ಮೂಡಿಗೆರೆ: ‘ಮಿಂಚು ಹುಳಗಳು ಪ್ರಾಕೃತಿಕ ಆರೋಗ್ಯದ ಸೂಚಕಗಳು. ಇವು ಕಣ್ಮರೆಯಾಗುತ್ತಿವೆ ಎಂದರೆ, ಒಂದು ಪ್ರದೇಶದ ಒಟ್ಟಾರೆ ಪರಿಸರ ವ್ಯವಸ್ಥೆ ಕ್ಷೀಣಿಸುತ್ತಿದೆ ಎಂದೇ ಅರ್ಥ’ ಎಂದು ಕೀಟ ತಜ್ಞ ಡಾ. ಅವಿನಾಶ್ ಹೇಳಿದರು.

ಕೊಟ್ಟಿಗೆಹಾರದಲ್ಲಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಮಿತ್ರಾ ಎನ್ವರ್ನ್ಮೆಂಟ್ ಆ್ಯಂಡ್ ವೈಲ್ಡ್ ಲೈಫ್ ಸೊಸೈಟಿ ಸಹಯೋಗದಲ್ಲಿ ನಡೆದ ಮಿಂಚು ಹುಳುಗಳ ಕುರಿತ ವಿಚಾರ ಮಂಥನ, ಸಂವಾದ, ಮಿಂಚು ಹುಳುಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂಚು ಹುಳುಗಳನ್ನು ಮಿಣುಕು ಹುಳಗಳು ಎಂದು ಕರೆಯಲಾಗುತ್ತದೆ. ಇವು ಸೂಕ್ಷ್ಮ ಸಂವೇದನೆಯ ಕೀಟಗಳಾಗಿದ್ದು, ಕೃತಕ ಬೆಳಕಿನ ಅತಿಯಾದ ಅಡಚಣೆ ಹಾಗೂ ಬೆಳಕಿನ ಮಾಲಿನ್ಯದಿಂದಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿರುವುದು ಆತಂಕಕಾರಿ ಸಂಗತಿ. ಹವಾಮಾನ ವೈಪರೀತ್ಯದಿಂದಾಗಿ ಇವುಗಳ ನೈಸರ್ಗಿಕ ಜೀವನ ಚಕ್ರ ಏರುಪೇರಾಗುತ್ತಿದೆ. ಸ್ವಯಂಪ್ರಭೆಯನ್ನು ಹೊರಹೊಮ್ಮಿಸುವ, ವಿಶೇಷ ನೈಸರ್ಗಿಕ ಸಾಮರ್ಥ್ಯ ವೃದ್ಧಿಸಿಕೊಂಡಿರುವ, ಅಪರೂಪದ ಅತ್ಯಲ್ಪ ಜೀವಿಗಳ ಸಾಲಿಗೆ ಸೇರುವ ಈ ಮಿಣುಕು ಹುಳಗಳ ನೈಸರ್ಗಿಕ ಆವಾಸಸ್ಥಾನಗಳು ಇಂದು ಕಳವಳಕಾರಿಯಾಗಿ ಕಣ್ಮರೆಯಾಗುತ್ತಿವೆ ಎಂದರು.

ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಹೆಸರಿನಲ್ಲಿ ಮಾನವನ ಅತಿಯಾದ ಹಸ್ತಕ್ಷೇಪ ಈ ಕೀಟಗಳ ನೈಸರ್ಗಿಕ ಜನನ ಹಾಗೂ ಬದುಕುಳಿಯುವಿಕೆಗೆ ತೊಡಕಾಗುತ್ತಿದೆ. ಮಿಣುಕು ಹುಳಗಳ ಸಂತತಿಯು ಜಾಗತಿಕ ಮಟ್ಟದಲ್ಲಿ ಹಾಗೂ ಪಶ್ಚಿಮ ಘಟ್ಟಗಳಂತಹ ಸೂಕ್ಷ್ಮ ಪರಿಸರ ವಲಯಗಳಲ್ಲಿ ಕ್ಷೀಣಿಸುತ್ತಿರುವುದನ್ನು ತಡೆಯಲು, ಪರಿಸರ ವಿಜ್ಞಾನಿಗಳು ಹಾಗೂ ಕೀಟ ತಜ್ಞರು ಕೆಲವು ಪ್ರಮುಖ ಸಂರಕ್ಷಣಾ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯ ನಿರ್ಮಾಣವಾಗಿದೆ. ಇವುಗಳ ಆವಾಸಸ್ಥಾನಗಳ ರಕ್ಷಣೆ, ಮರುಸ್ಥಾಪನೆಗೆ ಕಾನೂನಾತ್ಮಕವಾಗಿ ನೀತಿ ನಿಯಮಗಳನ್ನು ಜಾರಿಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಮುದಾಯದ ಸಹಭಾಗಿತ್ವದ ಪಾತ್ರ ದೊಡ್ಡದಾಗಿದ್ದು, ಅದರೊಟ್ಟಿಗೆ, ಶಾಲಾ–ಕಾಲೇಜು ಮಕ್ಕಳಲ್ಲಿ ಕೀಟ ಪ್ರಪಂಚದ ಬಗ್ಗೆ ಸೂಕ್ಷ್ಮ ಸಂವೇದನೆಯನ್ನು ಬೆಳೆಸುವುದು ದೀರ್ಘಕಾಲೀನ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಶಿಕ್ಷಕ ಪೂರ್ಣೇಶ್ ಮತ್ತಾವರ ಮಾತನಾಡಿ, ‘ಮಿಂಚು ಹುಳುಗಳು ಪಶ್ಚಿಮ ಘಟ್ಟದ ಸ್ವಾಸ್ಥ್ಯದ ಸೂಚಕಗಳಾಗಿವೆ. ಅವುಗಳ ಸಂಖ್ಯೆ ಕಡಿಮೆಯಾಗಿದೆ ಎಂದರೇ ಪಶ್ಚಿಮ ಘಟ್ಟಗಳ ಆರೋಗ್ಯ ಹದಗೆಡುತ್ತಿರುವುದರ ಸೂಚನೆಯಾಗಿದೆ. ಪಶ್ಚಿಮ ಘಟ್ಟಗಳಿಗೆ ಮಹತ್ವವಾದ ಪಾತ್ರವಿದೆ. ಕೀಟ, ಪಕ್ಷಿ ಮುಂತಾದ ಜೀವ ಸಂಕುಲಗಳ ಆವಾಸಸ್ಥಾನಗಳಾಗಿರುವ ಪಶ್ಚಿಮಘಟ್ಟಗಳು ಮಲಿನಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದರು.

ಲೇಖಕರಾದ ಹಳೆಮನೆ ರಾಜಶೇಖರ್, ಶ್ರೀನಿವಾಸ್, ಜಾನುವಾರು ಅಧಿಕಾರಿ ನವೀನ್ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ ತರುವೆ, ಸುದೀತ್ ಹಾಗೂ ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಜಿರೆ, ಚಿಕ್ಕಮಗಳೂರು, ಮೂಡಿಗೆರೆಯ ಆಸಕ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-126-1166704167

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.