ಮೂಡಿಗೆರೆ: ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಗ್ರಾಮದ ಸುತ್ತಮುತ್ತ ಒಂಟಿ ಸಲಗ ಬುಧವಾರ ರಾತ್ರಿ ಓಡಾಡಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯುಂಟಾಗಿದೆ.

ದೇವನಗೂಲ್ ಗ್ರಾಮದ ವೀರಪ್ಪಗೌಡ ಎಂಬುವರ ತೋಟದಲ್ಲಿ ಬಾಳೆಗಿಡಗಳನ್ನು ತುಳಿದು ಹಾಳು ಮಾಡಿದೆ. ಮಂಗಳವಾರ ಕೂಡ ದೇವನಗೂಲ್ ರವಿ ಎಂಬುವರ ಮನೆ ಸುತ್ತಮುತ್ತ ಓಡಾಡಿಕೊಂಡಿದ್ದ ಕಾಡಾನೆ, ಆಚಾರ್ ಕಾಲೊನಿ ಮೂಲಕ ಶಿವಣ್ಣ ಅವರ ಹೋಂಸ್ಟೇ ಹಾಗೂ ವೀರಪ್ಪಗೌಡರ ಮನೆ ಬಳಿ ದಾಂದಲೆ ನಡೆಸಿದೆ. ಇದು ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

ಇನ್ನು ಕಾಡಾನೆಯ ದೇಹದಿಂದ ರಸ್ತೆಯುದ್ದಕ್ಕೂ ರಕ್ತ ಸುರಿದಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಾಡಾನೆಗೆ ದೇಹಕ್ಕೆ ಗಾಯವಾಗಿರಬಹುದು ಎಂದು ಶಂಕಿಸಲಾಗಿದೆ.

ರಾತ್ರಿ ಕಾಡಾನೆ ಸಂಚರಿಸುವುದರಿಂದ ಗಾಯದ ಬಗ್ಗೆ ಮಾಹಿತಿ ತಿಳಿದಿಲ್ಲ. ಆದರೆ, ರಸ್ತೆಯುದ್ದಕ್ಕೂ ಕಾಡಾನೆ ಸಂಚರಿಸಿದ ಕಾರಣ ರಕ್ತ ಸುರಿದ ಕಲೆಗಳಿವೆ. ದೇವನಗೂಲ್ ಗುಡ್ಡ, ಮಲಯ ಮಾರುತ ಮತ್ತಿತರ ಪ್ರದೇಶದಲ್ಲಿ ಈ ಕಾಡಾನೆ ಆಗಾಗ ಪ್ರತ್ಯಕ್ಷವಾಗುತ್ತಿದೆ. ಕಾಡಾನೆಯ ಸಂಚಾರದಿಂದ ಸುತ್ತಮುತ್ತಲ ಗ್ರಾಮಗಳ ಜನ ಭಯಭೀತರಾಗಿದ್ದಾರೆ.

‘ಕಾಡಾನೆ ದೇವನಗೂಲ್ ಗ್ರಾಮದಲ್ಲಿ ಬೀಡು ಬಿಟ್ಟಿರುವುದರಿಂದ ಗ್ರಾಮಸ್ಥರು ಪೇಟೆಗೆ ಹೋಗಲು ಭಯಪಡುವಂತಾಗಿದೆ. ಬುಧವಾರ ರಾತ್ರಿ ನಮ್ಮ ಮನೆ ಬಳಿ ಕಾಡಾನೆ ಬಂದು ಕಾಫಿ ಗಿಡ, ಬಾಳೆ ಗಿಡಗಳನ್ನು ತುಳಿದು ನಾಶ ಮಾಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಕಾಡಾನೆ ಹಿಡಿದು ಸ್ಥಳಾಂತರ ಮಾಡಬೇಕು ಎಂದು ದೇವನಗೂಲ್ ಗ್ರಾಮಸ್ಥ ವೀರಪ್ಪಗೌಡ ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-126-687413399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.