ಚಿಕ್ಕಮಗಳೂರು: ಕರಗಡ ಏತ ನೀರಾವರಿ ಯೋಜನೆಗೆ ಮರು ಜೀವ ಬಂದಿದ್ದು, ಈ ಯೋಜನೆಯ ಭಾಗವಾಗಿರುವ ಯಗಚಿ ಹಳ್ಳದಿಂದ ದೇವಿಕೆರೆಗೆ ನೀರು ಹರಿಸುವ ಕಾಲುವೆ ನಿರ್ಮಾಣಕ್ಕೆ ಸರ್ಕಾರ ₹9.99 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿ ಆರಂಭಿಸಲು ಸಣ್ಣ ನೀರಾವರಿ ಇಲಾಖೆ ಸಿದ್ಧತೆ ನಡೆಸಿದೆ.

ಕರಗಡ ಏತನೀರಾವರಿ ಯೋಜನೆಯ ಮೂಲಕ ದೇವಿಕೆರೆಯಿಂದ ಕಳಸಾಪುರ, ಈಶ್ವರಹಳ್ಳಿ, ತಿಪ್ಪನಾಯಕನ ಕೆರೆಗಳಿಗೆ ಮಳೆಗಾಲದಲ್ಲಿ ನೀರು ಹರಿಸಲಾಗುತ್ತಿದೆ. ದೇವಿಕೆರೆಗೆ ಸಂಗ್ರಹವಾಗುವ ನೀರನ್ನು ಪಂಪ್ ಮಾಡಿ ಕಳುಹಿಸಲಾಗುತ್ತಿದೆ.

ಈ ದೇವಿಕೆರೆಗೆ ಪ್ರಮುಖ ಜಲಮೂಲವೇ ಮುಗುಳುವಳ್ಳಿ ಪಿಕಪ್ ಕಾಲುವೆ. ಹಲವು ದಶಕಗಳ ಹಿಂದೆ ನಿರ್ಮಾಣವಾದ ಈ ಕಾಲುವೆ ಶಿಥಿಲಗೊಂಡಿದ್ದು, ನೀರು ಪೋಲಾಗುತ್ತಿದೆ. ಇದರಿಂದ ದೇವಿಕೆರೆಗೆ ಹರಿಯುವ ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ಮಳೆಗಾಲದಲ್ಲಿ ಬಯಲು ಸೀಮೆಯ ಕಳಸಾಪುರ ಸೇರಿ ವಿವಿಧ ಕೆರೆಗಳಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಯಗಚಿ ಹಳ್ಳದ ನೀರು ದೇವಿಕೆರೆಗೆ ಸರಾಗವಾಗಿ ಹರಿಸುವ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ರೂಪಿಸಿದೆ.

ಯಗಚಿ ಹಳ್ಳಕ್ಕೆ ಮುಗುಳುವಳ್ಳಿ ಸಮೀಪ ಚಿಕ್ಕ ಸೇತುವೆ ನಿರ್ಮಾಣ ಮಾಡಲಾಗಿದೆ. ಇಲ್ಲಿಂದ ಇಬ್ಬಾಗವಾದ ನೀರು, 12 ಕಿಲೋ ಮೀಟರ್ ಕಾಲುವೆಯಲ್ಲಿ ಹರಿದು ದೇವಿಕೆರೆಗೆ ತಲುಪುತ್ತದೆ. ಈ ಪೈಕಿ ಮುಗುಳುವಳ್ಳಿ ಪಿಕಪ್ನಿಂದ ಶಿರಘಟ್ಟ ಕೆರೆ ತನಕದ 8 ಕಿಲೋ ಮೀಟರ್ ಕಾಲುವೆಯನ್ನು ಅಭಿವೃದ್ಧಿಪಡಿಸಲು ಸಣ್ಣ ನೀರಾವರಿ ಇಲಾಖೆ ಉದ್ದೇಶಿಸಿದೆ. ಉಳಿದ 4 ಕಿಲೋ ಮೀಟರ್ ಕಾಲುವೆ ಕಾಮಗಾರಿಯನ್ನು ಜಲಸಂಪನ್ಮೂಲ ಇಲಾಖೆ ಕೈಗೆತ್ತಿಕೊಂಡಿದೆ.

ದೇವಿಕೆರೆಗೆ ಯಗಚಿ ಹಳ್ಳದ ನೀರು ಪ್ರಮುಖ ಜಲಮೂಲವಾಗಿದೆ. ಈ ಕಾಲುವೆ ಅಲ್ಲಲ್ಲಿ ಒಡೆದು ಸಂಪೂರ್ಣ ಹಾಳಾಗಿದೆ. ಕೆಲವೆಡೆ ದೊಡ್ಡ ಕಂದಕಗಳು ನಿರ್ಮಾಣವಾಗಿ ನೀರಿನ ಹರಿವು ಕಡಿಮೆಯಾಗಿದೆ. ಆದ್ದರಿಂದ ಕಾಲುವೆ ಸರಿಪಡಿಸಲು ಸಣ್ಣ ನೀರಾವರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಈ ಪ್ರಸ್ತಾವನೆಯನ್ನು ತಾಂತ್ರಿಕ ಸಲಹಾ ಸಮಿತಿ ಮುಂದೆ ಮಂಡಿಸಿ ಒಪ್ಪಿಗೆ ಪಡೆದ ನಂತರ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ₹9.99 ಕೋಟಿ ಅನುದಾನ ಬಿಡುಗಡೆ ಮಾಡಿದೆ. ತಾಂತ್ರಿಕ ಅನುಮೋದನೆ ಕೂಡ ದೊರೆತಿದ್ದು, ಟೆಂಡರ್ ಪ್ರಕ್ರಿಯೆಯನ್ನು ಇಲಾಖೆ ಆರಂಭಿಸಿದೆ. ಈ ಯೋಜನೆ ಸಕಾಲದಲ್ಲಿ ಪೂರ್ಣಗೊಂಡರೆ ಕಳಸಾಪುರ ಭಾಗದ ಕೆರೆಗಳಿಗೆ ಮಳೆಗಾಲದಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಸಾವಿರ ಎಕರೆ ಪ್ರದೇಶಕ್ಕೆ ಅನುಕೂಲ

ಈ ಕಾಲುವೆಯಿಂದ ಹರಿಯುವ ನೀರಿನಿಂದ ಒಂದು ಸಾವಿರ ಎಕರೆ ಪ್ರದೇಶದ ಕೃಷಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಮಲೆನಾಡಿನ ಸೆರಗಿನಲ್ಲಿ ಇದ್ದರೂ ಚಿಕ್ಕಮಗಳೂರು ತಾಲ್ಲೂಕಿನ ಬಯಲು ಸೀಮೆಯ ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಈ ಕಾಲುವೆ ಅಭಿವೃದ್ದಿ ಪಡಿಸಿದರೆ ಸಾಕಷ್ಟು ರೈತರಿಗೆ ಅನುಕೂಲವಾಗಲಿದೆ. ಅಲ್ಲಲ್ಲಿ ತೂಬುಗಳನ್ನು ಅಳವಡಿಸಿ ರೈತರಿಗೆ ವರ್ಷವೀಡಿ ನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ಯೋಜನೆ ರೂಪಿಸಲಾಗಿದೆ. ಕೆರೆಗಳಲ್ಲಿ ನೀರು ಸಂಗ್ರಹವಾದರೆ ಬೇಸಿಗೆಯಲ್ಲೂ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.

ಕಾಲುವೆ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದ್ದು, ಪೂರ್ಣಗೊಂಡರೆ ದೇವಿಕೆರೆಗೆ ಮಳೆಗಾಲದಲ್ಲಿ ಹೆಚ್ಚಿನ ನೀರು ಹರಿಯಲಿದೆ. ಇದರಿಂದ ಆ ಭಾಗದ ರೈತರಿಗೆ ಅನುಕೂಲವಾಗಲಿದೆ.
ಕೆ.ಇ.ದಕ್ಷಿಣಮೂರ್ತಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-126-505346263

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.