ಬಾಳೆಹೊನ್ನೂರು: ‘ಚಿಕ್ಕಮಗಳೂರು ಅರಣ್ಯ ವೃತ್ತದ ಕೊಪ್ಪ ಅರಣ್ಯ ವಿಭಾಗದಲ್ಲಿ ಆರೋಗ್ಯವಂತ ಕಾಡು ಕೋಣಗಳನ್ನು (ಕಾಟಿ) ಸೆರೆಹಿಡಿದು ಬೇರೆ ಕಡೆಗೆ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಹೊರಟಿದೆ. ಇದು ಅವೈಜ್ಞಾನಿಕ ಕ್ರಮ ಮತ್ತು ಇದನ್ನು ಕೈಬಿಡಬೇಕು’ ಎಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಈ ಕುರಿತು ಪರಿಸರ ಕಾರ್ಯಕರ್ತ ನಾಗರಾಜ ಕೂವೆ ಪತ್ರ ಬರೆದು, ಕಾಡುಕೋಣ ಸೆರೆ ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

‘ಚಿಕ್ಕಮಗಳೂರಿನ ಅರಣ್ಯಾಧಿ ಕಾರಿಗಳ ತಂಡವೊಂದು ಇತ್ತೀಚೆಗೆ ಮಧ್ಯಪ್ರದೇಶಕ್ಕೆ ಹೋಗಿ ಕಾಟಿ ಸ್ಥಳಾಂತರದ ಬಗ್ಗೆ ಅಧ್ಯಯನ ಮಾಡಿಕೊಂಡು ಬಂದಿದೆ ಎಂಬ ಮಾಹಿತಿಇದೆ. ಅಲ್ಲಿ ಸ್ಥಳಾಂತರ ಯಶಸ್ವಿ ಆಗಿದೆ.ಇಲ್ಲಿಯೂ ಆ ಪ್ರಯೋಗ ಮಾಡಬಹುದು ಎಂದು ಕಾರ್ಯಾಚರಣೆಗೆ ಮುಂದಾಗಿದ್ದಾರೆ’ ಎಂದು ಅವರು ದೂರಿದ್ದಾರೆ.

‘ಪಶ್ಚಿಮ ಘಟ್ಟದಲ್ಲಿ ಎಷ್ಟು ಕಾಟಿಗಳಿವೆ ಅಥವಾ ಎಷ್ಟು ಕಾಟಿಗಳ ಗುಂಪುಗಳಿವೆ ಎಂಬ ಗಣತಿ ಮಾಡಲಾಗಿದೆಯೇ? ಮಧ್ಯಪ್ರದೇಶದ ಪ್ರಯೋಗ ಇಲ್ಲಿ ಯಶಸ್ವಿ ಆಗುತ್ತದೆ ಎಂಬುದಕ್ಕೆ ಖಾತ್ರಿ ಏನು? ಅಲ್ಲಿನ ಭೂಸ್ವರೂಪ, ಸಸ್ಯ ವೈವಿಧ್ಯ, ಮಳೆಪ್ರಮಾಣ ಇತ್ಯಾದಿ ಪಶ್ಚಿಮ ಘಟ್ಟಕ್ಕಿಂತ ಸಂಪೂರ್ಣ ಭಿನ್ನವಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಗಾಯಗೊಂಡ, ಅಂಗವಿಕಲ ಕಾಟಿಗಳನ್ನು ಸೆರೆ ಹಿಡಿದು ಸ್ಥಳಾಂತರಮಾಡುವುದು ಸೂಕ್ತ. ಆರೋಗ್ಯವಂತ ಕಾಟಿಗಳನ್ನು ಸೆರೆಹಿಡಿಯುವುದು ಸರಿಯಲ್ಲ. ಸೆರೆಹಿಡಿದ ಕಾಟಿಗಳನ್ನು ಎಲ್ಲಿ ಒಯ್ದು ಬಿಡುತ್ತಾರೆ ಎಂಬ ಮಾಹಿತಿ ಯನ್ನು ಸಾರ್ವಜನಿಕರಿಗೆ ನೀಡಿಲ್ಲ’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-126-1869407361

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.