ಚಿಕ್ಕಮಗಳೂರು: ಕಳೆದ ವಾರಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಹಣ್ಣುಗಳ ದರ ಸ್ಚಲ್ಪ ದುಬಾರಿಯಾಗಿದೆ. ತರಹೇವಾರಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಆವಕವಾಗಿದ್ದು, ಬೇಡಿಕೆಯೂ ಹೆಚ್ಚಾಗಿದೆ. ಇದರಿಂದಾಗಿ ಬೆಲೆಯೂ ಸ್ವಲ್ಪ ದುಬಾರಿಯಾಗಿದೆ.

ಬಾದಾಮಿ ಮಾವು ಕೆ.ಜಿಗೆ ₹100, ಮಲ್ಲಿಕಾ ₹120, ಕಸಿ ಮಾವು ಕೆ.ಜಿಗೆ ₹80, ಸೀಬೆಹಣ್ಣು ₹140, ದಾಳಿಂಬೆ ₹240, ಮೂಸಂಬಿ ₹120, ಕಿತ್ತಳೆ ₹240, ಸೇಬು ₹300, ಕರಬೂಜ ₹50, ಕಲ್ಲಂಗಡಿ ₹32, ಬಾಳೆಹಣ್ಣು ₹70, ದ್ರಾಕ್ಷಿ ₹150ಕ್ಕೆ ಮಾರಾಟವಾಗುತ್ತಿದೆ.

ತುಮಕೂರು, ತಿಪಟೂರು, ಕೋಲಾರ, ಶ್ರೀನಿವಾಸಪುರ, ಆಂಧ್ರಪ್ರದೇಶದಿಂದ ಜಿಲ್ಲೆಗೆ ಮಾವಿನ ಹಣ್ಣು ಆವಕವಾಗುತ್ತಿದೆ. ಜಿಲ್ಲೆಯಲ್ಲಿ ನಾಟಿ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಮಾವಿನ ಗೊಜ್ಜು, ಸಾಂಬರ್, ಗಸಿ, ಸೀಕರಣೆ ಮಾಡಲು ಉತ್ತಮವಾಗಿದೆ. ಜತೆಗೆ ನಾಟಿ ಔಷಧಿಯ ಗುಣವೂ ಇದೆ. ಪ್ರಸ್ತುತ ನಾಟಿ ಮಾವಿನ ಹಣ್ಣನ ಬೆಲೆ ಕೆ.ಜಿಗೆ ₹80 ಇದೆ.

ಜಿಲ್ಲೆಯಲ್ಲಿ ಮಲಬಾರ್ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು, ಮಲಬಾರ್ ಹಣ್ಣು ಮಾರುಕಟ್ಟೆಗೆ ಬಂದಿಲ್ಲ. ಜೂನ್ನಿಂದ ಆವಕ ಆಗಬಹುದು ಎಂದು ಎ.ಜೆ ಹಣ್ಣಿನ ಅಂಗಡಿ ಮಾಲೀಕ ತಬ್ರೇಜ್ ಹೇಳಿದರು.

ಜಿಲ್ಲೆಯಲ್ಲಿ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಎಳನೀರು ಬೆಲೆ ₹60 ಇದೆ. ಇದೀಗ ಮಳೆ ಕಾಣಿಸಿಕೊಂಡು ವಾತಾವರಣ ಕೊಂಚ ತಂಪಾದರೂ ಎಳನೀರು ಬೆಲೆ ಅಷ್ಟೇ ಇದೆ ಎನ್ನುತ್ತಾರೆ ಅವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-126-1647950583

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.