ಜಯಪುರ: ಹೋಬಳಿಯ ಮಾವಿನ ಹಳ್ಳಿಯ ಜಮೀನಿನಲ್ಲಿ ನಾಟಿ ಮಾಡಿದ್ದ ಹೀರೆಕಾಯಿ, ಹಾಗಲಕಾಯಿ, ಬೀನ್ಸ್ ಸೇರಿದಂತೆ ತರಕಾರಿ ಸಸಿಗಳನ್ನು ಕಾಡು ಪ್ರಾಣಿ ಸಾರಂಗಗಳು ತಿಂದು ಹಾಕಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ.

‘ಮಾವಿನಹಳ್ಳಿ ಶಿವಣ್ಣೇ ಗೌಡರಿಗೆ ಸೇರಿದ ಜಮೀನಿನಲ್ಲಿ ಎರಡು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ತರಕಾರಿ ಸಸಿಗಳನ್ನು ಪೂರ್ತಿ ತಿಂದು ಹಾಕಿದೆ. ₹1.5 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ರೈತರು ದಿನದ 24ಗಂಟೆಯೂ ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ’ ಎಂದು ಸ್ಥಳೀಯ ರೈತರರು ದೂರಿದರು.

‘ಮಾವಿನಹಳ್ಳಿಯ ರೈತರ ಜಮೀನುಗಳಿಗೆ ಸಮೀಪದಲ್ಲಿ ಚಿಕ್ಕನಹಳ್ಳಿ ಕಾಯ್ದಿಟ್ಟ ಮೀಸಲು ಅರಣ್ಯ ಪ್ರದೇಶ ಹೊಂದಿಕೊಂಡಂತೆ ಇದ್ದು, ಇಲ್ಲಿ ಜಿಂಕೆ, ಸಾರಂಗ, ನವಿಲುಗಳು ಹೆಚ್ಚಾಗಿವೆ. ರೈತರು ನಾಟಿ ಮಾಡಿದ ಎಲ್ಲಾ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ರೈತರ ಜಮೀನುಗಳಿಗೆ ಲಗ್ಗೆ ಇಡುವ ಕಾಡುಪ್ರಾಣಿಗಳ ಉಪಟಳ ತಡೆಗಟ್ಟಬೇಕು. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಪರಿಹಾರ ಒದಗಿಸಬೇಕು’ ಎಂದು ಮಾವಿನಹಳ್ಳಿ ರೈತರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-38-1592877407

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.