ಚಿಕ್ಕಮಗಳೂರು: ‘ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರೊಬ್ಬರ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಗೂಂಡಾ ವರ್ತನೆ ಪ್ರದರ್ಶಿಸಿದರು’ ಎಂದು ಬಿಜೆಪಿ ಮುಖಂಡ ಶ್ರೀಧರ್ ಉರಾಳ್ ಆರೋಪಿಸಿದರು.

‘ರಾಂಪುರ ಸರ್ಕಲ್ನಿಂದ ಮೆಡಿಕಲ್ ಕಾಲೇಜಿನ ತನಕ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆಗಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಬಂದಿದ್ದರು. ನಾನು ಅವರ ಜೊತೆಯಲ್ಲಿ ಇದ್ದೆ, ನಗರಸಭೆ ಕಾಂಗ್ರೆಸ್ ಸದಸ್ಯ ಪರಮೇಶ್ವರ ರಾಜ್ ಅರಸ್ ಮತ್ತು ಇತರರು ಬಂದು ಸಿ.ಟಿ. ರವಿ ಗೋಬ್ಯಾಕ್ ಎಂದು ಕೂಗಿದರು. ಅದಕ್ಕೆ ಉತ್ತರವಾಗಿ ರವಿ ಅವರು ನೀವು ನನ್ನ ವಿರುದ್ಧ ಘೋಷಣೆ ಕೂಗುವಂತಹ ಕೆಟ್ಟ ಕೆಲಸ ನಾನೇನು ಮಾಡಿದ್ದೇನೆ ಎಂದಾಗ ಗಲಾಟೆ ಮಾಡಲು ಯತ್ನಿಸಿದರು’ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಪಿ. ವೆಂಕಟೇಶ್ ಅವರು ಗಲಾಟೆ ತಡೆಯಲು ಹೋದಾಗ ಅವರ ಎದೆ ಹಿಡಿದು ತಳ್ಳಿ ಅಂಗಿ ಹರಿದರು. ಗೂಂಡಾಗಿರಿ ನಡೆಸಿ ರವಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು. ಆದರೆ, ತಮ್ಮ ಹುಳುಕು ಮುಚ್ಚಿಕೊಳ್ಳಲು ಬಿಜೆಪಿಯತ್ತ ಬೆರಳು ಮಾಡುತ್ತಿರುವುದು ಖಂಡನೀಯ’ ಎಂದು ಹೇಳಿದರು.

‘ಕಾಲು ನಡಿಗೆಯಲ್ಲಿ ಆದಿಶಕ್ತಿ ನಗರದ ತನಕ ತೆರಳಿ ಮತ್ತೆ ವಾಹನಗಳಲ್ಲಿ ವಾಪಸ್ ಬರುವಾಗ ಸಿ.ಟಿ. ರವಿ ಅವರ ಕಾರು ತಡೆದು ಗೂಂಡಾಗಿರಿ ಮಾಡಿದರು. ಕಾಂಗ್ರೆಸ್ ಮುಖಂಡರು ಕಾರ್ಯಕರ್ತರೇ ಬಿಜೆಪಿ ಮುಖಂಡರ ಮೇಲೆ ಹಲ್ಲೆ ಮಾಡಿದರು’ ಎಂದು ಆರೋಪಿಸಿದರು.

‘ಸಿ.ಟಿ. ರವಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ 2022-23ನೇ ಸಾಲಿನಲ್ಲಿ ರಾಂಪುರ ಸರ್ಕಲ್ನಿಂದ ಆದಿಶಕ್ತಿನಗರ ಮಾರ್ಗವಾಗಿ ಕೆ.ಆರ್.ಪೇಟೆ ಕೂಡು ರಸ್ತೆ ತನಕದ ಕಾಮಗಾರಿಗೆ ₹8 ಕೋಟಿ ಬಿಡುಗಡೆ ಮಾಡಿಸಿದ್ದರು. 2024ರಲ್ಲೇ ಕಾಮಗಾರಿ ಆರಂಭಿಸಬೇಕಿತ್ತು. ಆದರೆ, ಕಾರ್ಯಾದೇಶ ವಿಳಂಬವಾಗಿ ಸಿಕ್ಕಿದೆ’ ಎಂದು ಹೇಳಿದರು.

‘ವಿದ್ಯುತ್ ಕಂಬಗಳು ಮತ್ತು ಮರಗಳನ್ನು ತೆರವುಗೊಳಿಸದ ಕಾರಣ ವಿಳಂಬವಾಗಿದೆ. ವಾಸ್ತವ ಅರಿಯಲು ಸಿ.ಟಿ. ರವಿ ಅವರು ಕಾಮಗಾರಿ ವೀಕ್ಷಣೆಗೆ ತೆರಳಿದ್ದರು. ಕಾಮಗಾರಿ ಶ್ರೇಯಸ್ಸು ರವಿ ಅವರಿಗೆ ಹೋಗುತ್ತದೆ ಎಂಬ ಕಾರಣಕ್ಕೆ ದುರುದ್ದೇಶದಿಂದ ಕಾಂಗ್ರೆಸ್ ಮುಖಂಡರು ಗೂಂಡಾಗಿರಿ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ದ್ವೇಷದ ರಾಜಕಾರಣಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸರ್ಕಾರ ಇದೆ ಎಂಬ ಅಹಂಕಾರದಿಂದ ಎದುರಿಸಬಹುದು ಎಂಬ ಭ್ರಮೆಯನ್ನು ಶಾಸಕರು ಮತ್ತು ಕಾಂಗ್ರೆಸ್ ಮುಖಂಡರು ಕೈಬಿಡಬೇಕು. ಮುಂದುವರಿಸಲು ಯತ್ನಿಸಿದರೆ ಅದಕ್ಕೆ ಬಿಜೆಪಿ ತಕ್ಕ ಪಾಠ ಕಲಿಸುತ್ತದೆ’ ಎಂದು ಹೇಳಿದರು.

ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಪಿ. ವೆಂಕಟೇಶ್, ಮುಖಂಡರಾದ ದಿನೇಶ್ ರಾಜ್ ಅರಸ್, ಶ್ರೀನಿವಾಸ್, ಉಲ್ಲಾಸಗೌಡ, ನಾರಾಯಣ, ಸುಧೀರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-126-843496341

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.