ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರ ದೇವರಮನೆ ತಾಣ ಮನಮೋಹಕವಾಗಿದ್ದು, ಅಲ್ಲಿಗೆ ಸಾಗುವ ದಾರಿ ಮಾತ್ರ ದುರ್ಗಮವಾಗಿದೆ. ರಸ್ತೆ ಅಲ್ಲಲ್ಲಿ ಹೊಂಡದ ರೂಪ ಪಡೆದಿದ್ದು, ವಾಹನ ಚಾಲನೆಗೆ ಸವಾರರು ಪರದಾಡುವ ಸ್ಥಿತಿ ಇದೆ.

ಮಳೆಗಾಲ ಎಂದರೆ ಜಿಲ್ಲೆಗೆ ಪ್ರವಾಸಿಗರು ಲಗ್ಗೆ ಇಡುವ ಕಾಲ. ಮುಂಗಾರು ಪೂರ್ವ ಕೊಂಚ ಮಳೆಯಾಗಿದ್ದರಿಂದ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹಸಿರು ಕಂಗೊಳಿಸುತ್ತಿದೆ. ಮಳೆಗಾಲದ ವಾತಾವರಣ ನಿರ್ಮಾಣ ಆಗಿರುವುದರಿಂದ ದೇವರಮನೆ ಪ್ರವಾಸಿ ತಾಣದ ಸೌಂದರ್ಯವಂತೂ ಇಮ್ಮಡಿಯಾಗಿದೆ. ಆಗಾಗ ಮೋಡದ ನಡುವೆ ತೆರೆದುಕೊಳ್ಳುವ ಗಿರಿ, ಕಂದರಗಳನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.

ಆದರೆ, ಅಲ್ಲಿಗೆ ಸಾಗುವ ರಸ್ತೆ ಪ್ರವಾಸಿಗರನ್ನು ಹೈರಾಣಾಗಿಸುತ್ತಿದೆ. ಮೂಡಿಗೆರೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬಣಕಲ್ನಿಂದ ಸ್ವಲ್ಪ ಮುಂದೆ ಸಾಗಿದರೆ ದೇವರಮನೆ ರಸ್ತೆ ಸಿಗುತ್ತದೆ. ಎಡ ತಿರುವ ಪಡೆದರೆ 12 ಕಿಲೋ ಮೀಟರ್ ದೂರದಲ್ಲಿ ದೇವರಮನೆ ಪ್ರವಾಸಿ ತಾಣ ಸಿಗಲಿದೆ.

ಅಲ್ಲಿಂದ ಕೊಂಚ ದೂರ ಮಾತ್ರ ಹೊಸ ರಸ್ತೆ ಇದ್ದು, ಮುಂದೆ ಸಾಗುವುದು ದುರ್ಗಮ ಹಾದಿ. ಎತ್ತರದ ಪ್ರದೇಶದಲ್ಲಿ ಇರುವುದರಿಂದ ಹಲವೆಡೆ ಮೊದಲ ಗೇರ್ನಲ್ಲಿ ವಾಹನಗಳು ಸಾಗಬೇಕು. ಕಡಿದಾದ ಇಳಿಜಾರಿನ ಪ್ರದೇಶದಲ್ಲೇ ರಸ್ತೆ ಸಂಪೂರ್ಣ ಹಾಳಾಗಿದ್ದು, ಗುಂಡಿ–ಗೊಟರುಗಳಿಂದ ತುಂಬಿ ಹೋಗಿದೆ. ಸಣ್ಣ ಕಾರುಗಳು ಸಾಗಲು ಸಾಧ್ಯವೇ ಆಗದಷ್ಟು ರಸ್ತೆ ಹಾಳಾಗಿದೆ.

ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಚಾಲಕ ಮಾತ್ರ ಕಾರುಗಳನ್ನು ಕೆಲ ದೂರ ಚಾಲನೆ ಮಾಡಬೇಕಾದ ಸ್ಥಿತಿ ಇದೆ. ಅತ್ಯಂತ ಪ್ರಮುಖ ಮತ್ತು ಸೌಂದರ್ಯದ ಪ್ರಕೃತಿ ತಾಣಕ್ಕೆ ರಸ್ತೆ ಸಮರ್ಪಕವಾಗಿ ಇಲ್ಲದಿರುವುದು ಪ್ರವಾಸಿಗರಿಗೆ ಕಿರಿಕಿರಿ ಎನಿಸುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-126-277698052

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.