ಚಿಕ್ಕಮಗಳೂರು: ಬೋಗಸ್ ಕಾರ್ಮಿಕರ ಕಾರ್ಡ್ಗಳನ್ನು ರದ್ದುಪಡಿಸಬೇಕು ಮತ್ತು ನಿಜವಾದ ಕಾರ್ಮಿಕರನ್ನು ಪಟ್ಟಿಯಿಂದ ಕೈಬಿಡಬಾರದು ಎಂದು ಆಗ್ರಹಿಸಿ ಕಟ್ಟಡ ಕಾರ್ಮಿಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿದ ಕಾರ್ಮಿಕರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ವಸಂತ್ ಕುಮಾರ್ ಮಾತನಾಡಿ, ‘ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಫಲಾನುಭವಿ ಕಾರ್ಮಿಕರು ನೈಜ ಕಾರ್ಮಿಕರಾಗಿದ್ದರೂ ಮಂಡಳಿಯ ಸರ್ವರ್ನ ತಾಂತ್ರಿಕ ದೋಷದಿಂದ ಹೊಸ ನೊಂದಣಿ, ನವೀಕರಣ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಹೇಳಿದರು.

‘ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಜಿಪಿಎಸ್ ಫೋಟೊ ತೆಗೆಯದೆ ಮನೆಯಲ್ಲಿ ಇರುವಾಗ, ಕೆಲಸದ ಸ್ಥಳಗಳಿಂದ ವಾಟ್ಸ್ಆ್ಯಪ್ ಫೋಟೊ ಕಾರ್ಮಿಕರಿಂದ ಕಳುಹಿಸಿಕೊಂಡು ಜಿಪಿಎಸ್ಗೆ ಟ್ಯಾಗ್ ಮಾಡಿ ಸರ್ವರ್ಗೆ ಆಪ್ಲೋಡ್ ಮಾಡಲಾಗುತ್ತಿದೆ’ ಎಂದು ದೂರಿದರು.

ಕಾರ್ಮಿಕ ಸೇವಾ ಕೇಂದ್ರದ ಸಿಬ್ಬಂದಿ ಕೂಡ ನಿಜವಾದ ಕಟ್ಟಡ ಕಾರ್ಮಿಕರ ಕೆಲಸದ ಸ್ಥಳ ಪರಿಶೀಲನೆ ಮಾಡದೆ ರೈತರು ಮತ್ತು ಬೀದಿ ಬದಿ ವ್ಯಾಪಾರಿಗಳು ಎಂದು ಪರಿಶೀಲನಾ ವರದಿಯಲ್ಲಿ ಬರೆದು ಕಾರ್ಮಿಕ ಇಲಾಖೆಗೆ ಕಳುಹಿಸುತ್ತಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ಸೇವಾ ಕೇಂದ್ರದ ವರದಿಯೇ ಅಂತಿಮ ಎಂದು ಹೇಳುತ್ತಿದ್ದಾರೆ. ಹೀಗಾದರೆ ನಿಜವಾದ ಕಟ್ಟಡ ಕಾರ್ಮಿಕರಿಗೆ ನ್ಯಾಯ ದೊರೆಯುವುದಿಲ್ಲ ಎಂದರು.

ಕಾರ್ಮಿಕ ಸೇವಾ ಕೇಂದ್ರದಲ್ಲಿ ಮನಸೋಇಚ್ಛೆ ಕೆಲಸ ಮಾಡುತ್ತಿದ್ದು ಸರಿಯಾದ ಮಾನದಂಡ ಪಾಲಿಸುತ್ತಿಲ್ಲ. ಬೋಗಸ್ ಕಾರ್ಡ್ಗಳನ್ನು ನಿಯಂತ್ರಣ ಮಾಡಲು ಕಾರ್ಮಿಕ ಸೇವಾ ಕೇಂದ್ರವನ್ನು ಜಾರಿ ಮಾಡಿದ್ದರೂ ಕಾರ್ಮಿಕ ಸೇವಾ ಕೇಂದ್ರದ ಬೋಗಸ್ ಕಾರ್ಡ್ಗಳನ್ನು ನಿಯಂತ್ರಣ ಮಾಡುವಲ್ಲಿ ವಿಫಲವಾಗಿವೆ ಎಂದು ದೂರಿದರು.

ಎಲ್ಲಾ ಕಾರ್ಮಿಕರುನ್ನು ಕಚೇರಿಗೆ ಕರೆಯಿಸಿಕೊಂಡು ಕಾರ್ಮಿಕ ಇಲಾಖೆ ಹೊಸ ಮತ್ತು ನವೀಕರಣದ ಕಾರ್ಡ್ಗಳಿಗೆ ಅನುಮೋದನೆ ನೀಡುವುದರಿಂದ ಬೋಗಸ್ ಕಾರ್ಡ್ಗಳ ನಿಯಂತ್ರಣ ಸಾಧ್ಯವಿಲ್ಲ. ಕಾರ್ಮಿಕ ಸೇವಾ ಕೇಂದ್ರದ ಅವಶ್ಯಕತೆ ಮಂಡಳಿಗೆ ಇಲ್ಲ. ಸೇವಾ ಕೇಂದ್ರವನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎ. ಜಯಕುಮಾರ್ ಮಾತನಾಡಿ, ‘ಕಾರ್ಮಿಕ ಮಂಡಳಿ ಹೊಸ ಮತ್ತು ನವೀಕರಣದ ಅರ್ಜಿಗಳಿಗೆ ಶುಲ್ಕ ವಿಧಿಸಿರುವುದನ್ನು ಸ್ಥಗಿತಗೊಳಿಸಬೇಕು. ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲು ಮಂಡಳಿಯ ನಿಧಿಯಿಂದ ₹600 ಕೋಟಿ ಪಡೆಯುವುದನ್ನು ನಿಲ್ಲಿಸಬೇಕು. ಕಾರ್ಮಿಕ ಸೇವಾ ಕೇಂದ್ರದವರು ಮಂಡಳಿಯ ಮಾನದಂಡದಂತೆ ಕಾರ್ಯವನ್ನು ನಿರ್ವಹಿಸಬೇಕು’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ. ರಘು ಮಾತನಾಡಿ, ಕಟ್ಟಡ ಕಾರ್ಮಿಕರು ಅನಾರೋಗ್ಯದಿಂದ ಒಂದು ದಿನ ಆಸ್ಪತ್ರೆಗೆ ದಾಖಲಾದರೂ ಅವರ ವೈದ್ಯಕೀಯ ವೆಚ್ಚವನ್ನು ಮಂಡಳಿ ಭರಿಸಬೇಕು. ಮೂರು ದಿನ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ದಾಖಲಾಗಬೇಕೆಂಬ ನಿಯಮವನ್ನು ರದ್ದುಪಡಿಸಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚುವರಿ ಸೆಸ್ ಸಂಗ್ರಹಕ್ಕೆ ಕ್ರಮ ವಹಿಸಬೇಕು ಎಂದರು.

ಕಾರ್ಮಿಕ ಸಂಘದ ತಾಲ್ಲೂಕು ಉಪಾಧ್ಯಕ್ಷ ಸಿ.ಸಿ. ಮಂಜೇಗೌಡ, ಕೆ. ಕುಪ್ಪನ್, ಖಜಾಂಚಿ ಎಂ.ಎಸ್. ಜಾನಕಿ, ಸದಸ್ಯರಾದ ಎ. ಶ್ರೀಧರ್, ದಯಾಕ್ಷಿ, ಸಲೀಂ, ಶ್ರೀನಿವಾಸ್, ಸಿ.ಸಿ. ಮಂಜುನಾಥ್, ಭದ್ರಚಾರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-126-1000282059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.