ಚಿಕ್ಕಮಗಳೂರು: ‘ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ₹5,857 ಕೋಟಿ ಅನುದಾನ ಮಂಜೂರು ಮಾಡಿಸಿದ್ದೆ. ಈಗಿನ ಶಾಸಕರು ಕ್ಷೇತ್ರಕ್ಕೆ ₹50ರಿಂದ ₹60 ಕೋಟಿ ಅನುದಾನ ತಂದಿರಬಹುದು ಅಷ್ಟೇ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ರಾಂಪುರದಲ್ಲಿ ರಸ್ತೆ ಕಾಮಗಾರಿ ವೀಕ್ಷಣೆಗೆ ತಡೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗ ಅವರು ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುತ್ತಿರುವ ಕಾಮಗಾರಿಗಳಲ್ಲಿ ಶೇ 95ರಷ್ಟು ಬಿಜೆಪಿ ಅವಧಿಯ ಕಾಮಗಾರಿಗಳು. ಹೊಸ ಯೋಜನೆಗಳು ಶೇ 5ರಷ್ಟು ಮಾತ್ರ’ ಎಂದರು.

‘ಕೆರೆ ತುಂಬಿಸುವ ಯೋಜನೆಗೆ ₹1,281 ಕೋಟಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹1,500 ಕೋಟಿ, ಜಿಲ್ಲಾಧಿಕಾರಿ ಕಚೇರಿಗೆ ₹60 ಕೋಟಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹160 ಕೋಟಿ, ಪ್ರವಾಸೋದ್ಯಮ ಅಭಿವೃದ್ಧಿಗೆ ₹167 ಕೋಟಿ ಮಂಜೂರು ಮಾಡಿಸಿದ್ದೆ’ ಎಂದು ಹೇಳಿದರು.

‘ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿದೆ. 2022ರಲ್ಲಿ ಜಿಲ್ಲೆಗೆ ₹210 ಕೋಟಿ ವಿಶೇಷ ಅನುದಾನ ತಂದಿದ್ದೆ. ರಾಂಪುರ–ಆದಿಶಕ್ತಿ ನಗರ ರಸ್ತೆಗೆ ₹8 ಕೋಟಿ, ನಲ್ಲೂರು ಗೇಟ್ನಿಂದ ತೇಗೂರು–ಮಳಲೂರು ಸರ್ಕಲ್ ತನಕ ರಸ್ತೆ ಅಭಿವೃದ್ಧಿಗೆ ₹8 ಕೋಟಿ ಅನುದಾನ ಮಂಜೂರು ಮಾಡಿಸಿದ್ದೆ’ ಎಂದು ವಿವರಿಸಿದರು.

ರಾಂಪುರ– ಆದಿಶಕ್ತಿ ನಗರ ರಸ್ತೆಯನ್ನು 10 ಮೀಟರ್ ಮಾಡಬೇಕಿತ್ತು. ಆದರೆ, 6ರಿಂದ 7 ಮೀಟರ್ ಅಗಲದಲ್ಲಿ ಇರುವ ಮರ ಮತ್ತು ವಿದ್ಯುತ್ ಕಂಬಗಳನ್ನು ತೆಗೆಯುವ ಅವಕಾಶವನ್ನು ಅಂದಾಜು ಪಟ್ಟಿಯಲ್ಲಿ ಮಾಡಿಕೊಂಡಿರಲಿಲ್ಲ. ಆದ್ದರಿಂದ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಲಾಯಿತು. ಇಂದಿಗೂ ಮರಗಳ ತೆರವು ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯವನ್ನು ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಮಾಡಿಲ್ಲ. ಈ ಕಾರಣದಿಂದ ಕಾಮಗಾರಿ ವಿಳಂಬವಾಗಿದೆಯೇ ಹೊರತು ಬೇರೆ ಕಾರಣಗಳಿಲ್ಲ ಎಂದರು.

‘ನಾನು ಮಂಜೂರು ಮಾಡಿಸಿದ ರಸ್ತೆ ಕಾಮಗಾರಿ ವೀಕ್ಷಣೆ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದರು. ಹೋರಾಟ ಮಾಡುವುದು, ಧಿಕ್ಕಾರ ಕೂಗುವುದನ್ನು ಬಿಜೆಪಿಗೆ ಅವರು ಹೇಳಿಕೊಡುವ ಅಗತ್ಯ ಇಲ್ಲ. ಹೋರಾಟ ಹೇಗೆ ಮಾಡಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಸಹಕಾರ ಕೊಡುತ್ತೇವೆ, ರಾಜಕಾರಣ ಎದುರಿಸುತ್ತೇವೆ’ ಎಂದು ಹೇಳಿದರು.

‘ಚಿಲ್ಲರೆ ರಾಜಕಾರಣಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ನನ್ನ ಹಿಂದೆ ಬಕೆಟ್ ಹಿಡಿದುಕೊಂಡು ತಿರುಗಾಡಿದ ಪೇಮೆಂಟ್ ಗಿರಾಕಿಗಳು ಇವರು. ಪಶ್ಚಿಮ ಬಂಗಾಳದಲ್ಲಿ ತಲೆ ಕಡಿಯುತ್ತೇವೆ ಎನ್ನುವವರ ನಡುವೆ ಬಿಜೆಪಿ ಅಧಿಕಾರಕ್ಕೆ ತಂದು ವಾಪಸ್ ಬಂದಿದ್ದೇನೆ. ಇವರೆಲ್ಲ ನಮಗೆ ಯಾವ ಲೆಕ್ಕ’ ಎಂದರು.

‘20 ವರ್ಷ ಶಾಸಕನಾಗಿದ್ದೆ ಒಂದೇ ಒಂದು ಬಾರ್ ನನ್ನ ಅಥವಾ ನನ್ನ ಸಂಬಂಧಿಕರ ಹೆಸರಿನಲ್ಲಿ ಮಾಡಲಿಲ್ಲ. ಮದ್ಯಪಾನ ವಿರೋಧ ಮಾಡುವವನು ನಾನು. ಈಗಿನ ಶಾಸಕರು ನಾನು ಕುಡಿಯುತ್ತೇನೆ, ನೀವು ಕುಡಿದು ಸಾಯಿರಿ ಎನ್ನುವವರು’ ಎಂದು ಟೀಕಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-126-1777299871

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.