ಚಿಕ್ಕಮಗಳೂರು: ಜಾನಪದ ಲೋಕ ಸಂಸ್ಥಾಪಕ ಎಚ್.ಎಲ್. ನಾಗೇಗೌಡ ಮತ್ತು ಜಾನಪದ ಕಲಾವಿದೆ ದಿವಂಗತ ದಾಕ್ಷಾಯಿಣಿಯಮ್ಮ ಅವರ ಸ್ಮರಣಾರ್ಥ ‘ಜಾನಪದ ಅದ್ದೂರಿ ಕಲೋತ್ಸವ ಮತ್ತು ಜಾನಪದ ಕಲಾ ಸಾಧಕರಿಗೆ ಜಾನಪದ ಕಲಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ವತಿಯಿಂದ ಜೂನ್ 7ರಂದು ಬೆಳಿಗ್ಗೆ 10ಗಂಟೆಗೆ ತರೀಕೆರೆ ತಾಲ್ಲೂಕಿನ ತ್ಯಾಗದಬಾಗಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಸುರೇಶ್ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಜಾನಪದ ಕಲಾವಿದ ಅಪ್ಪುಗೆರೆ ತಿಮ್ಮರಾಜು ಅವರು ತರೀಕೆರೆ ತಾಲ್ಲೂಕಿನ ಹೆಸರಾಂತ ಜಾನಪದ ಕಲಾವಿದರಿಗೆ, ಸಾಹಿತಿಗಳಿಗೆ, ಕಲಾಪೋಷಕರಿಗೆ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಜೆ.ಪಿ. ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿ ಹೊಸೂರು ಪುಟ್ಟರಾಜು ಮತ್ತು ಇಮ್ರಾನ್ ಅಹಮದ್ ಬೇಗ್ ಪ್ರಧಾನ ಭಾಷಣ ಮಾಡಲಿದ್ದಾರೆ. ಪರಿಷತ್ತಿನ ತರೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ನಾಗೇಶ್ ಅಧ್ಯಕ್ಷತೆ ವಹಿಸುವರು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-126-1592497831

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.