ಮೂಡಿಗೆರೆ (ಚಿಕ್ಕಮಗಳೂರು): ಬಾಳೂರು ಹೋಬಳಿಯ ಕೆಳಗೂರು ಗ್ರಾಮದ ಮೇಗೂರು ಕಾಫಿ ಎಸ್ಟೇಟ್ನಲ್ಲಿ ಕೂಲಿ ಕಾರ್ಮಿಕರ ಕುಟುಂಬದ ಒಂದೂವರೆ ವರ್ಷದ ಮಗು ಶಿವಂ ನಾಪತ್ತೆಯಾಗಿ, ಮಳೆ ಮತ್ತು ಕತ್ತಲೆ ನಡುವೆಯೂ 12 ಗಂಟೆಗಳ ನಿರಂತರ ಹುಡುಕಾಟದ ನಂತರ ಪತ್ತೆಯಾಗಿದೆ.

ಮಧ್ಯ ಪ್ರದೇಶದ ಕೂಲಿ ಕಾರ್ಮಿಕರ ಕುಟುಂಬ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ತೆರಳಿತ್ತು. ಅಕ್ಕಪಕ್ಕದ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ಮಗು ನಾಪತ್ತೆಯಾಗಿತ್ತು. ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪೋಷಕರು ಮಗು ಕಾಣಿಸದಿರುವುದನ್ನು ಗಮನಿಸಿ ಆತಂಕಕ್ಕೀಡಾಗಿದ್ದರು.

ತಕ್ಷಣವೇ ಬಾಳೂರು ಠಾಣೆ ಪೊಲೀಸರು, ಸ್ಥಳೀಯರು, ಡಾಗ್ ಸ್ಕ್ವಾಡ್ ತಂಡ ಶೋಧ ಆರಂಭಿಸಿತು. ಮಳೆಯ ನಡುವೆಯೇ ಇಡೀ ರಾತ್ರಿ ಪೊಲೀಸರು ತೀವ್ರ ಶೋಧ ನಡೆಸಿದರು.

ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ನೇತೃತ್ವದಲ್ಲಿ, ಬಣಕಲ್ ಸಬ್ ಇನ್ಸ್ಪೆಕ್ಟರ್ ದಿಲೀಪ್ ಹಾಗೂ ಬಾಳೂರು ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದರು.

ನಸುಕಿನಲ್ಲಿ ಮನೆಯಿಂದ 500 ಮೀಟರ್ ದೂರದ ಹಳ್ಳದ ಸಮೀಪದ ಗುಂಡಿಯಲ್ಲಿ ಮಳೆ ಮಧ್ಯೆ ಮಗು ನಡುಗುತ್ತಾ ಕುಳಿತಿತ್ತು. ಮಗು ಕಂಡ ಕ್ಷಣ ಸ್ಥಳೀಯರು, ಕುಟುಂಬದವರುಕಣ್ಣೀರಿಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1964297068

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.