿಯ ಮೌಲಾನ ಆಖಿಲ್ ರಜಾ, ಸಾಮರಸ್ಯ ಹಾಗೂ ಸಮಾನತೆಯ ಸಂಕೇತವಾಗಿ ಬಕ್ರೀದ್ ಆಚರಿಸಲಾಗುತ್ತದೆ. ಬಲಿದಾನ ಹಾಗೂ ತ್ಯಾಗದ ಮಹತ್ವವನ್ನು ಬಕ್ರೀದ್ ಹೊಂದಿದೆ ಎಂದು ಹೇಳಿದರು.

ವಿವಿಧ ಮಸೀದಿಯ ಪದಾಧಿಕಾರಿಗಳು, ಧರ್ಮಗುರುಗಳು ಹಾಗೂ ಗಣ್ಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ನರಸಿಂಹರಾಜಪುರ: ಬಕ್ರೀದ್ ಪ್ರಯುಕ್ತ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಸಮೀಪವಿರುವ ಜಾಮಿಯಾ ಮಸೀದಿಯಲ್ಲಿ ಮಂಗಳವಾರ ಬೆಳಿಗ್ಗೆ ಸೇರಿದ ಮುಸ್ಲಿಮರು ಇಲ್ಲಿಂದ ಜೈಲ್ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ಮೆರವಣಿಗೆಯ ಮೂಲಕ ತೆರಳಿದರು. ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ (ನಮಾಜ್ ) ಸಲ್ಲಿಸಿದರು. ಜಾಮಿಯಾ ಮಸೀದಿಯ ಗುರುಗಳಾದ ಅಮ್ಜದ್ ಖಾನ್ ವಿಶೇಷ ಉಪನ್ಯಾಸ ನೀಡಿದರು.

ಅಲ್ ನೂರ್ ಮಸೀದಿಯ ಗುರುಗಳಾದ ಅಬ್ದುಲ್ಲಾ, ಮಸ್ಜಿದ್ ಇಮರಿಯಮ್ನ ಗುರುಗಳು ಅಬ್ದುಲ್ ಖುದುಸ್, ನೂರುಲ್ ಹುದಾ ಶಾಫಿ ಮದ್ರಸಾ ಗುರುಗಳಾದ ದಾವೂದ್ ಭಾಗವಹಿಸಿದ್ದರು. ನಮಾಜ್ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಕಂಡು ಬಂತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-126-298853451

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.