ಚಿಕ್ಕಮಗಳೂರು: ಜಿಲ್ಲೆಗೆ ಪ್ರತ್ಯೇಕ ಎಫ್ಎಂ ಕೇಂದ್ರ ತೆರೆಯಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆಲೋಚಿಸಿದ್ದು, ಜಾಗ ಅಂತಿಮಗೊಳಿಸಲು ತಯಾರಿ ನಡೆಸಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಮೀಪ ಬೆಟ್ಟದ ಮೇಲಿರುವ ಬಿಎಸ್ಎನ್ಎಲ್ ಮೊಬೈಲ್ ಟವರ್ ಸಮೀಪವೇ ಎಫ್ಎಂ ಕೇಂದ್ರ ತೆರೆಯುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಒಲವು ತೋರಿದ್ದಾರೆ.

ಚಿಕ್ಕಮಗಳೂರನ್ನು ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಪ್ರತಿವರ್ಷ ಜಿಲ್ಲೆಗೆ 70ರಿಂದ 80 ಲಕ್ಷ ಜನ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಪ್ರವಾಸೋದ್ಯಮ ಸೇರಿ ಜಿಲ್ಲೆಯ ಮಾಹಿತಿ ಹಂಚಿಕೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಎಫ್ಎಂ ಕೇಂದ್ರ ಇಲ್ಲ.

ಸಾಮಾಜಿಕ ಮಾಧ್ಯಮ ಬೆಳೆಯುತ್ತಿದ್ದರೂ, ಜಿಲ್ಲೆಯ ಮಲೆನಾಡು ಭಾಗದಲ್ಲಿ ರೇಡಿಯೊ ಕೇಳುವ ಶೋತೃಗಳ ಸಂಖ್ಯೆ ಕಡಿಮೆಯಾಗಿಲ್ಲ. ಜಿಲ್ಲೆಗೆ ಪ್ರತ್ಯೇಕ ಎಫ್ಎಂ ರೇಡಿಯೊ ಕೇಂದ್ರ ಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ.

ಶೋಭಾ ಕರಂದ್ಲಾಜೆ ಅವರು ಸಂಸದರಾಗಿದ್ದ ಅವಧಿಯಲ್ಲೂ ಎಫ್ಎಂ ಕೇಂದ್ರ ಸ್ಥಾಪನೆಗೆ ಪ್ರಯತ್ನ ನಡೆದಿತ್ತು. ಒಂದು ಎಫ್ಎಂ ಕೇಂದ್ರ ಕೂಡ ಮಂಜೂರಾಗಿತ್ತು. ನಗರದ ಬಿಎಸ್ಎನ್ಎಲ್ ಕಚೇರಿಯಲ್ಲಿ ಎಫ್ಎಂ ಕೇಂದ್ರ ಸ್ಥಾಪನೆಗೆ ಬೇಕಾದ ಎಲ್ಲಾ ತಯಾರಿ ನಡೆದಿದ್ದವು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಶೃಂಗೇರಿಯಲ್ಲಿ ಹಲವು ವರ್ಷಗಳ ಹಿಂದೆ ಒಂದು ಎಫ್ಎಂ ಕೇಂದ್ರ ಸ್ಥಾಪಿಸಿದ್ದರೂ ಅದು ತಾಂತ್ರಿಕ ಕಾರಣಗಳಿಂದ ಪ್ರಸಾರವಾಗುತ್ತಿಲ್ಲ. ಹೀಗಾಗಿ ಪ್ರತ್ಯೇಕ ಎಫ್ಎಂ ಸ್ಥಾಪನೆಯ ಕನಸು ಹಾಗೇ ಉಳಿದುಕೊಂಡಿತ್ತು. ಈಗ ಮತ್ತೆ ಎಫ್ಎಂ ಆಸೆ ಚಿಗುರೊಡೆದಿದೆ.

ಸಾರ್ವಜನಿಕರಿಂದ ಬೇಡಿಕೆ ಆಧರಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಮೂರು ಕಡೆ ಎಫ್ಎಂ ರೇಡಿಯೊ ಕೇಂದ್ರ ತೆರೆಯಲು ಅವಕಾಶ ಇದೆ. ಸಾಧ್ಯವಾದರೆ ಮೂರು ಕಡೆಯೂ ಅವಕಾಶ ಕಲ್ಪಿಸಲು ಮನವಿ ಮಾಡಿದ್ದಾರೆ.

ಜಿಲ್ಲೆಯ ಪ್ರಮುಖ ಪ್ರವಾಸಿತಾಣವಾದ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸುತ್ತಮುತ್ತಲ ಎತ್ತರದ ಪ್ರದೇಶ, ಕೊಪ್ಪ ತಾಲ್ಲೂಕಿನ ಬಾಳಗಡಿ ಮತ್ತು ಮುಡಿಗೆರೆ ಹ್ಯಾಂಡ್ ಪೋಸ್ಟ್ನಲ್ಲಿ 10 ಕಿಲೋ ವಾಟ್ ಸಾಮರ್ಥ್ಯದ ಎಫ್ಎಂ ಕೇಂದ್ರ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಮಲೆನಾಡಿನ ಹಲವು ಹಳ್ಳಿಗಳಿಗೆ ಮೊಬೈಲ್ ಫೋನ್ ಅಥವಾ ಇನ್ನಾವುದೇ ಸಂಪರ್ಕ ಇಲ್ಲವಾಗಿದೆ. ರೇಡಿಯೊ ಸಂಪರ್ಕ ದೊರೆತರೆ ದಿನನಿತ್ಯದ ಬೆಳವಣಿಗೆ, ಕೃಷಿ ಸೇರಿ ಸರ್ಕಾರದ ಯೋಜನೆಗಳ ಮಾಹಿತಿ ಅವರಿಗೆ ಲಭ್ಯವಾಗಲಿದೆ ಎಂದು ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಈ ಮೂರು ಸ್ಥಳಗಳಲ್ಲಿ ಈಗಾಗಲೇ 40 ಮೀಟರ್ ಎತ್ತರದ ಬಿಎಸ್ಎನ್ಎಲ್ ಟವರ್ ಮತ್ತು ಕಟ್ಟಡ ಸೌಲಭ್ಯವಿದ್ದು, ಇವುಗಳನ್ನೇ ಎಫ್ಎಂ ಕೇಂದ್ರಗಳ ಸ್ಥಾಪನೆಗೆ ಬಳಸಬಹುದು. ಈ ಭಾಗಗಳಲ್ಲಿ ಎಫ್ಎಂ ರೇಡಿಯೊ ಕೇಂದ್ರ ತೆರೆದರೆ ಚಿಕ್ಕಮಗಳೂರು, ಕಡೂರು, ತರೀಕೆರೆ, ಬೇಲೂರು, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ಭಾಗದ ದೂರದ ಗ್ರಾಮಗಳಿಗೆ ಪ್ರಯೋಜನ ದೊರೆಯಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಎಫ್ಎಂ ಉಪಯೋಗ ಏನು: ಜಿಲ್ಲೆಯ ಮಲೆನಾಡು ಭಾಗದ ಬಹುತೇಕ ಹಳ್ಳಿಗಳಿಗೆ ಮೊಬೈಲ್ ಫೋನ್ ನೆಟ್ವರ್ಕ್ ಸಮರ್ಪಕವಾಗಿ ಲಭ್ಯವಿಲ್ಲ. ಇದರಿಂದ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸ ಮಾಡುವ ಜನರ ಸಂಪರ್ಕ ಅಸಾಧ್ಯವಾಗಿದೆ. ಎಫ್ಎಂ ಕೇಂದ್ರ ಸ್ಥಾಪನೆಯಾದರೆ ಈ ಭಾಗಗಳಲ್ಲಿ ವಾಸ ಮಾಡುವ ರೈತರು, ಕೂಲಿ ಕಾರ್ಮಿಕರು ಸೇರಿ ಪ್ರವಾಸಿಗರಿಗೆ ಹವಾಮಾನ ವರದಿ, ಶಿಕ್ಷಣ ಸಂಬಂಧಿತ ಮಾಹಿತಿ ಹಾಗೂ ಅವರ ಮನರಂಜನೆಗೆ ಅನುಕೂಲ ಆಗಲಿದೆ ಎಂದು ವಿವರಿಸಿದ್ದಾರೆ.

ಸ್ಥಳ ಪರಿಶೀಲನೆ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮೂರು ಕಡೆ ಜಾಗ ಗುರುತಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ, ಬಾಬಾಬುಡನ್ಗಿರಿ ಜಾಗದ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಧಿಕಾರಿಗಳು ಒಲವು ತೋರಿಸಿದ್ದಾರೆ.

ಇಲ್ಲಿ ಎಫ್ಎಂ ಕೇಂದ್ರ ಸ್ಥಾಪನೆಯಾದರೆ ಚಿಕ್ಕಮಗಳೂರು ನಗರ, ಕಡೂರು, ತರೀಕೆರೆ, ಲಿಂಗದಹಳ್ಳಿ, ಆಲ್ದೂರು ಸೇರಿ ಮಲೆನಾಡಿ ಹಲವು ಭಾಗಗಳಿಗೆ ಅನುಕೂಲ ಆಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸ್ಥಳ ಪರಿಶೀಲನೆಯನ್ನೂ ಅಧಿಕಾರಿಗಳು ನಡೆಸಿದ್ದು, ಬೇರೆ ಎರಡು ಕಡೆಗಿಂತ ಇದು ಸೂಕ್ತ ಜಾಗ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ನರ ಬೇಡಿಕೆ ಆಧರಿಸಿ ಎಫ್ಎಂ ಕೇಂದ್ರಕ್ಕೆ ಮೂರು ಕಡೆ ಜಾಗ ಗುರುತಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಶೀಘ್ರವೇ ಸ್ಥಾಪನೆಯಾಗುವ ವಿಶ್ವಾಸವಿದೆ

–ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.