ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪುಢಾರಿಗಳಂತೆ ವರ್ತನೆ ಮಾಡುವುದನ್ನು ಬಿಡಬೇಕು. ಜವಾಬ್ದಾರಿ ಸ್ಥಾನದಲ್ಲಿರುವ ಇವರೇ, ಸಮಾಜದ ಸ್ವಾಸ್ಥ್ಯ ಹಾಳು ಮಾಡಿದರೆ ಹೇಗೆ ಎಂದು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಪ್ರಶ್ನಿಸಿದರು.

‘ನಗರದ ಆದಿಶಕ್ತಿನಗರ ರಸ್ತೆಯ ವಿಚಾರವಾಗಿ ಕಾಂಗ್ರೆಸ್ ನಾಯಕರ ಮೇಲೆ ನಡೆದ ಗೂಂಡಾಗಿರಿ ಘಟನೆ ಖಂಡನೀಯ. ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರಿಗೆ ಈ ರೀತಿಯ ದುರ್ಬುದ್ಧಿ ಬರಬಾರದು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಹತಾಶೆಯಿಂದ ಕೆಟ್ಟ ಪದ ಬಳಕೆ ಮಾಡಿ ಬಾಯಿಗೆ ಬಂದಂತೆ ಮಾತನಾಡಿ ದ್ದಾರೆ. ಇದನ್ನು ಗಮನಿಸಿದರೆ ಮಾನಸಿಕ ಆರೋಗ್ಯ ಏರುಪೇರು ಆಗಿರಬಹುದು ಎಂಬ ಅನುಮಾನ ಮೂಡುತ್ತಿದೆ. ಕಳೆದ ಮೂರು ವರ್ಷಗಳಿಂದ ಚಿಕ್ಕಮಗಳೂರು ಶಾಂತವಾಗಿದ್ದು, ಜನರ ನೆಮ್ಮದಿ ಕೆಡಿಸಬೇಡಿ’ ಎಂದು ಸಲಹೆ ನೀಡಿದರು.

‘ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಅಧಿಕಾರಿಗಳ ಜತೆ ಸಭೆಯಲ್ಲಿ ಚರ್ಚಿಸಿ ಸಲಹೆ ನೀಡಬಹುದಿತ್ತು. ಕಾಮಗಾರಿ ಪೂರ್ಣಗೊಳ್ಳದಿದ್ದರೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುತ್ತಾರೆ ಎಂಬ ಭಯದಿಂದ ಅವರ ರಕ್ಷಣೆಗಾಗಿ ವೀಕ್ಷಣೆ ನೆಪದಲ್ಲಿ ಅಲ್ಲಿಗೆ ಹೋಗಿದ್ದಾರೆ. ಗುತ್ತಿಗೆದಾರನಿಗೂ ನಿಮಗೂ ಏನು ಸಂಬಂಧ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ಇಪ್ಪತ್ತು ವರ್ಷ ಶಾಸಕರಾಗಿ, ಸಚಿವರಾಗಿ ದೇಶದ ತುಂಬಾ ಕೆಲಸ ಮಾಡಿದ್ದೀನಿ ಎಂದು ಹೇಳುವ ನೀವು, ನಗರಸಭೆ ಸದಸ್ಯನ ಮೇಲೆ ಕೈ ಮಾಡಲು ಮುಂದಾಗುವುದು ಎಷ್ಟು ಸರಿ. ಜನ ನಿಮ್ಮನ್ನು ತಿರಸ್ಕರಿಸಿರುವುದು ಸರಿಯಾಗಿಯೇ ಇದೆ’ ಎಂದರು.

‘ಶಾಸಕ ಎಚ್.ಡಿ. ತಮ್ಮಯ್ಯ ಅವರಿಗೆ ಬಕೆಟ್ ಹಿಡಿಯುತ್ತಿದ್ದರು ಎಂದು ಹೇಳುವ ನೀವು, ಯಡಿಯೂರಪ್ಪ ಹಾಗೂ ಆರ್.ಅಶೋಕ್ ಅವರ ಹಿಂದೆ ಬಕೆಟ್ ಹಿಡಿಯಲು ಹೋಗುತ್ತೀರಾ’ ಎಂದು ಪ್ರಶ್ನಿಸಿದರು.

‘ತಮ್ಮಯ್ಯ ನಿಮ್ಮ ಜೊತೆ ಇದ್ದ ಕಾರಣಕ್ಕೆ ಇಷ್ಟು ವರ್ಷ ಅವರ ಸಮುದಾಯದ ಮತ ಪಡೆದು ಗೆಲುವು ಪಡೆಯುತ್ತಿದ್ದೀರಿ ಎಂಬುದನ್ನು ಮರೆಯಬಾರದು. 2008ರಲ್ಲಿ ಬೆಳವಾಡಿ ಕೆರೆ ಸಮೀಪ ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರಿಸಲು ಹೋಗಿ ಸಿಕ್ಕಿಬಿದ್ದವರು ಯಾರು, ಆ ಪ್ರಕರಣದಲ್ಲಿ ಎ–1 ಆಗಿದ್ದ ವರು ಯಾರು, ತಮ್ಮ ಭಾವ ಮೈದುನನ ಪಾತ್ರ ಏನು ಎಂಬುದನ್ನು ಕ್ಷೇತ್ರದ ಜನ ಮರೆತಿಲ್ಲ’ ಎಂದು ಛೇಡಿಸಿದರು.

‘ನಕಲಿ ಮದ್ಯ ತಯಾರಿಸಲು ಹುಬ್ಬಳ್ಳಿ ಯಿಂದ ಬಂದಿದ್ದ ತಂಡಕ್ಕೆ ಜಾಮೀನು ಕೊಟ್ಟು ಬಿಡಿಸಕೊಂಡವರು ಯಾರು. ನಿಮ್ಮ ಸರ್ಕಾರ ಬಂದಾಗ ಪ್ರಕರಣದಲ್ಲಿ ಭಾವಮೈದುನ ಹೆಸರು ಬಿಡಿಸಿ ಜ್ಯೂವೆಲ್ಲರಿ ಮಾಲೀಕನನ್ನು ಜೈಲಿಗೆ ತಳ್ಳಿದವರು ಯಾರು ಎಂಬುದು ಗೊತ್ತಿದೆ. ತಮ್ಮನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಏಕಾಏಕಿ ಕೆಳಗಿಳಿಯಲು ಕಾರಣ ಏನು ಎಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ’ ಎಂದರು.

ಕೆಪಿಸಿಸಿ ನೀತಿ ಸಂಶೋಧನಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್ ನಾಯ್ಡು, ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ಬೆಟ್ಟಗೆರೆ ಪ್ರವೀಣ, ನಗರಸಭೆ ಸದಸ್ಯ ಪರಮೇಶ್ ರಾಜ್ ಅರಸ್, ಪ್ರಕಾಶ್ ರೈ, ಮುಖಂಡರಾದ ನಾಗೇಶ್, ರಾಜೇಶ್, ಶ್ರೀಕಾಂತ್, ಭರತೇಶ್, ನಾಗೇಶ್ ರಾಜ್ ಅರಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-126-1250418302

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.