ಚಿಕ್ಕಮಗಳೂರು: ನಗರದಲ್ಲಿ ಮಂಗಳವಾರ ಸಂಜೆ ಸಾಧಾರಣ ಮಳೆ ಸುರಿದು ತಂಪೆರೆಯಿತು.

ಸಂಜೆ 6ಗಂಟೆ ಸುಮಾರಿಗೆ ಗುಡುಗು ಮತ್ತು ಸಿಡಿಲಿನ ಜತೆಗೆ ಮಳೆ ಆರಂಭವಾಯಿತು. ಅರ್ಧ ಗಂಟೆಗಳ ಕಾಲ ಸುರಿದು ಇಳೆಯನ್ನು ತಂಪಾಗಿಸಿತು. ನಗರದಲ್ಲಿ ಸೋಮವಾರ ಮಳೆ ಸುರಿದಿದ್ದರಿಂದ ವಾತಾವರಣ ಕೊಂಚ ತಂಪಾಗಿತ್ತು. ಮಂಗಳವಾರ ಕೂಡ ಮಳೆ ಬಂದಿರುವುದು ಜನರಲ್ಲಿ ಸಂತಸ ಮೂಡಿಸಿದೆ.

ತಂಪೆರದ ಮಳೆರಾಯ: ಆಲ್ದೂರು ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಗುಡುಗು–ಮಿಂಚಿನ ಸಹಿತ ಮಳೆ ಸುರಿಯಿತು.

ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ಜನರಿಗೆ ವರುಣನ ಆಗಮನದಿಂದ ಸಂತಸ ತಂದಿದೆ. ಬಿಸಿಲಿನ ತಾಪಕ್ಕೆ ಕಾಫಿ ತೋಟಗಳಲ್ಲಿ ಗಿಡಗಳು ಸುಟ್ಟು ಹೋಗಿದ್ದು, ಮಳೆಯಿಂದ ರೈತರ ಮೊಗದಲ್ಲಿ ಆಶಾಭಾವನೆ ಮೂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-126-1477750463

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.