ಮೂಡಿಗೆರೆ: ತಾಲ್ಲೂಕಿನ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನಗೂಲ್ ಗ್ರಾಮದಲ್ಲಿ ವಾರದಿಂದ ಒಂಟಿ ಸಲಗ ಓಡಾಡುತ್ತಿದ್ದು, ಶನಿವಾರ ಬೆಳಿಗ್ಗೆಯೂ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ದೇವನಗೂಲ್ ಗುಡ್ಡದ ರಸ್ತೆಯಲ್ಲಿ ಬೆಳಿಗ್ಗೆ 7ರ ಸುಮಾರಿಗೆ ಕಾಣಿಸಿಕೊಂಡ ಕಾಡಾನೆಯು, ಸುಮಾರು ಅರ್ಧ ಕಿ.ಮೀ ಹೆಚ್ಚು ರಸ್ತೆಯಲ್ಲೇ ಸಾಗಿದೆ. ಗ್ರಾಮದಲ್ಲಿ ಒಂದು ವಾರದಿಂದ ಒಂಟಿ ಸಲಗ ಕಾಣಿಸಿಕೊಳ್ಳುತ್ತಿದ್ದು, ರಾತ್ರಿ ವೇಳೆ ದಾಳಿ ನಡೆಸಿ, ಬಾಳೆ, ಕಾಫಿ, ಕಾಳು ಮೆಣಸು ಸೇರಿದಂತೆ ಬೆಳೆಗಳನ್ನು ಹಾನಿಗೊಳಿಸುತ್ತಿತ್ತು. ಶನಿವಾರ ಬೆಳಿಗ್ಗೆ ಗುಡ್ಡದಿಂದ ಗ್ರಾಮದತ್ತ ಬಂದ ಕಾಡಾನೆ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಗ್ರಾಮದ ಕಾಫಿ ತೋಟಗಳಲ್ಲಿ ಓಡಾಡಿ ಬೆಳೆ ಹಾನಿಗೊಳಿಸಿದೆ. ಕಾಡಾನೆ ಗ್ರಾಮಕ್ಕೆ ಬಂದಿರುವ ಮಾಹಿತಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕಾಡಾನೆಯನ್ನು ಅರಣ್ಯಕ್ಕೆ ಓಡಿಸುವ ಕಾರ್ಯ ನಡೆಸಿದರು.

‘ಪ್ರತಿ ದಿನ ಕಾಡಾನೆ ಮನೆಯಂಗಳಕ್ಕೆ ಬರುತ್ತಿದೆ. ಮನೆಯ ಹೊರಗೆ ಯಾವುದೇ ವಸ್ತುವನ್ನಿಟ್ಟರೂ ಹಾನಿಗೊಳಿಸುತ್ತದೆ. ಗ್ರಾಮದ ಹಲವರ ನೀರು ತುಂಬುವ ಟ್ಯಾಂಕ್ಗಳನ್ನು ಹಾನಿಗೊಳಿಸಿದೆ. ಹಗಲು ರಾತ್ರಿಯೆನ್ನದೇ ಮನೆಗಳ ಬಳಿಗೆ ಕಾಡಾನೆ ಬರುತ್ತಿರುವುದರಿಂದ ಜನರು ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿದೆ. ಇದರಿಂದ ಕೃಷಿ ಚಟುವಟಿಕೆಗೂ ಅಡ್ಡಿಯಾಗಿದ್ದು, ಸಂಬಂಧಿಕರ ಮನೆಗೂ ತೆರಳಲು ಸಾಧ್ಯವಾಗುತ್ತಿಲ್ಲ. ರಾತ್ರಿಯಾಗುವುದರೊಳಗೆ ಮನೆ ಸೇರ ಬೇಕಿದ್ದು, ಸ್ಥಳೀಯರು ಅನುಭವಿಸುತ್ತಿರುವ ನೋವು ಹೇಳತೀರದಾಗಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು’ ಎನ್ನುತ್ತಾರೆ ದೇವನಗೂಲ್ ಗುಡ್ಡ ಗ್ರಾಮದ ನಿವಾಸಿ ರವಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-126-108559874

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.