ಆಲ್ದೂರು: ಸಮೀಪದ ಮಾಚಗೊಂಡನಹಳ್ಳಿ ಬೇರುಗಂಡಿ ಬೃಹನ್ಮಠದಲ್ಲಿ ಶನಿವಾರ ಮಂಡಲ ಬಿಜೆಪಿ ವತಿಯಿಂದ ಪಂಡಿತ್ ದೀನದಯಾಳ್ ಪ್ರಶಿಕ್ಷಣ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರ ಉದ್ಘಾಟಿಸಿದ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್, ‘ಬಿಜೆಪಿ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿ ಬೆಳೆಯುವಲ್ಲಿ ದೀನದಯಾಳ್ ಉಪಾಧ್ಯಾಯರ ಕೊಡುಗೆ ಅಪಾರ. ಪಕ್ಷ ಮೊದಲು ಎಂಬ ಸಿದ್ಧಾಂತದಡಿ, ತ್ಯಾಗ ಮನೋಭಾವದಿಂದ ಪಕ್ಷ ಕಟ್ಟಿದ ಪರಿಣಾಮ ಬಿಜೆಪಿ ಈ ಹಂತಕ್ಕೆ ಬೆಳೆದಿದೆ’ ಎಂದರು.

ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದಲ್ಲಿ ಅಧಿಕಾರ ವಿಕೇಂದ್ರೀಕರಣ ತತ್ವವನ್ನು ಅನುಸರಿಸಿ ಮಾದರಿ ಆಡಳಿತ ನೀಡಿದ ಬಿಜೆಪಿ, ಇಂದು ನರೇಂದ್ರ ಮೋದಿ ನಾಯಕತ್ವದಲ್ಲಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಯಾವುದೇ ಜಾತಿ ಭೇದ, ಧರ್ಮಗಳ ವಿರುದ್ಧ ದ್ವೇಷ ಬಿತ್ತುವ ಸಿದ್ಧಾಂತವನ್ನು ಸಂಘ ಪರಿವಾರ ಮತ್ತು ಬಿಜೆಪಿ ಅಳವಡಿಸಿಕೊಂಡಿಲ್ಲ. ಎಲ್ಲರನ್ನೂ ಒಮ್ಮತದಿಂದ ನೋಡುವ, ದೇಶಭಕ್ತಿಯನ್ನು ವೃದ್ಧಿಸುವ ತತ್ವವನ್ನು ಬೋಧಿಸುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, ಪಕ್ಷವನ್ನು ಸದೃಢಗೊಳಿಸಿ, ಕಾರ್ಯಕರ್ತರನ್ನು ಸಮರ್ಥರಾಗಿಸಲು ಏಳು ಅವಧಿಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಶಿಕ್ಷಣ ವರ್ಗದ ಸಂಚಾಲಕ ಹೆಡದಾಳು ಸಂಪತ್, ಸಹ ಸಂಚಾಲಕ ಜಿಲ್ಲಾ ಕಿಸಾನ್ ಕಾರ್ಯದರ್ಶಿ ದಿನೇಶ್ ಮುಗುಳುವಳ್ಳಿ, ಮುಖಂಡ ರಾದ ದೀಪಕ್ ದೊಡ್ಡಯ್ಯ, ರವೀಂದ್ರ ಬೆಳವಾಡಿ, ಡಾ. ನರೇಂದ್ರ, ಪುಣ್ಯಪಾಲ್, ವೀಣಾ ಶೆಟ್ಟಿ, ಸೀತಾರಾಮ್ ಭರಣ್ಯ, ಚೈತ್ರಶ್ರೀ ಮಾಲತೇಶ್, ರಾಜೀವ್, ಸಂಗೀತ, ರಾಜು ಮಾಣೆನಹಳ್ಳಿ, ಮನು ರಾಮ್, ಚಂಪಾ ಜಗದೀಶ್, ಕೃಷ್ಣಮೂರ್ತಿ, ಜ್ಯೋತಿ ಸುರೇಶ್, ರವೀಂದ್ರ ಆನಿಗನಹಳ್ಳಿ, ಅರವಿಂದ ಕೂದುವಳ್ಳಿ, ಮಹೇಶ್ ಕೆರೆಮಕ್ಕಿ, ನಾಗೇಶ್ ಬೂತನಕಾಡು, ನಾಗೇಶ್ ಬೈಗೂರು, ನಾರಾಯಣ ಆಚಾರ್ಯ, ಪ್ರಸನ್ನ ಕೆಳಗಣೆ, ಯೋಗೇಶ್, ಸಿಂಧು ಕುಮಾರ್, ನಾಗೇಶ್ ಡಿಜೆ, ಕೃಷ್ಣ ಸಿರ್ಗಾಪುರ, ಶಶಿ ಹಂಗರವಳ್ಳಿ ಭಾಗವಹಿಸಿದ್ದರು.

ಸಮಾರೋಪದಲ್ಲಿ ಬೇರುಗಂಡಿ ಮಠದ ಪೀಠಾಧ್ಯಕ್ಷ ರೇಣುಕಾ ಮಹಂತ ಶಿವಾಚಾರ್ಯ, ಮುಖಂಡ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಕವೀಶ್, ಭವ್ಯ ನಟೇಶ್, ಪ್ರತಿಭಾ ನವೀನ್, ನಳೀನಾಕ್ಷಿ, ದೀಪಾ ನಾಗೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-126-734832401

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.