ಚಿಕ್ಕಮಗಳೂರು: ಅಗಾಧ ಪ್ರಕೃತಿ ಸಂಪತ್ತನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 36,785 ಎಕರೆಯಷ್ಟು ಅರಣ್ಯ ಒತ್ತುವರಿ ಆಗಿದೆ ಎಂದು ಅರಣ್ಯ ಇಲಾಖೆ ಗುರುತಿಸಿದೆ.

ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದಕ್ಕೆ ಅರಣ್ಯ ಒತ್ತುವರಿಯೂ ಕಾರಣ ಎಂಬ ಅಭಿಪ್ರಾಯಗಳಿವೆ.

ಜಿಲ್ಲೆಯಲ್ಲಿ 1,05,993 ಹೆಕ್ಟೇರ್ ಮೀಸಲು ಅರಣ್ಯ, 23,476 ಹೆಕ್ಟೇರ್ ರಕ್ಷಿತ ಅರಣ್ಯ, 607 ಹೆಕ್ಟೇರ್ ಗ್ರಾಮ ಅರಣ್ಯ, 52,359 ಹೆಕ್ಟೇರ್ ಸೆಕ್ಷನ್-4 ಘೋಷಿತ ಅರಣ್ಯ, 30,504 ವರ್ಗಿಕರಿಸಿದ ಅರಣ್ಯ ಸೇರಿ ಒಟ್ಟು 2,12,942 ಹೆಕ್ಟೇರ್ ಅರಣ್ಯ ಪ್ರದೇಶವಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಬಾಸೂರು ಕೃಷ್ಣಮೃಗ ಸಂರಕ್ಷಿತ ಪ್ರದೇಶ, ಎಮ್ಮೆದೊಡ್ಡಿ ಹುಲಿ ಸಂರಕ್ಷಿತ ಪ್ರದೇಶ ಕೂಡ ಇವೆ. ಜಿಲ್ಲೆಯಲ್ಲಿ ಐದು ಜೀವನದಿಗಳ ಉಗಮಕ್ಕೂ ಪಶ್ಚಿಮಘಟ್ಟ ಕಾರಣವಾಗಿದೆ. ಅಷ್ಟೇ ಪ್ರಮಾಣದ ಅರಣ್ಯ ಒತ್ತುವರಿ ಕೂಡ ಜಿಲ್ಲೆಯಲ್ಲಿ ಇದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಜಿಲ್ಲೆಯ ಮೂರು ಅರಣ್ಯ ವಿಭಾಗಗಳಲ್ಲಿ 9,807 ಅತಿಕ್ರಮಣ ಪ್ರಕರಣಗಳನ್ನು ಅರಣ್ಯ ಇಲಾಖೆ ದಾಖಲಿಸಿದೆ. ಕೊಪ್ಪ ವಿಭಾಗದ ವ್ಯಾಪ್ತಿಯಲ್ಲೇ ಅತೀ ಹೆಚ್ಚು 8,342 ಪ್ರಕರಣಗಳಲ್ಲಿ 28,630 ಎಕರೆ ಒತ್ತುವರಿಯಾಗಿದೆ ಎಂದು ಇಲಾಖೆ ಗುರುತಿಸಿದೆ. ಕೊಪ್ಪ ವಿಭಾಗ ವ್ಯಾಪ್ತಿಗೆ ಶೃಂಗೇರಿ, ಕಳಸ, ನರಸಿಂಹರಾಜಪುರ, ಕೊಪ್ಪ ತಾಲ್ಲೂಕು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಸ್ವಲ್ಪ ಭಾಗ ಸೇರಿದೆ. ಇಲ್ಲಿ ಹೆಚ್ಚಿನ ಒತ್ತುವರಿಯಾಗಿದೆ ಎಂದು ಅಂಕಿ–ಅಂಶಗಳು ಹೇಳುತ್ತಿವೆ.

ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ 1,410 ಪ್ರಕರಣಗಳಲ್ಲಿ 7,857 ಎಕರೆ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 56 ಪ್ರಕರಣಗಳಲ್ಲಿ 296 ಎಕರೆ ಒತ್ತುವರಿ ಇದೆ ಎಂದು ಗುರುತಿಸಿದೆ.

ದೊಡ್ಡವರಿಂದ ಒತ್ತುವರಿಯೇ 26 ಸಾವಿರ ಎಕರೆ

ಭೂ ರಹಿತರು ಮೂರು ಎಕರೆಗೂ ಕಡಿಮೆ ಒತ್ತುವರಿ ಮಾಡಿದ್ದರೆ ತೆರವುಗೊಳಿಸದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ. ಜಿಲ್ಲೆಯಲ್ಲಿ 26 ಸಾವಿರ ಎಕರೆಗೂ ಅಧಿಕ ಅರಣ್ಯ ದೊಡ್ಡ ಹಿಡುವಳಿದಾರರಿಂದಲೇ ಒತ್ತುವರಿಯಾಗಿದೆ.

3 ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಒತ್ತುವರಿಯನ್ನು ಇಲಾಖೆ ಪ್ರತ್ಯೇಕವಾಗಿ ಪಟ್ಟಿ ಮಾಡಿದೆ. 6,744 ಸಣ್ಣ ರೈತರು ಜೀವನೋಪಾಯಕ್ಕೆ 10,176 ಎಕರೆ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದಾರೆ.

30 ಎಕರೆಗೂ ಅಧಿಕ ಅರಣ್ಯ ಭೂಮಿ ಅತಿಕ್ರಮಣದ 93 ಪ್ರಕರಣಗಳಿವೆ. 93 ಜನರು ಒಟ್ಟು 6,159 ಎಕರೆ ಅತಿಕ್ರಮಣ ಮಾಡಿದ್ದಾರೆ. ಇದರಲ್ಲಿ ಕೆಲವರು 100ಕ್ಕೂ ಅಧಿಕ ಎಕರೆಯಷ್ಟು ಒತ್ತುವರಿ ಮಾಡಿ, ಬೇಲಿ ಹಾಕಿದ್ದಾರೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 50 ಎಕರೆ ಜಾಗ ಅತಿಕ್ರಮಣವು ಈ ಪಟ್ಟಿಗೆ ಸೇರಿದೆ.

10 ಎಕರೆಯಿಂದ 30 ಎಕರೆ ಒಳಗಿನ ಒತ್ತುವರಿಯ 448 ಪ್ರಕರಣಗಳಿದ್ದು, 7,317 ಎಕರೆ ಒತ್ತುವರಿಯಾಗಿದೆ. 3 ಎಕರೆಯಿಂದ 10 ಎಕರೆ ಒಳಗಿನ ಒತ್ತುವರಿಯ 2,522 ಪ್ರಕರಣಗಳಿದ್ದು, 13,133 ಎಕರೆ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ಅಂಕಿ– ಅಂಶಗಳು ಹೇಳುತ್ತವೆ.

61 ಪ್ರಕರಣಗಳಲ್ಲಿ ತೆರವು

ಅರಣ್ಯ ಇಲಾಖೆಯು ಕಳೆದ 5 ವರ್ಷದಲ್ಲಿ ಜಿಲ್ಲೆಯಲ್ಲಿ 877 ಎಕರೆ ಒತ್ತುವರಿ ಭೂಮಿಯನ್ನು ಮಾತ್ರ ತೆರವುಗೊಳಿಸಿದೆ. ಭದ್ರಾ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ 6 ಪ್ರಕರಣಗಳ ಪೈಕಿ 73 ಎಕರೆ 32 ಗುಂಟೆ ತೆರವಾಗಿದೆ.

ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯ 16 ಪ್ರಕರಣಗಳಲ್ಲಿ 104 ಎಕರೆ, ಕೊಪ್ಪ ವಿಭಾಗದ 39 ಪ್ರಕರಣಗಳಲ್ಲಿ 698 ಎಕರೆ ಒತ್ತುವರಿ ತೆರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.