ಚಿಕ್ಕಮಗಳೂರು: ಬೀನ್ಸ್ ದರ ನಿಗದಿಯಲ್ಲಿ ವರ್ತಕರಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ನಗರದ ಎಪಿಎಂಸಿಯಲ್ಲಿ ರೈತರು ಪ್ರತಿಭಟನೆ ಆರಂಭಿಸಿದ್ದು, ಮಂಗಳೂರು, ಉಡುಪಿ, ಮುಂಬೈ, ಬೆಂಗಳೂರು ಸೇರಿ ಎಲ್ಲೆಡೆ ಹೋಗಬೇಕಿದ್ದ ತರಕಾರಿ ವಾಹನಗಳನ್ನು ತಡೆದು ರೈತರು ಶನಿವಾರ ರಾತ್ರಿ ಇಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

ಮಧ್ಯವರ್ತಿಗಳು ಮನಸ್ಸಿಗೆ ಬಂದಂತೆ ದರ ನಿಗದಿ ಮಾಡುತ್ತಿದ್ದಾರೆ ಎಂದು ಅನ್ನದಾತರು ಅಳಲು ತೋಡಿಕೊಂಡರು.ಮೈಸೂರು ಮಾರುಕಟ್ಟೆಯಲ್ಲಿ ಬೀನ್ಸ್ಗೆ ಕೆಜಿಗೆ ₹80 ರಿಂದ ₹90 ದರ ಇದ್ದರೂ, ಇಲ್ಲಿ ಮಧ್ಯವರ್ತಿಗಳು ₹30ರಿಂದ ₹40 ಮಾತ್ರ ಕೂಗುತ್ತಿದ್ದಾರೆ ಎಂದು ಆರೋಪಿಸಿದರು.ಒಂದು ಚೀಲದಲ್ಲಿ 70 ಕೆಜಿ ಬೀನ್ಸ್ ಇದ್ದರೂ, 2 ಕೆಜಿ ಕಡಿಮೆ ಮಾಡಲಾಗುತ್ತಿದೆ. ಒಂದು ಚೀಲ ಕೇವಲ 100 ಗ್ರಾಂ ಕಡಿಮೆ ಬರದಿದ್ದರೂ ಅನ್ಯಾಯವಾಗಿ 2 ಕೆ.ಜಿ ಕಡಿತ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-29-189708083

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.