ಚಿಕ್ಕಮಗಳೂರು: ಬೀನ್ಸ್ ದರ ನಿಗದಿಯಲ್ಲಿ ವರ್ತಕರಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ನಗರದ ಎಪಿಎಂಸಿ ಪ್ರಾಂಗಣದಲ್ಲಿ ರೈತರು ತರಕಾರಿ ಸಾಗಣೆ ತಡೆದು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ನಟೇಶ್ ಮತ್ತು ತಹಶೀಲ್ದಾರ್ ರೇಷ್ಮಾಶೆಟ್ಟಿ ರೈತರ ಸಮಸ್ಯೆ ಆಲಿಸಲು ಪ್ರಯತ್ನಿಸಿದರು. ಆದರೆ, ವರ್ತಕರನ್ನು ಕರೆಸಿ ದರ ನಿಗದಿ ಮಾಡುವಲ್ಲಿ ವಿಫಲರಾದರು. ಇದನ್ನು ಖಂಡಿಸಿ ಎಪಿಎಂಸಿ ಗೇಟ್ ಹಾಕಿದ ರೈತರು, ಸಂಚಾರ ಬಂದ್ ಮಾಡಲು ಯತ್ನಿಸಿದರು. ರೈತರನ್ನು ಚದುರಿಸಿದ ಪೊಲೀಸರು, ತರಕಾರಿ ವಾಹನಗಳನ್ನು ಕಳುಹಿಸಿದರು.

ಮೈಸೂರು ಮಾರುಕಟ್ಟೆಯಲ್ಲಿ ಬೀನ್ಸ್ಗೆ ಕೆಜಿಗೆ ₹80 ರಿಂದ ₹90 ದರ ಇದ್ದರೂ, ಚಿಕ್ಕಮಗಳೂರಿನಲ್ಲಿ ವರ್ತಕರು ₹30 ರಿಂದ ₹40 ಮಾತ್ರ ಹರಾಜು ಕೂಗುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ಇದನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು. ಎಪಿಎಂಸಿ ಗೇಟ್ ಬಂದ್ ಮಾಡಿ ಸ್ಥಳಕ್ಕೆ ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು. ಅಲ್ಲದೇ ಸೂಕ್ತ ದರ ನಿಗದಿ ಮಾಡಿ ಬಳಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಬೇಕು ಎಂದು ಮನವಿ ಮಾಡಿದರು.

ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರು ರೈತರ ಸಮಸ್ಯೆ ಆಲಿಸಿದರು. ವರ್ತಕರನ್ನು ಕರೆಸಿ ಮಾತುಕತೆ ನಡೆಸಲು ಪ್ರಯ್ನಿಸಿದರು. ಆದರೆ, ಯಾವುದೇ ವರ್ತಕರು ಸ್ಥಳಕ್ಕೆ ಬಾರದ ಕಾರಣ ಭಾನುವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಈಗ ತರಕಾರಿ ಲೋಡ್ ಆಗಿರುವ ವಾಹನಗಳನ್ನು ಬಿಡಬೇಕು ಎಂದು ಹೇಳಿದರು.

ಇದಕ್ಕೆ ಒಪ್ಪದ ರೈತರು, ಸಮಸ್ಯೆ ಸರಿಪಡಿಸುವ ತನಕ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಧ್ಯರಾತ್ರಿ ತನಕ ಪಟ್ಟು ಹಿಡಿದರು. ಅಧಿಕಾರಿಗಳ ಸೂಚನೆಯಂತೆ ಬಳಿಕ ಪೊಲೀಸರು ರೈತರನ್ನು ಚುದುರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.